ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ವತಿಯಿಂದ ಪತ್ರಿಕಾಗೋಷ್ಟಿ

ಸಿದ್ದಾಪುರ: ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು ೨೦೨೨-೨೩ ನೇ ಸಾಲಿನಲ್ಲಿ ರೂ.೧೦,೮೩,೬೪,೫೯೬.೦೬ ನಿವ್ವಳ ಲಾಭ ಗಳಿಸಿದ್ದು, ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ರೂ. ೭,೭೮,೬೪,೫೯೬.೦೬ ರಷ್ಟು ನಿಕ್ಕಿ ಲಾಭ ಗಳಿಸಿರುತ್ತದೆ. ಎಂದು ಅಧ್ಯಕ್ಷ ಆರ್ ಎಮ್ ಹೆಗಡೆ ತಿಳಿಸಿದರು.
ಅವರು ಸಂಘದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತ

ಸಂಘದ ನಿಷ್ಠಾವಂತ ಹಾಗೂ ಅಭಿಮಾನಿ ಸದಸ್ಯರ ಸಂಪೂರ್ಣ ಸಹಕಾರ ಅನುಭವಿ ಆಡಳಿತ ಮಂಡಳಿಯ ಸದಸ್ಯರ ಮಾರ್ಗದರ್ಶನ ಹಾಗೂ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಸಿಬ್ಬಂದಿಗಳ ಕಾಯಕದಿಂದ ಮತ್ತು ವ್ಯವಹಾರದಲ್ಲಿನ ಅಚ್ಚುಕಟ್ಟತನ , ಶಿಸ್ತು, ಪ್ರಮಾಣ ಕತೆಯಿಂದ ಆರ್ಥಿಕವಾಗಿ ಸಂಘದ ಇತಿಹಾಸದಲ್ಲಿಯೇ ದಾಖಲೆಯ ಲಾಭವಾಗಿ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಸಂಸ್ಥೆಯ ನಿರ್ದೇಶಕರು, ವ್ಯವಸ್ಥಾಪಕರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top