ಪಡುಶಿರಾಲಿಯಲ್ಲಿ ಎಮ್ ಎಸ್ ಐ ಎಲ್ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ

ಭಟ್ಕಳ ತಾಲೂಕಿನ ಪಡುಶಿರಾಲಿಯಲ್ಲಿ ಎಮ್ ಎಸ್ ಐ ಎಲ್ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಪಡುಶಿರಾಲಿಯ ಗ್ರಾಮಸ್ಥರು ಜನವರಿ 2 ರಂದು ಬೆಂಗ್ರೆ ಗ್ರಾಮ ಪಂಚಾಯತ್ ಕಾರ್ಯಾಲಯದ ಎದುರು ಜಮಾವಣೆಗೊಂಡು ಮನವಿಯನ್ನು ನೀಡಿದರು.

ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಚಿಕ್ಮನೆ ಮತ್ತು ಬೇಂಗ್ರೆ ಪಂಚಾಯತ್ ಅಧ್ಯಕ್ಷರಾದ  ಪ್ರಮೀಳಾ ಆಂಥೋನಿ ಡಿಕೋಸ್ತಾರಿಗೆ ಮನವಿ ನೀಡಿದ ಸ್ಥಳಿಯರು ಯಾವುದೇ ಕಾರಣಕ್ಕೂ ಉದ್ದೇಶಿತ ಜಾಗದಲ್ಲಿ ಮಧ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು

ಈ ಹಿಂದೆ ಅದೇ ಜಾಗದಲ್ಲಿ ಅದೇ ಹೆಸರಿನಲ್ಲಿ ಎಮ್ ಎಸ್ ಐ ಎಲ್ ಮದ್ಯದಂಗಡಿಯನ್ನು ತೆರೆಯಲು ನೀರಾಪೇಕ್ಷಣಾ ಅರ್ಜಿಯನ್ನು ಸಲ್ಲಿಸಲಾಗಿತ್ತು ಇದರ ವಿರುದ್ಧ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಹಿನ್ನೆಯಲ್ಲಿ ಗ್ರಾಮ ಪಂಚಾಯತ್ ನೀರಪೇಕ್ಷಣಾ ಪತ್ರವನ್ನು ನೀಡಿರಲಿಲ್ಲ. ಆದರೆ ಈಗ ಮತ್ತೊಮ್ಮೆ ನೀರಾಪೇಕ್ಷಣಾ ಪತ್ರಕ್ಕಾಗಿ ನೀಡಿದ ಅರ್ಜಿಯನ್ನು ಪಂಚಾಯತ್ ಸ್ವೀಕರಿಸಿದೆ. ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಈ ಕ್ರಮ ಒಪ್ಪತಕ್ಕದ್ದಲ್ಲ. ಅಲ್ಲದೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಹಾಗೂ ದೇವಸ್ಥಾನವು ಕೂಡ ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಜಾಗಕ್ಕೆ ಅತ್ಯಂತ ಹತ್ತಿರವೆ ಇದೇ ಆದರೂ ಕೂಡ ಪಂಚಾಯತ್ ನೀರಾಪೇಕ್ಷಣಾ ಪತ್ರಕ್ಕಾಗಿ ನೀಡಿದ ಅರ್ಜಿಯನ್ನು ಪಡೆದುಕೊಂಡು ಸಾರ್ವಜನಿಕರ ಆಕ್ಷೇಪಣೆಗಾಗಿ ನೋಟಿಸ್ ಲಗತ್ತಿಸಿದೆ ಇದರಿಂದ ನಾವು ಪದೇ ಪದೇ ಕೆಲಸ ಬಿಟ್ಟು ಮನವಿ ಕೋಡುವ ಪರಿಸ್ಥಿತಿ ತಲೆದೋರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಅರ್ಜಿಯನ್ನು ಸ್ವೀಕರಿಸಿ ಮಾತನಾಡಿದ ಬೇಂಗ್ರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಡಿಕೊಸ್ತಾ ನಮ್ಮ ನಿಲುವು ಕೂಡ ಮದ್ಯದಂಗಡಿಯನ್ನು ತೆರೆಯುವುದರ ವಿರುದ್ಧವೆ ಇದೆ ಆದರೆ ಬಂದ ಅರ್ಜಿಯನ್ನು ಸ್ವೀಕರಿಸಿ ಅದನ್ನು ಕ್ರಮಬದ್ಧವಾಗಿ ಸಾಮಾನ್ಯ ಸಭೆಯಲ್ಲಿಟ್ಟು ಚರ್ಚಿಸಿ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸಲಾಗಿತ್ತು ಎಂದರು

WhatsApp
Facebook
Telegram
error: Content is protected !!
Scroll to Top