ಸಿ ಐ ಟಿ ಯು ಸಂಯೋಜಿತ ಅಕ್ಷರ ದಾಸೋಹ ಸಂಘಟನೆಯ ವತಿಯಿಂದ ಸಚಿವ ಮಂಕಾಳು ವೈದ್ಯರಿಗೆ ಮನವಿ

ಭಟ್ಕಳ : ತಾಲೂಕ ಸಿ ಐ ಟಿ ಯು ಸಂಯೋಜಿತ ಅಕ್ಷರ ದಾಸೋಹ ಸಂಘಟನೆಯ ವತಿಯಿಂದ ಸಚಿವ ಮಂಕಾಳು ವೈದ್ಯರಿಗೆ ವಿವಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸಲಾಯಿತು

ಮನವಿಯಲ್ಲಿ

ಶಿಕ್ಷಣ ಎಂಬುದು ಒಂದು ಸಮಾಟದ ಪರಿವರ್ತನಾ ಸಾಧನಾ, ಆದ್ದರಿಂದ ಪ್ರತಿಯೊಂದು ಮಗುವು ಶಿಕ್ಷಣ ಕಲಿಯಬೇಕೆಂಬ ಮಹತ್ವದ ಉದ್ದೇಶದಿಂದ 1968 ರಲ್ಲಿ ಮೊದಲ ಶಿಕ್ಷಣ ನೀತಿಯನ್ನು ತಂದು ಇಂದಿನಿಂದ ಇಂದಿನವರೆಗೂ ಜಾರಿಗಾಗಿ ಶ್ರಮಿಸಲಾಗುತ್ತಿದೆ.

ಪ್ರತಿಯೊಂದು ಮಗುವು ಪಾಠಗಳನ್ನು ಗ್ರಹಿಸಬೇಕೆಂಬ ಉದ್ದೇಶದಿಂದ ಹಲವು ಪ್ರಯೋಗಗಳ ನಂತರ 2001 ರಲ್ಲಿ ಅಕ್ಷರ ದಾಸೋಹ ಯೋಜನೆಯನ್ನು ಪ್ರಾರಂಭಿಸಲಾಯಿತು.

ಇಂದು ರಾಜ್ಯದಲ್ಲಿ 55 ಲಕ್ಷ 80 ಸಾವಿರ ರಷ್ಟು ಮಕ್ಕಳು ಬಿಸಿಯೂಟವನ್ನು ಸೇವಿಸುವುದರಿಂದ ಶಾಲಾ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತಿದೆ. ಖಾಸಗೀ ಶಾಲೆಗಳ ಪ್ರಭಾವ ಹೆಚ್ಚುತ್ತಿದ್ದರೂ ಸರ್ಕಾರಿ ಶಾಲೆಗಳ ಮಹತ್ವವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸಲು ಬಿಸಿಯೂಟ ಯೋಜನೆಯ ಕಾಣಿಕೆ ಇದೆ.

ಕೇಂದ್ರ ಸರ್ಕಾರ ಯೋಜನೆಗಳ ಹೆಸರನ್ನು ಬದಲಿಸಿ ತನ್ನ ಪಾಲಿನ ನಿಧಿಯನ್ನು ಕಡಿತಗೊಳಿಸಿ ರಾಜ್ಯದ ಪಾಲನ್ನು ಕೊಡಬೇಕು ಎಂಬ ನೀತಿಯನ್ನು ಅನುಸರಿಸಿದ್ದರಿಂದ ಯೋಜನೆಯನ್ನು ಬಲಿಷ್ಠ ಪಡಿಸುವ ಜವಾಬ್ದಾರಿ ನನ್ನದು ಅಷ್ಟೇ ಅಲ್ಲ ಎಂದು ಹೇಳುತ್ತಿದೆ.

ಇದರಿಂದ ಬಿಸಿಯೂಟದಲ್ಲಿ ಕೊಡುತ್ತಿರುವ ಊಟದ ಗುಣಮಟ್ಟ, ಅಡುಗೆ ವೆಚ್ಚ ಮತ್ತು ಅಡುಗೆ ಮಾಡುವ ನೌಕರರ ಪರಿಸ್ಥಿತಿಗಳು ಸಂಕಷ್ಟದಲ್ಲಿವೆ. ಹೀಗೆ ಬಿಸಿಯುಟ ನೌಕರರು ತುಂಬ ಸಂಕಷ್ಟದಲ್ಲಿದ್ದಾರೆ ಕಾರಣ ಈ ನೌಕರರಿಗೆ ಮೂಲಬೂತ ಸೌಲಬ್ಯಗಳನ್ಮು ಒದಗಿಸಬೇಕು ಎಂದು ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಸಿ ಐ ಟಿ ಯು ತಾಲೂಕ ಅಧ್ಯಕ್ಷ ಪುಂಡಲಿಕ್ ನಾಯ್ಕ , ಬಿಸಿಯೂಟ ಸಂಘಟನೆಯ ಅಧ್ಯಕ್ಷರಾದ ಚಂದ್ರಕಲಾ ಕಾರ್ಯದರ್ಶಿ ಖಜಚಿಗಳಾದ ಲಕ್ಷ್ಮಿ ತುಳಸಿ ಕಮಲಾ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top