ಗೊಂಡ ಸಮುದಾಯದ ಜಾನಪದ ಪ್ರತಿಭೆ ಕಾಳಜ್ಜಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕಾರವಾರ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಇಂದಿಗೂ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿಯೇ ಗುರುತಿಸಿಕೊಂಡಿರುವ ಗೊಂಡ ಬುಡಕಟ್ಟು ಜನಾಂಗಕ್ಕೆ ಸೇರಿರುವ ಕಾಳಿ ಗೊಂಡ ಅವರು ಜಾನಪದ ಹಾಡುಗಳ ಮೂಲಕ ಬುಡಕಟ್ಟು ಜನಾಂಗದ ಜೀವಂತಿಕೆಯನ್ನು ಪ್ರತಿನಿಧಿಸುತ್ತಿರುವ ಅಪರೂಪದ ಸಾಧಕಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

15 ನೇ ವಯಸ್ಸಿನಲ್ಲಿ ಮದುವೆಯಾಗಿ 8 ಮಕ್ಕಳಿಗೆ ತಾಯಿಯಾಗಿ ಬಡತನದ ಬೇಗುದಿಯಲ್ಲೂ ಯಾವುದೇ ಬೇಸರವಿಲ್ಲದೆ ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ದಣಿವರಿಯದೇ ದುಡಿಯುತ್ತಾ 75 ವಸಂತಗಳನ್ನು ಆರೋಗ್ಯಪೂರ್ಣವಾಗಿ ಕಳೆದಿರುವ ಕಾಳಿ ಸಂಕಯ್ಯ ಗೊಂಡ ಅವರಿಗೆ ಹತ್ತು ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಜಾನಪದ ಲೋಕದ ಸಾಧನೆಯ ಪಥದಲ್ಲಿ ನಿಸ್ವಾರ್ಥದಿಂದ ದೃಢವಾದ ಹೆಜ್ಜೆಗುರುತುಗಳನ್ನು ಮೂಡಿಸಿರುವ ಸಾಧಕಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಉತ್ತರಕನ್ನಡ ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ

ಕಾಡಿನ ನಡುವೆ ಕಳೆದುಹೋಗಿರುವ ಸಮುದಾಯದಿಂದ ಬಂದು ಹಾಡುಗಳ ಮೂಲಕ ಮೋಡಿ ಮಾಡುವ ಕಾಳಜ್ಜಿಯದು ಶಾಲೆ ಕಾಲೇಜುಗಳಲ್ಲಿ ಸಾಣೆ ಹಿಡಿದ ಪ್ರತಿಭೆಯಲ್ಲ. ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಬೆಳೆದ ಮನಸ್ಸಿನಲ್ಲಿ ನಿರ್ಮಲ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ದ್ವನಿಯಾಗುವ ತಾನು ನೋಡಿದ, ಕೇಳಿದ ಜಾನಪದ, ಪೌರಾಣಿಕ ಕಥನಗಳನ್ನೇ ಹಾಡಿನ ರೂಪದಲ್ಲಿ ಕಟ್ಟಿಕೊಡುವ ಆಶು ಕವಿಯ ಸಾಮರ್ಥ್ಯವನ್ನು ಪಡೆದಿರುವ ಕಾಳಜ್ಜಿ 800 ಕ್ಕೂ ಹೆಚ್ಚು ಹಾಡುಗಳನ್ನು ತನ್ನ ಸ್ಮೃತಿ ಪಟಲದಲ್ಲಿ ಕಾಪಿಟ್ಟುಕೊಂಡು ನಡೆದಾಡುವ ಜಾನಪದ ವಿಶ್ವಕೋಶದಂತೆ ಗೋಚರಿಸುತ್ತಿದ್ದಾಳೆ.

ಶೋಭಾನೆ ಹಾಡು, ಸೀಮಂತದ ಹಾಡು, ಗೃಹಪ್ರವೇಶದ ಹಾಡು, ಹರಿಸೇವಾ ಕಾರ್ಯದ ಹಾಡು, ದಿಂಡು ಹಾಡು, ಮಹಾಭಾರತ, ರಾಮಾಯಣದ ಕಥೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆಧುನಿಕತೆಯ ಭರಾಟೆಯಲ್ಲಿ ಸ್ಥಳಿಯ ಆಚಾರ ವಿಚಾರಗಳು, ಸಂಸ್ಕೃತಿ ಸಂಪ್ರದಾಯಗಳು ಮರೆಯಾಗುತ್ತಿದೆ ಎನ್ನುವ ಆತಂಕದ ನಡುವೆ ಕಾಳಜ್ಜಿಯಂತವರು ಭರವಸೆಯಾಗಿ ನಿಲ್ಲುತ್ತಾರೆ.

ಕಾಳಜ್ಜಿಗೆ ಇಂದು ದೊರೆತ ಪ್ರಶಸ್ತಿ ಹಳಿಯ ಹೂ ಜಾನಪದ ಕಲೆಗೆ ದೊರೆತ ಸಮ್ಮಾನ ಎಂದರೆ ತಪ್ಪಾಗಲಿಕ್ಕಿಲ್ಲ ಕಾಳಜ್ಜಿಗೆ ಹಾಡಳ ನಮಸ್ತ ಗ್ರಾಮಸ್ತರಿಂದ ಹಾಗೂ ಭಟ್ಕಳದ ಸಮಸ್ತ ನಾಗರೀಕರಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top