ಈಜುಕೊಳವಾಗಿ ಬದಲಾದ ಭಟ್ಕಳ ರಾಷ್ಟ್ರೀಯ ಹೆದ್ದಾರಿ

ಸುಸಜ್ಜಿತ ಒಳಚರಂಡಿ ಇಲ್ಲದೆ ಮಳೆಗಾಲದಲ್ಲಿ ಅದ್ವಾನಕ್ಕೆ ಒಳಗಾಗುತ್ತಿದ್ದಾರೆ ಸಾರ್ವಜನಿಕರು

ಕಾಟಾಚಾರಕ್ಕೆ ಸಭೆ ನಡೆಸಿ ಕೈ ತೊಳೆದುಕೊಂಡ ಜಿಲ್ಲಾಡಳಿತ

ಭಟ್ಕಳ: ತಾಲೂಕಿನಲ್ಲಿ ಮಳೆಗಾಲ ಪ್ರಾರಂಬವಾಯಿತು ಎಂದರೆ ಸರಕಾರಿ ಬಸ್ಟ್ಯಾಂಡ್‌ , ಶಂಶುದ್ದಿನ್‌ ಸರ್ಕಲ್‌, ರಂಗಿನಕಟ್ಟೆ ಮೂಡಭಟ್ಕಳ ರಾಷ್ಟ್ರೀಯ ಹೆದ್ದಾರಿಗಳು ಸ್ವೀಮಿಂಗ್‌ ಪೂಲಗಳಾಗಿ ಬದಲಾಗುತ್ತಿದ್ದು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸರಿಯಾದ ಒಳಚರಂಡಿ ನಿರ್ಮಾಣ ಮಾಡದೆ ಇರುವುದೆ ಈ ಸಮಸ್ಯೆಗಳಿಗೆ ಕಾರಣವಾಗಿರುವುದು ತಿಳಿದು ಬಂದಿದೆ

ಹೌದು ವಿಕ್ಷಕರೆ ಬಾಯಿ ತೆಗೆದರೆ ಅಭಿವೃದ್ದಿ ಕ್ಲೀನ್‌ ಸಿಟಿ ಬಗ್ಗೆ ಮಾತನಾಡುವ ಈ ಅಧಿಕಾರಿ ವರ್ಗ ವರ್ಷಗಳು ಕಳೆಯುತ್ತಿದ್ದರೂ ಒಂದು ಸುಸಜ್ಜಿತ ಒಳಚರಂಡಿಯನ್ನು ನಿರ್ಮಾಣ ಮಾಡಲು ಈ ನರಸತ್ತ ಅಧಿಕಾರಿ ವರ್ಗದವರು ಅಸಮರ್ಥರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲಾ ಪ್ರತಿ ಮಳೆಗಾಲದ ಸಂದರ್ಬದಲ್ಲಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರತಕ ಇಜುಕೋಳ ನಿರ್ಮಾಣವಾಗುತ್ತದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ , ಗಾಡ ನಿದ್ದೆಯಲ್ಲಿರುವ ಭಟ್ಕಳ ಪುರಸಭೆ ತಾಲೂಕ ಕೆ ಎಸ್‌ ಆರ್‌ ಟಿ ಸಿ ಒಂದೆ ಏರಡೆ ಈ ಎಲ್ಲಾ ಇಲಾಖೆಗಳ ಹೊಣೆಗೇಡಿ ತನಕ್ಕೆ ಭಟ್ಕಳ ತಾಲೂಕಿನ ಸಾರ್ವಜನಿಕರು ಮತ್ತು ಹೆದ್ದಾರಿಯಲ್ಲಿ ಸಂಚರಿರುವ ವಾಹನ ಸವಾರರು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ವಿಕ್ಷಕರೆ ಇದು ಇಂದು ಅಥವಾ ಏರಡು ವರ್ಷಗಳ ಪರದಾಟವಾದರೆ ಇಂದೋ ನಾಳೆನೋ ಸರಿಯಾಗ ಬಹುದು ಎಂದು ಸುಮ್ಮನಿರ ಬಹುದಿತ್ತು ಆದರೆ ಈ ಸಮಸ್ಯೆ ತಾಲೂಕಿನಲ್ಲಿ ಯಾವಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಬವಾಯಿತೋ ಅಂದಿನಿಂದ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕ್ರತಕ ನೇರೆಹಾವಳಿ ಸ್ರಷ್ಟೀಯಾಗುತ್ತಲೆ ಬಂದಿದೆ ಬಗ್ಗೆ ಐ ಆರ್‌ ಬಿ ಅವರಲ್ಲಿ ಕೇಳಿದರೆ ಇದು ನಮ್ಮ ಸಮಸೈಯಲ್ಲ ಎಂದು ಹೇಳುತ್ತದೆ ಇನ್ನು ಕೆ ಎಸ್‌ ಆರ್‌ ಟಿ ಸಿ ಅವರಲ್ಲಿ ಕೇಳಿದರೆ ಇದು ಪುರಸಭೆಗೆ ಸಂಬಂದಿಸಿದ ಸಮಸ್ಯೆ ಒಳಚರಂಡಿಯ ಕಾರಣ ಕ್ರತಕ ನೇರೆ ಹಾವಳಿ ಸ್ರಷ್ಟಿಯಾಗುತ್ತಿದೆ ಎನ್ನುತ್ತಾರೆ ಪುರಸಭೆಯವರಲ್ಲಿ ಕೇಳಿದರೆ ಐ ಆರ್‌ ಬಿ ಅವರಿಗೆ ಈಗಾಗಲೆ ವಹಿಸಿಕೊಟ್ಟಾಗಿದೆ ಅವರು ಮಾಡಬೇಕು ಎಂದು ಹೇಳುತ್ತಾರೆ ಹಾಗಾದರೆ ಈ ಸಮಸ್ಯೆ ಬಗೆಹರಿಸುವವರಾದರು ಯಾರು ತಾಲೂಕಿನ ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣವನ್ನು ನೋಡಿದರೆ ಸಂಕಟವಾಗುತ್ತದೆ ಸರಕಾರ ಕೊಟಿಗಟ್ಟಲೆ ಖರ್ಚು ಮಾಡಿ ಹೈ ಟೆಕ್‌ ಬಸ್‌ ನಿಲ್ದಾಣವನ್ನು ನಿರ್ಮಾಣಮಾಡಿದೆ ಅಲ್ಲದೆ ಈ ನಿಲ್ದಾಣದ ಮುಂಬಾಗದಲ್ಲಿ ಒಂದು ಕೋಟಿ ಅನುದಾನದಲ್ಲಿ ಕಾಂಕ್ರೇಟ್‌ ಹಾಕಲಾಗಿದೆ ಇಷ್ಟೇಲ್ಲಾ ಸರಕಾರದ ಅನುದಾನ ಖರ್ಚಾದರು ಭಟ್ಕಳ ಭಸ್‌ ನಿಲ್ದಾಣ ಕೊಚ್ಚೆಗುಂಡಿಯಾಗಿ ಹೋಗಿದೆ ಸರಕಾರದ ಕೋಟಿ ಕೊಟಿ ಅನುದಾನ ಹೊಳೆಯಲ್ಲಿ ಹುಣಸೆ ಹಣ್ಣನ್ನು ಕಿವುಚಿದಂತಾಗಿದೆ

ಇನ್ನು ಈ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮಾತ್ರ ಭಟ್ಕಳದ ಈ ಸಮಸ್ಯೆಗೂ ತನಗೂ ಯಾವುದೆ ಸಂಬಂದವಿಲ್ಲವೆನೋ ಎಂಬಂತೆ ವರ್ತಿಸುತ್ತಿದೆ ಆದರೆ ಟೋಲ್ಗೇಟ್ಗಳಲ್ಲಿ ವಾಹನ ಸವಾರರಿಂದ ಕಾನೂನಿನ ಹೇಸರಿನಲ್ಲಿ ಟೋಲ್ಗಳನ್ನು ಮಾತ್ರ ಸಮರ್ಪಕವಾಗಿ ವಸೂಲು ಮಾಡುತ್ತಾರೆ ಆದರೆ ರಾಷ್ಟ್ರೀಯ ಹೆದ್ದಾರಿಗಳು ಸಾರ್ವಜನಿಕರಿಗೆ ಅದ್ವಾನವನ್ನು ತಂದಿಟ್ಟಿದೆ

ಸಾರ್ವಜನಿಕರಿಗೆ ತಾಲೂಕಿನಲ್ಲಿ ಇಷ್ಟೇಲ್ಲಾ ತೊಂದರೆಯಾಗುತ್ತಿದ್ದರು ಅಭಿವೃದ್ದಿ ಪುಸ್ತಕದ ಬದನೆಕಾಯಿ ಎಂಬಂತೆ ಈ ನರಸತ್ತ ಪುರಸಭೆ ಗಾಡ ನಿದ್ದೆಯಲ್ಲಿ ಇದ್ದಂತೆ ವರ್ತಿಸುತ್ತದೆ ಅವಶ್ಯಕತೆ ಇಲ್ಲದ ಕಡೆ ಪಾರ್ಕ ನಿರ್ಮಾಣ ಅನಗತ್ಯ ಕಟ್ಟಡಗಳು ಇಂತ ಕಾಮಗಾರಿ ನಡೆಸುವುದರಲ್ಲಿ ಈ ಪುರಸಭೆ ಸಮಯ ವ್ಯರ್ಥಮಾಡುವುದನ್ನು ಗಮನಿಸಿದರೆ ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳೆ ಸ್ರಷ್ಟಿಯಾಗುತ್ತದೆ

ಒಟ್ಟಾರೆ ತಾಲೂಕಿನಲ್ಲಿ ಇಷ್ಟೇಲ್ಲಾ ಸದ್ವಾನಗಳು ಸ್ರಷ್ಟಿಯಾದರು ಯಾವೋಬ್ಬ ಅಧಿಕಾರಿಯು ನನಗೂ ಇದಕ್ಕೂ ಸಂಬಂದವೆ ಇಲ್ಲವೆನೋ ಎಂಬಂತೆ ವರ್ತಿಸುತ್ತಿದ್ದಾರೆ ಜಿಲ್ಲಾಡಳಿತ ಈ ಬಗ್ಗೆ ತಾಲೂಕಿನಲ್ಲಿ ಮುಖಂಡರು ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆಸಿದೆ ಪ್ರತಿ ಮಳೆಗಾಲದ ಸಂದರ್ಬದಲ್ಲಿ ಹೀಗೆ ಕ್ರತಕ ನೇರೆ ಹಾವಳಿ ಸಂಬವಿಸಿದಾಗ ಜಿಲ್ಲಾಡಳಿತ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಎಂಟು ವರ್ಷಗಳಿಂದ ಸಭೆ ನಡೆಸುತ್ತಲೆ ಬರುತ್ತಿದೆ ಪರಿಹಾರ ಮಾತ್ರ ಶೂನ್ಯ ಸಭೆ ಕೇವಲ ಕಣ್ಣೋರೆಸುವ ತಂತ್ರ ಎಂದರೆ ತಪ್ಪಿಲ್ಲ ಈ ಬಗ್ಗೆ ನಮ್ಮ ಬರವಸೆಯ ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ

WhatsApp
Facebook
Telegram
error: Content is protected !!
Scroll to Top