ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡುವಂತ ಟ್ವಿಟ್ಟರ್ ಹ್ಯಾಶ್ಟ್ಯಾಗ್ ಅಭಿಯಾನ

ಉತ್ತರ ಕನ್ನಡಿಗರಿಂದ ರಾಜ್ಯದಾದ್ಯಂತ ಟ್ವಿಟ್ಟರ್ ಹ್ಯಾಷ್ಟಾಗ್ ಅಭಿಯಾನ

ಉತ್ತರ ಕನ್ನಡ ಉಸ್ತುವಾರಿ ವಹಿಸುವಂತೆ ಉತ್ತರ ಕನ್ನಡಿಗರಿಂದ ಆಗ್ರಹ

ಭಟ್ಕಳ: ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಮಂಕಾಳ ವೈದ್ಯರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ನೀಡಿ ಸಚಿವರನ್ನಾಗಿಸ ಬೇಕು ಎಂದು ಉತ್ತರ ಕನ್ನಡಿಗರಿಂದ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಅಭಿಯಾನ ರಾಜ್ಯದಾದ್ಯಂತ ಪ್ರಾರಂಬವಾಗಿದೆ

ಭಟ್ಕಳ ಹೊನ್ನಾವರ ವಿಧಾನ ಸಭಾ ಹಾಲಿ ಶಾಸಕರಾದ ಮಂಕಾಳುವೈದ್ಯರು ಜನಪರ ಮತ್ತು ಜನಾನುರಾಗಿ ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿ ಇವರು ಅದಿಕಾರದಲ್ಲಿರಲ್ಲಿ ಇಲ್ಲದಿರಲಿ ಜನರು ಇವರನ್ನು ಜನ ಪ್ರತಿನಿದಿಗಳೆಂದೆ ಪರಿಗಣಿಸುತ್ತಾರೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇವರು ಅಧಿಕಾರದಲ್ಲಿ ಇಲ್ಲದಿರುವಾಗಲೂ ಜನ ಇವರ ಮನೆಗೆ ಸಹಾಯ ಕೇಳಿಕೊಂಡು ಹೋಗಿ ತಿಲ್ಲುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಈಗ ಮಂಕಾಳು ವೈದ್ಯರು ಒಂದು ಲಕ್ಷಕ್ಕೂ ಅಧಿಕ ಬಹುಮತದಿಂದ ಗೇಲುವನ್ನು ಪಡೆದುಕೊಂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ ಇವರ ವಿಜಯೋತ್ಸವಕ್ಕೆ ಜಾತಿ ಧರ್ಮ ಪಕ್ಷಾ ಎಂಬ ಯಾವುದೇ ಗಡಿಗಳಿಲ್ಲದೆ ಜನ ಬಾಗಿಯಾಗಿದ್ದರು

ಈಗ ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿದು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ ಮೂರೊ ನಾಲ್ಕೋ ಜನ ಸಚಿವರಾಗಿದ್ದಾರೆ ಇನ್ನು ಸಚಿವ ಸಂಪೂಟ ವಿಸ್ತರಣೆ ಅಗಿರುವುದಿಲ್ಲಾ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರ ಜನ ಪ್ರೀಯತೆ ಎಷ್ಟು ಹೆಚ್ಚಿದೆ ಎಂದರೆ ಉತ್ತರ ಕನ್ನಡಿಗರು ಸ್ವಪ್ರೇರಿತರಾಗಿ ಮಂಕಾಳ ವೈದ್ಯರಿಗೆ ಸಚಿವ ಸ್ಥಾನವನ್ನು ಕೊಟ್ಟು ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನೀಡಬೇಕು ಎಂಬ ಟ್ವಿಟ್ಟರ್ ಹ್ಯಾಶ್ಟ್ಯಾಗ್ ಅಭಿಯಾನವನ್ನು ರಾಜ್ಯದಾಧ್ಯಂತ ಪ್ರಾರಂಬಿಸಿ ಸಮರೋಪಾದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಗಳನ್ನು ಮಾಡುತ್ರಿದ್ದಾರೆ .ಕರಾವಳಿ ಕರ್ನಾಟಕದಲ್ಲಿ ಮಂಕಾಳ ವೈದ್ಯರು ತಮ್ಮ ಜನಪ್ರೀಯತೆಯ ಕದಂಬ ಬಾಹುವನ್ನು ಚಾಚಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲಾ

ನಮ್ಮ ಉತ್ತರ ಕನ್ನಡಿಗರ ರಾಜ್ಯದಾಧ್ಯಂತ ಉತ್ತರ ಕನ್ನಡ ಅಭಿವೃದ್ದಿಗಾಗಿ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ಮತ್ರು ಜಿಲ್ಲಾ ಉಸ್ತುವಾರಿ ನಿಡಲು ಆಗ್ರಹಿಸುತ್ತಿದ್ದೆ ನಮ್ಮ ಕರಾವಳಿ ಸಮಾಚಾರವು ಕೂಡ ವೈದ್ಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿ ಅವರು ಉತ್ತರ ಕನ್ನಡ ಉಸ್ತುವಾರಿಗಳಾಗಲಿ ಎಂದು ಹಾರೈಸುತ್ತದೆ

WhatsApp
Facebook
Telegram
error: Content is protected !!
Scroll to Top