ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ.ಎಲ್.ಒ, ಕರ್ತವ್ಯದಿಂದ ವಿಮುಕ್ತಿಗೊಳಿಸುವ ಕುರಿತು  ತಹಶಿಲ್ದಾರರಿಗೆ ಮನವಿ

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ.ಎಲ್.ಒ, ಕರ್ತವ್ಯದಿಂದ ವಿಮುಕ್ತಿಗೊಳಿಸುವ ಕುರಿತು   ಪ್ರಾಥಮಿಕ ಶಾಲೆಗಳ ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳು ಸದಸ್ಯರುಗಳ ಮೂಲಕ  ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು

ಮನವಿಯಲ್ಲಿ ಭಟ್ಕಳ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಮ್.ಸಿ. ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ತಮ್ಮ ಗಮನಕ್ಕೆ ತರಬಯಸುವುದೇನೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ.ಎಲ್ ಒ ಕರ್ತವ್ಯಕ್ಕೆ ನೇಮಿಸಿರುವುದರಿಂದ ಶಾಲಾ ವಿಧ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯ ಮೇಲೆ ತೀರ ಪರಿಣಾಮ ಉಂಟಾಗುತ್ತಿದ್ದು ಈಗಾಗಲೇ ಶಿಕ್ಷಕರ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣದ ಅಲಭ್ಯತೆಯಿಂದಾಗಿ ಹಾಗೂ ಕಾನ್ವೆಂಟಗಳ ಪ್ರಭಾವದಿಂದಾಗಿ ಸರಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೇ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಬರುತ್ತಿರುವ ಈ ದಿನಗಳಲ್ಲಿ ಶಿಕ್ಷಕರನ್ನು ಬಿ.ಎಲ್.ಒ ಕರ್ತವ್ಯಕ್ಕೆ ನೇಮಿಸಿರುವುದರಿಂದ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಶಿಕ್ಷಕರನ್ನು ಕೇಳಿದರೆ ನಮಗೆ ಬೇರೆ ಬೇರೆ ಕೆಲಸಗಳನ್ನು ವಹಿಸುತ್ತಾರ ಸರಕಾರದ ಕೆಲಸವಾದ್ದರಿಂದ ಇಲ್ಲ ಎನ್ನಲಾಗುವುದಿಲ್ಲ ನಾವೇನು ಮಾಡುವುದು ಎನ್ನುವ ಉತ್ತರ

ನೀಡುತ್ತಾರೆ. ಹಾಗಾಗಿ ನಾವುಗಳು ಭಟ್ಕಳ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ತಮ್ಮನ್ನು ಆಗ್ರಹಿಸುವುದೇನೆಂದರೆ ಶಾಲಾ ಅವಧಿಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ.ಎಲ್.ಒ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಅವರನ್ನು ಶಾಲಾ ಶ ಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು ಹಾಗೂ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಮನವಿ ಸಲ್ಲಿಸಲಾಯಿತು

ಈ ಸಂದರ್ಬದಲ್ಲಿ ಪ್ರಭಾಕರ್ ನಾಯ್ಕ, ರಾಮಾ ಐ ನಾಯ್ಕ, ವೆಂಕಟೇಶ ನಾಯ್ಕ, ಕೇಶವ ಮೊಗೇರ್ ರಾಜೇಶ ನಾಯ್ಕ ನಂದನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top