ಗಂಗೋಳ್ಳಿ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್ಗಳಿಗೆ ಬೆಂಕಿ

ಲಕ್ಷಾಂತರ ನಷ್ಟ : ಮೀನುಗಾರರಿಗೆ ದೈರ್ಯ ತುಂಬಿದ ಸಚಿವ ಮಂಕಾಳ ವೈದ್ಯ

ಉಡುಪಿ: ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ಬೋಟ್ಗಳಿ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಸಂಬವಿಸಿದ್ದು ಸ್ಥಳಕ್ಕೆ ಸಚಿವ ಮಂಕಾಳ ವೈದ್ಯರು ಬೇಟಿ ನೀಡಿ ನಷ್ಟ ಅನುಭವಿಸುತ್ತಿರುವ ಮೀನುಗಾರರಿಗೆ ಪರಿಹಾರದ ಬಗ್ಗೆ ಬರವಸೆಯನ್ನು ನೀಡಿದರು

ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ದೀಪಾವಳಿ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಂಟು ಮೀನುಗಾರಿಕಾ ಬೋಟ್ ಗಳು,ಎರಡು ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಸುಟ್ಟು ಭಸ್ಮವಾಗಿವೆ.

ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿತು.ಆಕಸ್ಮಿಕ ಬೆಂಕಿ ಅನಾಹುತದಿಂದ 5 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಬಂದ ಮೀನುಗಾರರು

ಕಣ್ಣೀರು ಹಾಕಿದ್ದಾರೆ. ಅನ್ನ ನೀಡುತ್ತಿದ್ದ ಮೀನುಗಾರಿಕಾ ಬೋಟುಗಳು ಕಣ್ಣೆದುರಲ್ಲೇ ಸುಟ್ಟು ಕರಕಲಾಗಿವೆ. ಮರದಿಂದ ನಿರ್ಮಾಣ ಮಾಡಿದ ಬೋಟುಗಳು ಆಗಿರುವ ಕಾರಣಕ್ಕೆ ಬೆಂಕಿ ಒಮ್ಮೆಲೆ ಹೊತ್ತಿಕೊಂಡಿತ್ತು. ಆದರೆ ಘಟನೆಗೆ ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ

ಈ ಸುದ್ದಿ ತಿಳಿದ ಕೆಲವೇ ಸಮಯದಲ್ಲಿ ತಮ್ಮ ಎಲ್ಲಾ ಕೆಲಸ, ಕಾರ್ಯವನ್ನು ಬದಿಗೊತ್ತಿ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಮೀನುಗಾರರಿಗೆ ಧೈರ್ಯ ತುಂಬಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯ ಘಟನೆ ಬಗ್ಗೆ ಈಗಾಗಲೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹಾನಿಯಾದ ಬೊಟ್ ಗಳಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

WhatsApp
Facebook
Telegram
error: Content is protected !!
Scroll to Top