ಸಿದ್ದಾಪುರ ತಾಲೂಕಿನಲ್ಲಿ ಮಾತಾ ವೈಭವ ಉಪನ್ಯಾಸ ಕಾರ್ಯಕ್ರಮ

ಸಿದ್ದಾಪುರ. ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ಸುಷಿರ ಸಂಗೀತ ಪರಿವಾರ ಕಲ್ಲಾರೆಮನೆ ಮತ್ತು ಶ್ರೀ ಭುವನೇಶ್ವರಿ ದೇವಾಲಯ ಭುವನಗಿರಿ ಇವರ ಸಯುಕ್ತ ಆಶ್ರಯದಲ್ಲಿ ” ಶ್ರೀ ಮಾತಾ ವೈಭವ” ಎಂಬ ಉಪನ್ಯಾಸ ಕಾರ್ಯಕ್ರಮ ಪ್ರಾರಂಭವಾಯಿತು.

ಕಾರ್ಯಕ್ರಮದ ಮೊದಲ ದಿನ ‘ವೇದಗಳಲ್ಲಿ ಶ್ರೀಮಾತಾ’ ಎಂಬ ವಿಷಯದ ಕುರಿತು ವಿದ್ವಾಂಸರಾದ ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ ಉಪನ್ಯಾಸ ನೀಡಿದರು. ಅವರು ಮಾತೆ ಅಂದರೆ ತಾಯಿ. ಈ ಜಗತ್ತಿನ ಸರ್ವ ಶ್ರೇಷ್ಠ ಶಕ್ತಿಯಾಗಿದ್ದು ವೇದಗಳಲ್ಲಿ ಮಾತೆಯ ಕುರಿತಾಗಿ, ಶಕ್ತಿಯ ಕುರಿತಾಗಿ ವಿಶೇಷ ವರ್ಣನೆ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಶಕ್ತಿಯ ಆರಾಧನೆ ಮತ್ತು ಅದರ ಅನುಭವ ನಡೆಯುತ್ತಲೇ ಇದೆ. ಶಕ್ತಿಯನ್ನು ಒಲಿಸಿಕೊಂಡರೆ ಜಗತ್ತಿನಲ್ಲಿ ಎಲ್ಲವೂ ಸಾಧನೆ ಆಗುತ್ತದೆ ಎಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರಾಜೇಶ್ವರಿ ವಿ ಭಟ್ಟ ಡೊಂಬೆಕೈ ಪ್ರಾರ್ಥನೆ ಹಾಡಿದರು. ಜಯರಾಮ್ ಭಟ್ಟ ಗುಂಜುಗೋಡು ಉಪನ್ಯಾಸಕರನ್ನು ಪರಿಚಯಿಸಿ ಸ್ವಾಗತಿಸಿದರು. ಗಣಪತಿ ಹೆಗಡೆ ಗುಂಜಗೋಡು ವಂದನಾರ್ಪಣೆ ಸಲ್ಲಿಸಿದರು.ಆರ್.ವಿ. ಭಟ್ಟ ಗುಂಜಗೋಡ ದಂಪತಿಗಳು ವಿದ್ವಾನ್ ಚಂದ್ರಶೇಖರ್ ಭಟ್ ಗಾಳಿಮನೆ ಅವರನ್ನು ಗೌರವಿಸಿದರು.

WhatsApp
Facebook
Telegram
error: Content is protected !!
Scroll to Top