ಜನರ ಸಮಸ್ಯೆ ಪರಿಹಾರಕ್ಕೆ ನನ್ನ ಮೊದಲ ಆದ್ಯತೆ ಸಚಿವ ಮಂಕಾಳು ವೈದ್ಯ
ಭಟ್ಕಳ : ಹೊನ್ನಾವರ : ಮಂಕಿಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಚಿವ ಮಂಕಾಳು ವೈದ್ಯರು ಜನ ಸ್ಪಂದನಾ ಸಭೇಯನ್ನು ಹಮ್ಮಿಕೊಂಡು ಸಾರ್ವಜನಿಕರು ಕುಂದುಕೊರತೆಯನ್ನು ಆಲಿಸಿದರು
ಹೌದು ವಿಕ್ಷಕರೆ ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜನ ಸಾಮಾನ್ಯರ ಕುಂದುಕೊರತೆಯನ್ನು ಆಲಿಸುವ ನಿಟ್ಟಿನಲ್ಲಿ ಸಚಿವ ಮಂಕಾಳು ವೈದ್ಯರು ಜನಸ್ಪಂದನಾ ಸಭೆಯನ್ನು ಹಮ್ಮಿಕೊಂಡಿದ್ದು ಸ್ಥಳಿಯರ ಸಮಸ್ಯೆಯನ್ನು ಈ ಸಂದರ್ಬದಲ್ಲಿ ಆಲಿಸಿ ಪರಿಹಾರವನ್ನು ಒದಗಿಸಿಕೊಟ್ಟರು
ಈ ಸಂದರ್ಬದಲ್ಲಿ ಸಚಿವರು ಮಾತನಾಡಿ ನನ್ನ ಮೊದಲ ಆದ್ಯತೆ ಶಿಕ್ಷಣ ಕ್ಷೇತ್ರ ಹಾಗು ಜನರ ಸಮಸ್ಯೆಗೆ ಪರಿಹಾರವನ್ನು ಒದಗಿಸುವುದಾಗಿದೆ ಜನರಿಂದ ಆರಿಸಿ ಬಂದ ಮೇಲೆ ಜನಪ್ರತಿನಿದಿಗಳಾದ ನಾವು ಜನ ಸೇವೆಯನ್ನು ಮಾಡಬೇಕು ಜನರ ಸಮಸ್ಯೆ ಪರಿಹಾರಕ್ಕೆ ನಾನು ಹೆಚ್ಚಿನ ಗಮನ ಹರಿಸುತ್ತಿದ್ದೆನೆ ಏನೆ ಸಮಸ್ಯೆಗಳಿದ್ದರು ಸಾರ್ವಜನಿಕರು ನನ್ನ ಜೋತೆ ಮುಕ್ತವಾಗಿ ಮಾತನಾಡ ಬಹುದು ನಾನು ಅದಕ್ಕೆ ಅವಕಾಶವನ್ನು ನೀಡುತ್ತಿದ್ದೆನೆ ಎಂದು ಹೇಳಿದರು