ಭಟ್ಕಳ ಭೈಪಾಸ್ ಬಳಿ ಹೆಚ್ಚಾದ ಅಪಘಾತಗಳು

ಭಟ್ಕಳ: ಪಟ್ಟಣದ ಭೈಪಾಸ್ ಬಳಿಯಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಎರಡು ವಾಹನದಲ್ಲಿದ್ದ ೮ ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ನಸುಕಿನ ಜಾವ ಭಟ್ಕಳದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೋವಾ, ಕುಂದಾಪುರದಿದ ಭಟ್ಕಳದ ಕಡೆಗೆ ಬರುತ್ತಿದ್ದ ಕ್ರೂಸರ್ ನಡುವೆ ಅಪಘಾತ ನಡೆದಿದೆ ಇನ್ನೊವಾ ಕಾರಿನಲ್ಲಿದ್ದ ಗಜೇಂದ್ರಗಡ, ಗದಗ ನಿವಾಸಿ ರೇಷ್ಮಾ ರಾತೋಡ, ಮಾರುತಿ ನಾಗಪ್ಪ ಅಜಮೀರ ಹಾಗೂ ಕ್ರೂಸರನಲ್ಲಿದ್ದ ಬೀಮನಗೌಡ, ಮುನೀರಾ ಫಯಾಜ್, ಮಂದಾಕಿನಿ ಬಳೆಗಾರ, ಅನಸೂಯ ಉಪಾಸಿ, ಬಸವರಾಜ ಪೂಜಾರಿ, ಕಾಡಪ್ಪ ಉಪಾಸಿ ಗಾಯಗೊಂಡವರು. ಈ ಕುರಿತು ಇನ್ನೊವಾ ಚಾಲಕ ಮಾರುತಿ ನಾಗಪ್ಪ ಅಜಮೀರ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top