ಭಟ್ಕಳ ಕುದುರೆ ಬೀರಪ್ಪ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕ್ರಷ್ಣಾ ಆಸರಕೇರಿ

೧೬೦೦ ರಲ್ಲಿ ಮೊಟ್ಟಮೊದಲ ಲಕ್ಷದೀಪೋತ್ಸವ ನಡೆದಿದ್ದು ಕೊಲ್ಲುರಲ್ಲಿ. ಇದರ ಮೂಲ ಪುರುಷ ಕೆಳದಿಯ ವೆಂಕಟಪ್ಪ ನಾಯಕ ಆ ಕಾಲದಲ್ಲಿ ಕುದುರೆ ಬೀರಪ್ಪ ಹಾಗೂ ಮುಖ್ಯಪ್ರಾಣ ಹನುಮಂತ ದೇವಸ್ಥಾನವು ಕೆಳದಿ ನಾಯಕರ ಅಧೀನಕ್ಕೆ ಒಳಪಟ್ಟಿತ್ತು. ಈಗ ರಾಮಮಂದಿರ ಲೋಕಾರ್ಪಣೆಗೊಳ್ಳಿತ್ತಿರುವ ಸಂಧರ್ಭದಲ್ಲಿ ಇಲ್ಲಿ ಲಕ್ಷದೀಪೋತ್ಸವ ನಡೆಯುತ್ತಿರುವುದಕ್ಕೆ ಆ ರಾಮನ ಪ್ರೇರಣೆಯ ಕಾರಣವಿರಬಹುದು ಎಂದು ಕುದುರೆ ಬೀರಪ್ಪ ದೇವಸ್ಥಾನದ ಜಿರ್ಣೊದ್ಧಾರ ಸಮಿತಿ ಗೌರವಾಧ್ಯಕ್ಷರಾದ ಅನಂತ ನಾಯ್ಕ ಹೇಳಿದರು.

ಭಟ್ಕಳದ ಚೌಥನಿಯಲ್ಲಿರುವ ಶ್ರೀ ಕುದುರೆಬೀರಪ್ಪ ಹಾಗೂ ಮುಖ್ಯಪ್ರಾಣ ಹನುಮಂತ ದೇವಸ್ಥಾನ ಸಭಾಭವನದಲ್ಲಿ ಜನವರಿ ೧೫ ರಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜನವರಿ ೧೮ ರಿಂದ ೨೨ ರವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕುದುರೆ ಬೀರಪ್ಪ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಕಳೆದ ಒಂದು ತಿಂಗಳಿAದ ಎಲ್ಲರೂ ಸೇರಿ ಸ್ವ ಇಚ್ಛೆಯಿಂದ ಕೆಲಸವನ್ನು ಮಾಡುತ್ತಿದ್ದು ದೀಪೋತ್ಸವಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಇಡೀ ಭಟ್ಕಳವೆ ಎದುರು ನೋಡುತ್ತಿದೆ ಎಂದರು.

ಇನ್ನೂ ಹಿಂದೂ ಮುಖಂಡರಾದ ಕೃಷ್ಣ ನಾಯ್ಕ ಮಾತನಾಡಿ ಈ ಕಾರ್ಯಕ್ರಮದಲ್ಲಿ ಇಡೀ ಹಿಂದು ಸಮಾಜವನ್ನು ಭಾಗಿಯಾಗಿಸುವ ನಿಟ್ಟಿನಲ್ಲಿ ಇಲ್ಲಿರುವ ಎಲ್ಲಾ ಸಮಾಜದ ಅಧ್ಯಕ್ಷರನ್ನು ಐದು ದಿನದ ಕಾರ್ಯಕ್ರಮಗಳಿಗೆ ಅತಿಥಿಗಳನ್ನಾಗಿ ಆಮಂತ್ರಿಸಿದ್ದೇವೆ ಎಂದರು.

ದೇವಸ್ಥಾನದ ಅಧ್ಯಕ್ಷರಾದ ರಾಮಚಂದ್ರ ನಾಯ್ಕ ಮಾತನಾಡಿ ಕಾರ್ಯಕ್ರಮದ ರೂಪುರೆಷೆಗಳನ್ನು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ನಾಗೇಶ ನಾಯ್ಕ, ಯಶೋಧರ ನಾಯ್ಕ, ಚಂದ್ರು ನಾಯ್ಕ, ಪ್ರಸಾದ್ ಪೂಜಾರಿ, ಲೋಕೇಶ ನಾಯ್ಕ ಮತ್ತಿತರರು ಭಾಗಿಯಾಗಿದ್ದರು.

WhatsApp
Facebook
Telegram
error: Content is protected !!
Scroll to Top