ಉತ್ತರ ಕನ್ನಡ ಜಿಲ್ಲೆಯಾಧ್ಯಂತ ಅಯ್ಯೋದ್ಯ ಶ್ರೀ ರಾಮ ಪ್ರತಿಷ್ಟಾಪನಾ ಉತ್ಸವ ಆಚರಣೆ

ಪ್ರಭು ಶ್ರೀ ರಾಮ ಚಂದ್ರ ಇಡಿ ಹಿಂದೂ ಸಮಾಜದ ಆರಾಧ್ಯ ಶ್ರೀರಾಮನ ಹೆಸರಲ್ಲಿ ರಾಜಕೀಯ ಮಾಡಬಾರದು ಸಚಿವ ಮಂಕಾಳ ವೈದ್ಯ

ಕಾರವಾರ: ರಾಮನ ವಿಷಯದಲ್ಲಿ ರಾಜಕಿಯ ಮಾಡುವುದು ತರವಲ್ಲ ರಾಮ ಯಾವುದೇ ಪಕ್ಷಕ್ಕೆ ಸೇರಿದವನಲ್ಲ ರಾಮ ರಾಮನ ಆದರ್ಶ ನಮ್ಮ ಜೀವನವಾಗಬೇಕು ರಾಮನ ಹೆಸರಲ್ಲಿ ಸಮಾಜದ ಶಾಂತಿ ಕದಡಿದರೆ ರಾಮನಿಗೆ ಅಪಚಾರ ಮಾಡಿದಂತೆ ಎಂದು ಉಸ್ತುವಾರಿ ಮಂತ್ರಿ ಮಂಕಾಳು ವೈದ್ಯರು ಹೇಳಿದರು

ಮಂಗಳವಾರ ಅಯ್ಯೋದ್ಯದಲ್ಲಿ ನಡೆದ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಟಾನ ಅಂಗವಾಗಿ ದೇಶ ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ದೇಶವಾಸಿಗಳು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಟಾನ ಕೈಂಕರ್ಯಗಳನ್ನು ಕಣ್ತುಂಬಿಕೊಂಡರು ಉತ್ತರ ಕನ್ನಡ ಜಿಲ್ಲೆಯ ಜನತೆಯು ಶ್ರೀ ರಾಮನ ಪೂಜಾ ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರೀರಾಮನ ಕ್ರಪೇಗೆ ಪಾತ್ರರಾದರು. ಮೀನುಗಾರಿಕಾ ಬಂದರು ಒಳನಾಡು ಜಲ ಸಾರಿಗೆ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಮಂಕಾಳು ವೈದ್ಯರು ಕುಟುಂಬ ಸಹಿತರಾಗಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ ಭಟ್ಕಳ ತಾಲೂಕಿನ ಕರಿಕಲ್‌ ಶ್ರೀ ರಾಮಕ್ಷೇತ್ರವಾದ ಶ್ರೀ ರಾಮ ಧ್ಯಾನ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಭು ಶ್ರೀರಾಮನ ಆಶಿರ್ವಾದವನ್ನು ಪಡೆದು ಮಧ್ಯಾನಃದ ಭೋಜನ ಪ್ರಸಾದವನ್ನು ಸ್ವಿಕರಿಸಿದರು ಹಾಗು ಕುದುರೆ ಬೀರಪ್ಪ ದೇವಸ್ಥಾನದಲ್ಲಿ ಕುಟುಂಬ ಸಹಿತ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದರು ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ

ದೇಶದಲ್ಲಿ ಎಲ್ಲರ ಪರಿಶ್ರಮದಿಂದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಆಗಿದ್ದು ಎಲ್ಲವೂ ಒಳ್ಳೆಯದೇ ಆಗಿದೆ. ರಾಮನ ವಿಷಯವೇ ಬೇರೆ ಪಕ್ಷದ ರಾಜಕಾರಣವೇ ಬೇರೆ. ಕಾಂಗ್ರೇಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷ ಇರಲಿ ರಾಮನ ಹೆಸರಲ್ಲಿ ರಾಜಕೀಯ ಮಾಡಕೂಡದು. ರಾಮನಿಗೆ ಅಪಮಾನ ರೀತಿಯಲ್ಲಿ ಯಾರಾದರೂ ವರ್ತಿಸಿದರೆ ಖಂಡಿತವಾಗಿಯೂ

ರಾಮ ಯಾವತ್ತೂ ಕ್ಷಮಿಸಲ್ಲ ಎಂದ ಅವರು, ರಾಮ ನಮ್ಮವ, ನಾವೆಲ್ಲ ರಾಮನ ಭಕ್ತರು. ಎಲ್ಲರೂ ಸಂತಸ ದಿಂದಲೇ ರಾಮನನ್ನು ನಮಿಸಿ. ರಾಮನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದರೆ ಅವರ ಮನಸ್ಥಿತಿ ಸರಿ ಇಲ್ಲ ಎಂದರ್ಥ, ಎಲ್ಲರೂ ಸಹೋದರ ಭಾವನೆಯಿಂದ ಬಾಳುವುದು ಅಗತ್ಯ. ಸಧ್ಯವೇ ಅಯೋಧ್ಯೆಗೆ ಹೋಗುತ್ತೇನೆ. ರಾಮ ಮಂದಿರ ನಿರ್ಮಾಣಕ್ಕೆ ನಾನೂ ವೈಯಕ್ತಿಕ ಸಹಾಯ ನೀಡಿದ್ದೇನೆ. ಭವ್ಯ ರಾಮಮಂದಿರ ನಿರ್ಮಾಣ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲೆ ಸದಾ ರಾಮನ ರಕ್ಷಣೆ ಇದೆ. ಭಟ್ಕಳದಲ್ಲಿ ರಾಮನನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಲು, ಹಿಂದೂ ಸಂಪ್ರಾಯ ದಂತೆ ಸೇವೆ ಮಾಡಲು ಎಲ್ಲ ಅವಕಾಶ ಮಾಡಿಕೊಟ್ಟಿದ್ದೇನೆ. ಪೂಜೆ, ಮೆರವಣೆಗೆ, ಭಜನೆ ರಾತ್ರಿ ಎಷ್ಟು ಸಮಯಕ್ಕೆ ಬೇಕಾದರೂ ಮಾಡಲಿ ಯಾರು ಕೂಡ ಅಡ್ಡಿಮಾಡಲ್ಲ. ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ನಾನು ರಾಮನ ಕಟ್ಟಾ ಭಕ್ತ, ರಾಮನ ವಿರುದ್ದ ಮಾತನಾಡುವುದನ್ನು ನಾನು ಸಹಿಸಲಾರೆನು ಎಂದು ಹೇಳಿದರು

 ಈ ವೇಳೆ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಸುರೇಶ್ ನಾಯ್ಕ ಸೇರಿದಂತೆ ಸಚಿವರ ಕುಟುಂಬದ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ನಾಮಧಾರಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top