ಜಾಲಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಭಟ್ಕಳ: ತಾಲೂಕಿನ ಸರಕಾರಿ ಪ್ರೌಢಶಾಲೆ ಜಾಲಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.)ಆಶ್ರಯದಲ್ಲಿ ‘ಕಾನೂನು ಅರಿವು ಕಾರ್ಯಕ್ರಮವನ್ನು’ಹಮ್ಮಿಕೊಳ್ಳಲಾಗಿತ್ತು. ಭಟ್ಕಳದ ಡಿ. ವೈ.ಎಸ್.ಪಿ ಕಚೇರಿಯ ಹೆಡ್ ಕಾನ್ಸ್ಟೇಬಲ್ ಮಾರುತಿ ಜೆ. ನಾಯ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಿರುವ ಡ್ರಗ್ಸ್ ಬಳಕೆಯ ಅಪರಾಧಗಳು, ವಾಹನ ಚಾಲನೆ ಮತ್ತು ಸಂಚಾರಿ ನಿಯಮಗಳು, ಮೊಬೈಲ್ ಬಳಕೆ ಮತ್ತು ಸುಳ್ಳುಸುದ್ದಿ ಹರಡುವಿಕೆಯ ಅಪರಾಧಗಳು, ಸೈಬರ್ ಅಪರಾಧಗಳು, ಶಿಸ್ತು, ನಿಯಮ ಪಾಲನೆ, ಬಾಲಕಿಯರು ಶಾಲೆಗೆ ಬರುವಾಗ ಮತ್ತು ಹೋಗುವಾಗ ದಾರಿಬದಿಯನ್ನು ಯುವಕರು ಮಾಡುವ ಕುಚೇಷ್ಟೆಗಳ ನಿಯಂತ್ರಣ ಇತ್ಯಾದಿ ವಿಷಯಗಳ ಬಗ್ಗೆ ಅತ್ಯಂತ ಸುದೀರ್ಘವಾಗಿ, ಸ್ಪಷ್ಟವಾಗಿ ಮತ್ತು
ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತಾ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸಿದರು. ಕಾಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ನಾಯ್ಕ ವಹಿಸಿದ್ದರು. ಅವರು ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ, ಆಂಗ್ಲ ಭಾಷಾ ಶಿಕ್ಷಕ ಶ್ರೀಧರ ಶೇಟ್ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಭಾಷಾ ಶಿಕ್ಷಕಿ ರೇಣುಕಾ ನಾಯಕ ವಂದಿಸಿದರು. ಶಾಲಾ ಶಿಕ್ಷಕವೃಂದದ ತಿಮ್ಮಪ್ಪ ದೇವಾಡಿಗ, ಜಯಂತಿ ನಾಯಕ, ಶೋಭಾ ಗೌಡ ಉಪಸ್ಥಿತರಿದ್ದರು. ಶಾಲೆಯ 8, 9, 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಕಾನೂನಿನ ಸಮರ್ಪಕ ಪಾಲನೆಯ ಮಹತ್ವ ಮತ್ತು ಪಾಲನೆ ಮಾಡದಿದ್ದಲ್ಲಿ ಉಂಟಾಗುವ ಕಾನೂನು ತೊಡಕುಗಳೇನು ಎಂಬುದನ್ನು ಅರಿತುಕೊಂಡರು.

WhatsApp
Facebook
Telegram
error: Content is protected !!
Scroll to Top