ಭಟ್ಕಳ ತಾಲೂಕ ಪಂಚಾಯತ್‌ ಸಭಾಭವನದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ

ದೇಶಕ್ಕೆ ಮಹಿಳಾ ಸಬಲಿಕರಣ ಬಹುಮುಖ್ಯ : ಹೈಕೊರ್ಟ ವಕೀಲ ರವಿಂದ್ರ

ಭಟ್ಕಳ : ತಾಲೂಕಿನ ಸಭಾಭವನದಲ್ಲಿ ತಾಲೂಕ ಮಟ್ಟದ ಬಾಗಿದಾರರಿಗಾ ಬೇಟಿ ಭಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಮಹೀಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾರವಾರ ಹಾಗು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ನಡೆಸಲಾಯಿತು

ಈ ಸಂದರ್ಬದಲ್ಲಿ ಹೈಕೊರ್ಟ ವಕಿಲರಾದ ರವಿಂದ್ರ ಅವರು ಮಾತನಾಡಿ ಸಮಾಜದಲ್ಲಿ ಈಗಲೂ ಕೂಡ ಮಹಿಳೆಯರನ್ನು ಕಿಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿದೆ ಪುರುಷನ ಜೀವನದ ಪ್ರತಿಯೋಂದು ಘಟ್ಟದಲ್ಲಿ ಮಹಿಳೆ ಮಹತ್ವದ ಪಾತ್ರವನ್ನು ನಿಬಾಯಿಸುತ್ತಾಳೆ ತಾಯಿ ಸಹೋದರಿ ಪತ್ನಿ ಮಗಳು ಹೀಗೆ ಎಲ್ಲಾ ವಿದದಲ್ಲೂ ಲಾಲನೆಪಾಲನೆ ಮಾಡುತ್ತಾಳೆ ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತದೆ ಈ ಹಿನ್ನೆಲೆಯಲ್ಲಿ ಸರಕಾರ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತಂದಿದೆ ಅದು ಬಾಲ್ಯ ವಿವಾಹದ ವಿರುದ್ದ ಕಾನೂನು ಮಹಿಳಾ ದೌರ್ಜನ್ಯದ ವಿರುದ್ದ ಕಾನೂನು ಪೋಕ್ಸೋ ಹೀಗೆ ವಿವಿದ ಕಾನೂನುಗಳು ಇಂದು ಜಾರಿಯಲ್ಲಿದೆ ನಾವು ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು

ತಾಲೂಕ ತಹಶಿಲ್ದಾರ್‌ ತಿಪ್ಪೆ ಸ್ವಾಮಿಯವರು ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಯಾವ ರೀತಿಯಲ್ಲಿ ಕಡಿಮೆಯಾಗುತ್ತಿದೆ ಎನ್ನುವುದರ ಬಗ್ಗೆ ಅರಿವು ಮುಡಿಸಿದರು ಹಾಗು ಬ್ರೂಣ ಲಿಂಗ ಪತ್ತೆ ಮಕಾನೂನು ಬಾಹಿರ ಎಂಬವುದರ ಬಗ್ಗೆ ತಿಳಿಯಪಡಿಸಿದರು

ಈ ಸಂದರ್ಬದಲ್ಲಿ ಸಖಿ ಸೆಂಟರ್‌ ನ ಮಂಜುಳಾ ಅವರು ಮಾತನಾಡಿ ಮಹಿಳಾ ಜಾಗ್ರತಿಯ ಬಗ್ಗೆ ಸರಕಾರ ಯಾವ ಯಾವ ಕಾನೂನುಗಳನ್ನು ಜಾರಿಗೆ ತಂದಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದರು

ಈ ಸಂದರ್ಬದಲಿ ತಾಲೂಕ ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ , ವಿ ಡಿ ಮೊಗೇರ್‌, ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ಸುಶಿಲಾ ಮೊಗೇರ್‌ ಪಿ ಎಸ್‌ ಐ ರನ್ನ ಗೌಡಾ, ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top