ಆಟೋ ಕಾರು ಅಪಘಾತ ಓರ್ವ ಮಹಿಳೆ ಸಾವು ನಾಲ್ವರು ಗಂಬಿರ

ಶಿರಸಿ : ಕಾರು ಹಾಗೂ ಆಟೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡು ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಡಳ್ಳಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಶಾಲಾಕ್ಷೀ (55) ಎಂಬುವವರೆ ಮೃತಪಟ್ಟ ಮಹಿಳೆಯಾಗಿದ್ದಾರೆ..ಅಟೋದಲ್ಲಿದ್ದ ಆಶೋಕ ಶಿರಾಲಿ (52) ನಿಲೇಕಣಿ, ತ್ರೀಶಾ ಅಶೋಕ ಶಿರಾಲಿ(9), ಅನಿತಾ ಅಶೋಕ ಶಿರಾಲಿ (40) ,ಆದರ್ಶ ಅಶೋಕ ಶಿರಾಲಿ (18), ಹಾಗು ಅಪರಂಜಿತ (45) ಗಾಯಗೊಂಡವರಾಗಿದ್ದಾರೆ.

ಕಾರು ಜೋಗ ಕಡೆಯಿಂದ ಶಿರಸಿ ಕಡೆ ಬರುತ್ತಿದ್ದ ವೇಳೆ ಶಿರಸಿ ಕಡೆಯಿಂದ ಸಿದ್ದಾಪುರ ಕಡೆ ಚಲಿಸುತ್ತಿದ್ದ ಆಟೋ ಒಂದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮಹಿಳೆ ಓರ್ವಳು ಮೃತಪಟ್ಟಿದ್ದಾರೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp
Facebook
Telegram
error: Content is protected !!
Scroll to Top