ಗ್ಯಾರಂಟಿಗಳ ನಡುವೆಯೂ ಸರಕಾರದಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ

ಭಟ್ಕಳದಲ್ಲಿ ಕಟ್ಟಡ ಕಾರ್ಮಿಕರ ಹೆಸರಲ್ಲಿ ದಲ್ಲಾಳಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಕಾರ್ಮಿಕರಿಗೆ ಅನ್ಯಾಯವಾದರೆ ಸಹಿಸಲಾರೆ ಸಚಿವ ಮಂಕಾಳು ವೈದ್ಯ

ಭಟ್ಕಳ: 6 ಪ್ರಮುಖ ಗ್ಯಾರಂಟಿ ಘೋಷಣೆಗಳ ನಡುವೆಯೂ ಸರಕಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಆಡಳಿತ ಸೌಧದಲ್ಲಿ ಇರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲ 13 ತಾಲೂಕುಗಳಲ್ಲಿ ಪಶು ಸಂಗೋಪನಾ ಇಲಾಖೆಗೆ ಸಂಚಾರಿ ಅಂಬುಲೆನ್ಸ್ ಒದಗಿಸಲಾಗಿದೆ. ಎಲ್ಲಿಯೇ ಸಾಕು ಪಾಣಿಗಳಿಗೆ

ಅಪಾಯ ಎದುರಾಗಿದ್ದರೂ 1962 ನಂಬರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಇಲ್ಲಿನ ಸಾಗರರೋಡ್ ಅಭಿವೃದ್ಧಿಗೆ 30 ಕೋಟಿ ರುಪಾಯಿ ಅನುದಾನ ನೀಡಲಾಗಿದ್ದು, ಹೆದ್ದಾರಿಯ ಎರಡೂ ಕಡೆ ವಿದ್ಯಾರ್ಥಿಗಳಿಗೆ ನಡೆದಾಡಲು ಕಾಲು ದಾರಿ ನಿರ್ಮಿಸಲಾಗುವುದು. ಬೆಳಕೆ ತೋಟಗಾರಿಕಾ ಪ್ರದೇಶ ಇನ್ನೂ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಸೂಕ್ತ ಕ್ರಮ ಜರುಗಿಸಲಾಗುವುದು. ಆ ನಿವೇಶನದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು. ಇನ್ನು ಅಧಿಕಾರಿಗಳಿಗೆ ನಿಮ್ಮಿಂದ ಕೆಲಸ ಆಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಲಿದ್ದೇನೆ. ಮಾಡದಿದ್ದಲ್ಲಿ ಜಿಲ್ಲೆಯಿಂದಲೇ ಕೆಲಸದಿಂದ ಹೊರ ಹಾಕಲಿದ್ದೇನೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಕಚೇರಿಯ ಸಮಯಕ್ಕೂ ಮೊದಲೆ ತೆರಳುತ್ತಾರೆಂದು ಕೆಲ ಜನರು ನಿಮ್ಮ ಬಗ್ಗೆ ದಾಖಲೆ ಸಹಿತ ದೂರುಗಳು ನಮ್ಮ ಬಳಿ ಬರುತ್ತಲಿವೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯ” ವಿಲ್ಲ. ಇದು ಕೊನೆಯ ಎಚ್ಚರಿಕೆ ಎಂದು ಹೇಳಿದ ಅವರು ಉಸ್ತುವಾರಿ ಸಚಿವರೇ ಸಭೆಗೆ ಕರೆದರು ಸಮಯಕ್ಕೆ ಸರಿಯಾಗಿ ಬಾರಲು ಆಗದಿದ್ದ ಮೇಲೆ ಅಂತಹವರನ್ನು ಹೊರಗಡೆ ಇರಬೇಕು ಎಚ್ಚರಿಸಿದರು. ಮರು ನೆನಪಿಸಿದ ಸಚಿವ ವೈದ್ಯ ಅವರು ಜನರ ಅಧಿಕಾರಿಗಳ ಬಗ್ಗೆ ದೂರುಗಳಿವೆ. ಇನ್ನಾದರು ಎಚ್ಷೆತ್ತುಕೊಳ್ಳಿ ಎಂದು ಹೇಳಿದರು

ತಾಲೂಕಿನ ಕಾರ್ಮಿಕ ಇಲಾಖೆ ಅಧಿಕಾರಿ ತಮ್ಮ ಇಲಾಖೆಯ ವರದಿ ಮಂಡಿಸುವ ಸಂದರ್ಬದಲ್ಲಿ ಕಟ್ಟಡ ಕಾರ್ಮಿಕರ ಅಭಿವೃದ್ದಿ ಮಾರ್ಗದಲ್ಲಿ ದಲ್ಲಾಳಿಗಳು ಹುಟ್ಟಿಕೊಂಡಿರುವ ಬಗ್ಗೆ ತಾಲೂಕಿನಲ್ಲಿ ಕಾರ್ಮಿಕರ ಆಕ್ರೋಶಗಳು ಕೇಳಿಬರುತ್ತಿದೆ ಈ ಬಗ್ಗೆ ಭಟ್ಕಳ ಕಾರ್ಮಿಕ ಇಲಾಖೆ ಮನ್ನೆಚ್ಷರಿಕೆಯನ್ನು ವಹಿಸಬೇಕು ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾದರೆ ನಾನು ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯ ಮಾತನ್ನು ತಾಲೂಕ ಕಾರ್ಮಿಕ ನಿರಿಕ್ಷಕರಿಗೆ ಹೇಳಿದರು

WhatsApp
Facebook
Telegram
error: Content is protected !!
Scroll to Top