ತಾಲೂಕಿನಲ್ಲಿ ಅಧಿಕಾರಿಗಳ ದ್ಯೆಯ ಬಡವರ ಸೇವೆಯಾಗಿರಬೇಕು

ಬಡವರ ಸೇವೆ ಮಾಡಿ ಇಲ್ಲಾ ಕ್ಷೇತ್ರ ಬಿಟ್ಟು ತೆರಳಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ಭಟ್ಕಳ : ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಎಚ್ಚರಿಕೆಯಿಂದ ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಿ ನಿಮ್ಮ ಕಛೇರಿಗಳಿಗೆ ಸದ್ಯದಲ್ಲೆ ನಾನು ಏಕಾಏಕಿ ಬೇಟಿ ನೀಡಿ ದಾಖಲೆ ಪರಿಶೀಲನೆ ನಡೆಸುತ್ತೆನೆ ಒಂದು ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಥವ ಬಡವರ ಕೆಲಸ ಮಾಡದಿದ್ದಲ್ಲಿ ಅಂಥ ಅಧಿಕಾರಿಗಳ ವಿರುದ್ದ ಸ್ಥಳದಲ್ಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳು ವೈದ್ಯರು ಹೇಳಿದರು

ತಾಲೂಕ ಪಂಚಾಯತ್ ಸಭಾಭವನದಲ್ಲಿ ಸಚಿವ ಮಂಕಾಳು ವೈದ್ಯರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು . ಸಭೆಯಲ್ಲಿ ತಾಲೂಕಿನ ವಿವಿದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವರದಿಗಳನ್ನು ಒಪ್ಪಿಸಿದರು ಈ ಸಂದರ್ಬದಲ್ಲಿ ಸಚಿವ ಮಂಕಾಳು ವೈದ್ಯ ಮಾತನಾಡುತ್ತ ಬವರ ಸೇವೆಯನ್ನು ಮಾಡಲು ನಾವು ನಮ್ಮ ಅಧಿಕಾರವನ್ನು ಚಲಾಯಿಸಬೇಕು ತಾಲೂಕಿನಲ್ಲಿ ಅಧಿಕಾರಿಗಳ ಮೂಲ ಉದ್ದೇಶ ಬಡವರ ಸೇವೆಯಾಗಿರಬೇಕು ನಿಮ್ಮ ಕಛೇರಿಗಳಲ್ಲಿ ನಿಮ್ಮ ಮುಂದೆ ಬಡವರಿಗಾಗಿ ನಾಲ್ಕು ಕರ್ಚಿಗಳನ್ನು ಹಾಕಿ ಬಡವರನ್ನು ಆ ಖುರ್ಚಿಯಲ್ಲಿ ಕುಳ್ಳಿರಿಸಿ ಮಾತನಾಡಿ ಬಡವ ಹಸಿದು ನಿಮ್ಮ ಕಛೇರಿಗಳಿಗೆ ಬಂದರೆ ಅಂತವರಿಗೆ ಊಟವನ್ನು ಹಾಕಿ ಕಳುಹಿಸಿ ಯಾರಿಗೂ ಏನು ನಷ್ಟವಾಗುವುದಿಲ್ಲಾ ಅದನ್ನು ಬಿಟ್ಟು ಅಧಿಕಾರಿಗಳು ಬಡವರ ಕೆಲಸ ಮಾಡದೆ ಅವರಿಗೆ ತೊಂದರೆ ಕೊಟ್ಡಿದ್ದೆ ಆದಲ್ಲಿ ಅಂತಹ ಅಧಿಕಾರಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಬಡವರ ಸೇವೆ ಮಾಡುವುದಾದರೆ ಮಾತ್ರ ನನ್ನ‌ ಕ್ಷೇತ್ರದಲ್ಲಿ ಕೆಲಸ ಮಾಡಿ ಇಲ್ಲವಾದಲ್ಲಿ ಕ್ಷೇತ್ರ ಬಿಟ್ಟು ಹೊರ ನಡೆಯಿರಿ ಎಂದು ಎಚ್ಚರಿಕೆಯನ್ನು ನೀಡಿದರು.

ತೊಟಗಾರಿಕಾ ಇಲಾಖೆಯ ಅಧಿಕಾರಿ ಬಿಳಗಿ ತನ್ನ‌ ಇಲಾಖಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಈ ಸಂದರ್ಬದಲ್ಲಿ ಸಚಿವರು ನಿಮ್ಮ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಸಿಬ್ಬಂದಿಗಳು ಯಾವ ಕಾರಣಕ್ಕೆ ವರ್ಗಾವಣೆ ಮಾಡಿಕೊಂಡರು ಕಛೇರಿಯಲ್ಲಿ ನಿಮ್ಮ ವರ್ತನೆ ಅವರಿಗೆ ಕಿರುಕುಳವನ್ನು ನಿಡುವಂತಿದ್ದು ಕಛೇರಿಯ ಸಮಯ ಮುಗಿದರು ಮಹಿಳಾ ಸಿಬ್ಬಂದಿಯನ್ನು ಕೆಲಸದ ನೆಪ ಮುಂದಿಟ್ಟುಕೊಂಡು ಕಛೇರಿಯಲ್ಲಿಸಿಕೊಳ್ಳುವ ಬಗ್ಗೆ ನನಗೆ ಮಾಹಿತಿ ಇದೆ ಎಂದು ತರಾಟೆಗೆ ತೆಗೆದುಕೊಂಡರು ಈ ಸಂದರ್ಬದಲ್ಲಿ ಅಧಿಕಾರಿ ಬಿಳಗಿ ಅನಾಗರಿಕನಂತೆ ವರ್ತಿಸಿದ್ದಲ್ಲದೆ ತನ್ನ ಅವ್ಯವಹಾರ ತಪ್ಪನ್ನು ಮುಚ್ಚಿಕೊಳ್ಳಲು ರಾಷ್ಟ್ರಪಿತ ಮಹಾತ್ಮ ಗಾಂದಿಗೆ ತನ್ನನ್ನು ಹೊಲಿಸಿಕೊಂಡು ಸಭೆಯಲ್ಲಿ ದುರಂಕಾರ ಮೆರೆದಿದ್ದಲ್ಲದೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮುಂದೆ ವಾದಮಾಡುವುದರ ಮೂಲಕ ತುಂಬಿದ ಸಭೆಗೆ ಅಪಮಾನವನ್ನು ಎಸಗುವುದ ಮೂಲಕ ಮರ್ಯಾದೆಯ ಎಲ್ಲಾ ಸಿಮೆಗಳನ್ನ ಉಲ್ಲಸಿದರು . ಈ ಅಧಿಕಾರಿಯೆ ತಾಲೂಕಿನಲ್ಲಿ ಮೈಲುತುತ್ತೆಯ 45 ಜನ ಫಲಾನುಭವಿ ರೈತರಿದ್ದರೂ ಕೂಡ ಫಲಾನುಭಗಳು ಇಲ್ಲವೆಂದು ಕಾರವಾರದ ಮೇಲದಿಕಾರಿಗೆ ವರದಿ ಒಪ್ಪಿಸಿರುವುದನ್ನು ನಮ್ಮ ಕರಾವಳಿ ಸಮಾಚಾರವು ಸ್ಟಿಂಗ್ ಆಪರೇಷನ್ ಮಾಡುವುದರ ಮೂಲಕ ಇತನ ಬಂಡವಾಳವನ್ನು ಬಯಲಿಗೆಳೆದಿತ್ತು ಎಂಬುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ ಇತನ ಹುಂಬತನದ ಕಾರಣ ಭಟ್ಕಳ ತೋಟಗಾರಿಕಾ ಇಲಾಖೆ ಇಂದು ಸಿಬ್ಬಂದಿಗಳ ಕೊರತೆಯನ್ನು ಅನುಭವಿಸುತ್ತಿದೆ ಕಾರಣ ಇತನ ಈ ಮನೊಬಾವದ ಕಾರಣ ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ವರ್ಗಾವಣೆ ಮಾಡಿಸಿಕೊಂಡು ತಾಲೂಕಿನಿಂದ ಹೊರನಡೆದಿದ್ದಾರೆ ಒಟ್ಟಾರೆ ಈ ಎಚ್ ಕೆ ಬಿಳಗಿ ಎಂಬ ತೊಟಗಾರಿಕಾ ಇಲಾಖೆಯ ಅಧಿಕಾರಿಯ ಕಾರಣ ತಾಲೂಕಿನ ರೈತರು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ

ಒಟ್ಟಾರೆ ತಾಲೂಕಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯರು ಬಡ ಜನಸಾಮಾನ್ಯರಿಗೆ ಅವರ ಹಕ್ಕನ್ನು ಒದಗಿಸುವ ಬಗ್ಗೆ ಹೆಚ್ಚಿನ ವತ್ತನ್ನು ನಿಡಿದರು . ಸಬೆಯ ಮುಕ್ತಾಯದಲ್ಲೂ ಕೂಡ ಬಡವರ ಸೇವೆಯನ್ನು ಮಾಡಿ ಎಂದು ಅಧಿಕಾರಿಗಳಿಗೆ ಕಿವಿ ಮಾತನ್ನು ಹೇಳಿದರು

WhatsApp
Facebook
Telegram
error: Content is protected !!
Scroll to Top