ಶಿರಾಲಿ ಜನತಾ ವಿಧ್ಯಾಲಯದ ಹಳೆ ವಿಧ್ಯಾರ್ಥಿ ವಿಧ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಿ ಜೆ ನಾಯ್ಕ ಅವರಿಗೆ ಶ್ರದ್ದಾಂಜಲಿ

ಭಟ್ಕಳ: ಇತ್ತೀಚಿಗೆ ನಿಧನರಾದ ಶಿರಾಲಿಯ ಪ್ರಸಿದ್ಧ ಉದ್ಯಮಿ, ಶಿರಾಲಿ ಜನತಾ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ದೇವಿದಾಸ ಜೆ. ಕಾಮತ್ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಶಿರಾಲಿ ಜನತಾ ವಿದ್ಯಾಲಯದಲ್ಲಿ ನಡೆಯಿತು.

ಸ್ಥಳೀಯ ಮುಖಂಡರಾದ ಆರ್.ಕೆ.ನಾಯ್ಕ, ಶಿವಾನಂದ ಕಾಮತ್, ಅಣ್ಣಪ್ಪ ಮೊಗೇರ, ಎಮ್.ಡಿ.ಫಕ್ಕಿ, ಪ್ರಾಚಾರ್ಯ ಎ.ಬಿ.ರಾಮರಥ, ಡಿ.ಜೆ.ಕಾಮತ್ ಅವರ ಸಹೋದರ ವಿಜಯ ಕಾಮತ್, ವಿಠ್ಠಲ ದಾಸ ಕಾಮತ್, ಜನತಾ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಸಮಿತಿ ಪರಿವಾರ ಸಂಘಟನೆಗಳ ಅಧ್ಯಕ್ಷ ಶಂಕರ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಪ್ರಮುಖರಾದ ವಿಷ್ಣು ದೇವಾಡಿಗ, ರಾಮರಾಯ ಕಾಮತ್, ಮೃತ ದೇವಿದಾಸ ಕಾಮತ್ ಅವರ ಸಾಧನೆ, ಶಿಕ್ಷಣದ ಬಗ್ಗೆ ಅವರಿಗಿದ್ದ ಪ್ರೀತಿ, ನಿಷ್ಕಲ್ಮಷ ಸಮಾಜ ಸೇವೆಯನ್ನು ಕೊಂಡಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಭಟ್ ಎಲ್ಲರನ್ನೂ ಸ್ವಾಗತಿಸಿದರು. ಅರುಣ ಗೌಡ ವಂದಿಸಿದರು. ಶಿಕ್ಷಕಿ ಮಿತಾ ಉಪಸ್ಥಿತರಿದ್ದರು. ಶಿರಾಲಿ ಜನತಾ ವಿದ್ಯಾಲಯ ಹಳೆ ವಿದ್ಯಾರ್ಥಿಗಳ ಪರಿವಾರ ಸಂಘಟನೆಗಳ ಕಾರ್ಯದರ್ಶಿ ನಟರಾಜ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top