ಭಟ್ಕಳ ಜೆಡಿಎಸ್ ಅಭ್ಯರ್ಥಿ ಹೈಕೋರ್ಟ್‌ ವಕೀಲ ನಾಗೇಂದ್ರ ನಾಯ್ಕ 4000ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಕೆ

ಭಟ್ಕಳ-ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಬುಧುವಾರದ೦ದು 3000 ಕ್ಕೂ ಹೆಚ್ಚಿನ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಆಡಳಿತ ಸೌದಕ್ಕೆ ಬಂದು ಚುನಾವಣಾಧಿಕಾರಿಗೆ ನಾಮ ಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಇಲ್ಲಿನ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವರಿಗೆ ಭಟ್ಕಳ ಜೆಡಿಎಸ್ ಮಂಡಲದವರು ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ಅವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವಂತೆ ಆಶೀರ್ವದಿಸು ಎಂದು ಸಂಕಲ್ಪ ಮಾಡಿದರು.

ನಂತರ ಅಲ್ಲಿಂದ ಭಟ್ಕಳ ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಜೊತೆಗೂಡಿ ಜೆಡಿಎಸ್ ನ 4000ಕ್ಕೂ ಹೆಚ್ಚಿನ ಕಾರ್ಯಕರ್ತರ ಜೊತೆ ಗೂಡಿ ಕಾಲ್ನಡಿಗೆಯಲ್ಲಿ ಮೆರವಣಿಗೆಯ ಮೂಲಕ ಪೇಟೆ ಮುಖ್ಯ ರಸ್ತೆ ಮಾರ್ಗವಾಗಿ ಹಳೇ ಬಸ್ ನಿಲ್ದಾಣದಿಂದ ತಾಲೂಕಾ ಆಡಳಿತ ಸೌಧದ ತನಕ ಸಾಗಿ ಬಂದ ಅವರಿಗೆ ಭಟ್ಕಳ ಜೆಡಿಎಸ್ ಮುಖಂಡರು ಸಾಥ್ ನೀಡಿದರು.

ಮೆರವಣಿಗೆ ಯೂದ್ದಕ್ಕೂ ಮಾಜಿ ಪ್ರಧಾನಿ ದೇವೇಗೌಡರಿಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ, ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಅವರಿಗೆ ಹಾಗೂ ನಾಗೇಂದ್ರ ನಾಯ್ಕ ಪರವಾದ ಘೋಷಣೆ ಕಾರ್ಯಕರ್ತರು ಕೂಗಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ಅವರಿಗೆ 3ಸಾವಿರಕ್ಕೂ ಅಧಿಕ ಕಾರ್ಯಕರ್ತರು ನೂರಾರು ಮುಖಂಡರು ನಾಮಪತ್ರ ಸಲ್ಲಿಕೆಯಲ್ಲಿ ಸಾಥ್ ನೀಡಿದರು. ಮೆರವಣಿಗೆಯ ಹಿನ್ನೆಲೆ ಪೋಲೀಸ ಇಲಾಖೆಯಿಂದ ಬಂದೋಬಸ್ತ ನೀಡಲಾಗಿತ್ತು. ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ‘ಕ್ಷೇತ್ರದ ದೇವರಿಗೆ ಪೂಜೆ ಸಲ್ಲಿಸಿ ಜೆಡಿಎಸ್ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲು ಸಾವಿರಾರು ಸಂಖ್ಯೆಯಲ್ಲಿ ನನ್ನ ಜೊತೆಗೆ ಬಂದ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ದು ನನ್ನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ವಿಶ್ವಾಸದಿಂದ 2023 ರ ಚುನಾವಣೆಯಲ್ಲಿ ನೂರಕ್ಕೆ ನೂರು ಜೆಡಿಎಸ್ ಗೆಲುವು ಸಾಧಿಸುವದರ ಜೊತೆಗೆ ಹೆಚ್ಚು ಮತಗಳ ಅಂತರದಿಸಿದ ಗೆಲುವು ಸಾಧಿಸಲಿದೆ ಎಂಬ ನಂಬಿಕೆ ಇದೆ. ಎಲ್ಲಾ ಸಮಾಜದ ಅಧ್ಯಕ್ಷರಿಗೆ, ಹಿರಿಯರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆಅಭಿನಂದನೆ ಸಲ್ಲಿಸಿದರು.

ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ನನ್ನ ಶತಪ್ರಯತ್ನ ಮಾಡುತ್ತೆನೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದು ಬ್ರಹತ ಪ್ಯಾಕಿಂಗ್ ಯೂನಿಟ್ ನಿರ್ಮಾಣ ಮಾಡುತ್ತೆನೆ ಎಂದರು.

ಜೆಡಿಎಸ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ ಜೆಡಿಎಸ್ ಕಾರ್ಯಕರ್ತರ ಹುಮ್ಮಸ್ಸು ವಿಜಯೋತ್ಸವ ರೀತಿಯಲ್ಲಿ ಕಂಡು ಬಂದಿದ್ದು ಭಟ್ಕಳದಲ್ಲಿ ಜೆಡಿಎಸ್ ಪಕ್ಷದ ಗೆಲುವು ನಿಶ್ಚಿತವಾಗಿದೆ ಎಂದರು. ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಮೇಲಿನ ಪ್ರೀತಿ ಅಭಿಮಾನದಿಂದ ಸೇರಿದ ಕಾರ್ಯಕರ್ತರ ಉತ್ಸಾಹವು ನೂರಕ್ಕೆ ನೂರು ಗೆಲುವು ಸಾಧಿಸಿದಂತಾಗಿದೆ. ಇನ್ನೇನಿದ್ದರು ಚುನಾವಣೆಯಲ್ಲಿ ಮತಗಳ ಅಂತರ ಗೆಲುವು ಮಾತ್ರ ಕಾಯಬೇಕಿದೆ.ಕ್ಷೇತ್ರದಲ್ಲಿ ಮುಸ್ಲಿಮರು, ನಾಮಧಾರಿಗಳು, ಗೌಡರು ಎಲ್ಲಾ ವರ್ಗದ ಜನರ ವಿಶ್ವಾಸ ಪಡೆದಿರುವ ನಾಗೇಂದ್ರ ನಾಯ್ಕ ಅವರು ಈ ಬಾರಿ ಗೆಲುವು ಸಾಧಿಸುವುದು ಖಚಿತ ಎಂದರು. ಈ ಸಂದರ್ಭದಲ್ಲಿ ಹೊನ್ನಾವರ ಜೆಡಿಎಸ್ ತಾಲೂಕ ಅಧ್ಯಕ್ಷ ಟಿ.ಟಿ.ನಾಯ್ಕ, ಭಟ್ಕಳ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜವರ್ಧನ ನಾಯ್ಕ, ಪುರಸಭಾ ಸದಸ್ಯ ಕೃಷ್ಣಾನಂದ ಪೈ, ಪುರಸಭಾ ಸದಸ್ಯ ಪಾಸ್ಕಲ್ ಗೊಂಮ್ಸ್, ಮುಟ್ಟಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ದೇವಯ್ಯ ನಾಯ್ಕ ಸರಿದಂತೆ 4 ಸಾವಿರ ಕಾರ್ಯಕರ್ತರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top