ಭಟ್ಕಳ ಹೆಬ್ಳೆ ಬಸ್ ನಿಲ್ದಾಣವನ್ನೇ ಕಸದ ತೊಟ್ಟಿಯನ್ನಾಗಿಸಿದ ಗ್ರಾಮ ಪಂಚಾಯತ್

ಬುದ್ದಿಗೇಡಿತನದ ಪರಮಾವದಿಯನ್ನು ಪ್ರದರ್ಶಿಸುತ್ತಿದ್ದೆ ಹೆಬ್ಳೆ ಗ್ರಾಮ ಪಂಚಾಯತ್

ಭಟ್ಕಳ: ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿ ಡಬ್ಲುಡಿ ಇಲಾಖೆ ಮತ್ತು ಗ್ರಾಮ‌ ಪಂಚಾಯತ್ ಸೇರಿ ಕೊಳಚೆ ಹಾಗು ಕಸಗಳಿಂದ ಬಸ್ ನಿಲ್ದಾಣವನ್ನೆ ಕೊಳಚೆಯ ಕೊಂಪೆಯನ್ನಾಗಿಸಿದ ಘಟನೆ ನಡೆದಿದೆ

ಹೌದು ವೀಕ್ಷಕರೆ ಊರನ್ನು ಸ್ವಚ್ಚಗೊಳಿಸುದು ಊರಿಗೆ ಮೂಲಭೂತ ಸೌಲಬ್ಯವನ್ನು ಒದಗಿಸುವುದು ಗ್ರಾಮಪಂಚಾಯತ್ ಇಂದ ಹಿಡಿದ ಜಿಲ್ಲಾ ಪಂಚಾಯತಗಳ ಕರ್ತವ್ಯವಾಗುರುತ್ತದೆ ಆದರೆ ನಮ್ಮ‌ ಹೆಬ್ಳೆ ಗ್ರಾಮ ಪಂಚಾಯತ್ ಮತ್ತು ಪಿ ಡ ಬ್ಲು ಇಲಾಖೆ ಮಾತ್ರ ಇದಕ್ಕೆ ವ್ಯತಿರಿಕ್ತ ಊರಿನಲ್ಲಿರುವ ಮಣ್ಣು ಕೊಳಚೆಗಳನ್ನು ಊರಿಂದ ತೆರವುಗೋಳಿಸಿ ಸ್ವಚ್ಚಗೊಳಿಸುವುದನ್ನು ಬಿಟ್ಟು ಈ ಗ್ರಾಮ ಪಂಚಾಯತ್ ಊರಿನಲ್ಲಿನ ಕೊಳಚೆ ಹಾಗು ಒಳಚರಂಡಿ ದುರಸ್ತಿ ಹೀಗೆ ಅಭಿವೃದ್ದಿಯ ಹೆಸರಲ್ಲಿ ಕೊಳಚೆ ಅನಗತ್ಯ ಮಣ್ಣುಗಳನ್ನು ಒಟ್ಟುಗೂಡಿಸಿ ಬಸ್ ಸ್ಟ್ಯಾಂಡ್ ಮುಂಭಾಗಕ್ಕೆ ತಂದು ಸುರಿಯಲಾಗಿದ್ದು ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಇದರಿಂದ ಗ್ರಾಮ ಪಂಚಾಯತ್ ಸ್ವಲ್ಪ ಮಣ್ಣನ್ನು ತೆಗೆದಂತೆ ಮಾಡಿ ಜನರ ಕಣ್ಣೋರೆಸುವ ಪ್ರಯತ್ನ ನಡೆಸಿದೆ ಇದೆಂತಾ ಆಡಳಿತ ಸ್ವಾಮಿ ಈ ಗ್ರಾಮ ಪಂಚಾಯತ್ ಈಗಾಗಲೆ ಭ್ರಷ್ಟಾಚಾರದ ಆರೋಪವನ್ಬು ಈಗಾಗಲೆ ಹೊತ್ತುಕೊಂಡಿದೆ ಅದರ ತನಿಖೆ ಕೂಡ ನಡೆಯುತ್ತಿದೆ ವರ್ಷಕಳೆದರು ಈವರೆಗೂ ಅದರ ಫಲಿತಾಂಶ ಮಾತ್ರ ಶೂನ್ಯ ಈ ಪ್ರಕರಣದಲ್ಲಿರುವ ಆರೋಪಿಗಳಿಗೆ ಶಿಕ್ಷೇಯಾಗುತ್ತದೊ ಇಲ್ಲವೊ ಆ ಭಗವಂತನಿಗೆಗೊತ್ತು ಇಲ್ಲಿ ಅದನ್ನು ಬಿಟ್ಟುಬಿಡೋಣ ವೀಕ್ಷಕರೆ ಆದರೆ ಈ ಇದೆ ಗ್ರಾಮ ಪಂಚಾಯತ್ ಊರಿನ ಹೊಲಸನ್ನು ಬಸ್ಟ್ಯಾಂಡ್ ಮುಂದೆ ತಂದು ಸುರಿದಿದೆ ಈ ಗ್ರಾಮ ಪಂಚಾಯತಿಗೆ ಸಾಮಾನ್ಯ ಜ್ಞಾನ ಎಂಬುದು ಕೂಡ ಇಲ್ಲವೇ ಸಾಮಾನ್ಯ ಅನಕ್ಷರಸ್ತನಿಗೂ ಕೂಡ ಬಸ್ಟ್ಯಾಂಡ್ ಮಂಬಾಗದಲ್ಲಿ ಹೊಲಸನ್ನು ಸುರಿಯಬಾರದು ಎಂಬ ಸಾಮಾನ್ಯಜ್ಞಾನವನ್ನು ಹೊಂದಿರುತ್ತಾನೆ ಆದರೆ ಈ ಗ್ರಾಮ ಪಂಚಾಯತ್ ಬುದ್ದಿಗೆ ಮಣ್ಣು ಸುರಿದವರಾದರು ಯಾರು ಮತಿಗೆಟ್ಟಂತೆ ಬಸ್ಟ್ಯಾಂಡ್ ಮುಂಭಾಗದಲ್ಲಿ ಕೊಳಚೆಯನ್ನು ಸುರಿಯುತ್ತದೆ .

ಯಾಕೊ ಏನೋ ಈ ಗ್ರಾಮ ಪಂಚಾಯತ್ ಯಾವಾಗಲು ಹೊಣೆಗೇಡಿತನವನ್ನೆ ಪ್ರದರ್ಶಿಸುತ್ತಲೆ ಬರುತ್ತಿದೆ ಇದಕ್ಕೆ ಸ್ಪಷ್ಟ ಉದಾಹರಣೆ ಈ ಬಸ್ಟ್ಯಾಂಡ್ ಕಸದ ಪ್ರಕರಣ ಇನ್ನು ಮುಂದಾದರು ನಮ್ಮ ಗ್ರಾಮ ಪಂಚಾಯತ್ ತನ್ನ ಜವಾಬ್ದಾರಿ ಅರಿತುವರ್ತಿಸಿತೇ ಎಂದು ಕಾದುನೊಡಬೇಕಾಗಿದೆ

WhatsApp
Facebook
Telegram
error: Content is protected !!
Scroll to Top