ಭಟ್ಕಳ ಏಜುಕೇಷನ್ ಟ್ರಸ್ಟ್ ನ ಗ್ರಂಥಾಲಯ ಮತ್ತು ವರ್ಗ ಕೊಠಡಿಗಳ, ಪ್ರಯೋಗಾಲಯಗಳ ಉದ್ಗಾಟನೆ

ನಾವು ಪ್ರಯತ್ನಪಟ್ಟು ಗೆಲುವನ್ನು ಸಾಧಿಸಬೇಕು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ಥಗಾಳಿ ಜೀವೊತ್ತಮ ಮಠದ ಶ್ರೀಗಳಾದ ಪರಮಪೂಜ್ಯ ಶ್ರೀ ಮದ್ ವಿದ್ಯಾಧೀಶತಿರ್ಥ ಶ್ರೀಪಾದ ಸ್ವಾಮೀಜಿಗಳು ಹೇಳಿದರು.

ಭಟ್ಕಳದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಭಟ್ಕಳ ಏಜುಕೇಷನ್ ಟ್ರಸ್ಟ್ ನ ಗ್ರಂಥಾಲಯ ಮತ್ತು ವರ್ಗ ಕೊಠಡಿಗಳ, ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ನಾವು ಹೆಚ್ಚು ಹೆಚ್ಚು ಓದಿ ಜ್ಞಾನವನ್ನು ಸಂಪಾದಿಸಬೇಕು ಅಕ್ಬರ್ ಮಹಾರಾಜರ ಕಥೆ ಓದುವಾಗ ಬಿರಬಲ್ ನಿಗೆ ಮಹತ್ವವನ್ನು ನೀಡಲಾಗುತ್ತದೆ ಯಾಕೆಂದರೆ ಅವನಲ್ಲಿ ಅಪಾರ ಜ್ಞಾನವಿತ್ತು ಎಂದರು. ಯಾವುದೇ ಕೆಲಸವನ್ನ ನಾವು ಕೀಳಾಗಿ ಕಾಣಬಾರದು ಎಲ್ಲಾ ಕೆಲಸಕ್ಕೂ ನಾವು ಗೌರವವನ್ನು ನೀಡಬೇಕು. ಓದಿನಲ್ಲಿ ಹಿಂದೆ ಇದ್ದು ಅತ್ಯುತ್ತಮವಾಗಿ ಕ್ರಿಕೇಟ್ ಆಡುವವನ ಆಟವನ್ನು ಪಿ ಎಚ್ ಡಿ ಮಾಡಿದವರು ನೋಡುತ್ತಾರೆ. ವಿದ್ಯೆಯೊಂದಿಗೆ ವಿನಯವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು ಎಂದರು. ಮನೆಯಲ್ಲಿರುವ ಹಣ, ವಜ್ರ, ವೈಡೂರ್ಯ ಬಂಗಾರ ಇವನ್ನೆಲ್ಲಾ ಯಾರಾದರೂ ದೋಚಿಕೊಂಡು ಹೋಗಬಹುದು ಆದರೆ ನಿಮ್ಮಲ್ಲಿರುವ ವಿದ್ಯೆಯನ್ನು ಯಾರು ಕದಿಯಲಾಗದು ಎಂದರು. ವಿದ್ಯೆ ಇತರ ವಸ್ತುವಿನಂತಲ್ಲ ನಮ್ಮಲ್ಲಿರುವ ವಿದ್ಯೆಯನ್ನು ನಾಲ್ಕು ಜನರಿಗೆ ಕಲಿಸಿದಾಗ ಅದು ಹೆಚ್ಚಾಗುತ್ತ ಹೋಗುತ್ತದೆ ಎಂದರು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಶ್ರೆಷ್ಠ ವ್ಯಕ್ತಿಗಳಾಗಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ಸುರೇಶ ನಾಯಕ್, ರಾಜೇಶ ನಾಯಕ್, ರಮೇಶ ಖಾರ್ವಿ, ಎನ್ ಜಿ ಕೊಲ್ಲೆ ಮತ್ತಿತರರು ಭಾಗಿಯಾಗಿದ್ದರು.

WhatsApp
Facebook
Telegram
error: Content is protected !!
Scroll to Top