ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಡರ್ಟಿಪೊಲಿಟಿಕ್ಸ

ಶಾಸಕ ಸುನಿಲ್ ನಾಯ್ಕ ಅವರ ಖಾಸಾ ಶಿಷ್ಯಂದಿರಿಂದ ಹಣ ಹಂಚುವುದು ಮತ್ತು ವಿರೋದ ಪಕ್ಷದ ನಾಯಕರ ತೆಜೋವದೆಗೆ ಶಡ್ಯಂತ್ರ?

ಭಟ್ಕಳ: ಚುನಾವಣೆಯನ್ನು ಗೆಲ್ಲಲು ವಿರೋಧಿಗಳ ತೆಜೋವಧೆ ಮಾಡುವುದೇ ಸುಲಭದ ದಾರಿ ಎಂದು ನಂಬಿರುವ ಇಲ್ಲಿನ ಶಾಸಕ ಸುನೀಲ ನಾಯ್ಕ ಅವರ ಖಾಸಾ ಶಿಷ್ಯರು ಈಗ ತಮ್ಮ ಮನೆಹಾಳು ಐಡಿಯಾಗಳನ್ನು ವಾಟ್ಸ್‌ಆಪ್‌ನಲ್ಲಿ ಚಾಟ್ ಮಾಡಿ ಹಂಚಿಕೊಂಡಿದ್ದು ಅದನ್ನು ಅದೇ ಗ್ರೂಪ್‌ನಲ್ಲಿರುವ ಇನ್ನೊಬ್ಬ ಸ್ಟೀನ್ ಶಾಟ್ ಹೊಡೆದು ಊರಿಗೆಲ್ಲ ಹಂಚಿಭಟ್ಕಳಕ್ಕೆ ಮತ್ತೊಮ್ಮೆಶಾಸಕರ ಶಿಷ್ಯರ ಮರ್ಯಾದೆ ಹರಾಜು ಹಾಕಿದ್ದಾನೆ.

ಈ ಸ್ಟೀನ್ ಶಾಟ್‌ಗಳು ಈಗ ಭಟ್ಕಳದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಗ್ರೂಪ್‌ಗಳಲ್ಲಿ ವೈರಲ್ ಆಗಿವೆ.

ಈ ಖತರ್‌ನಾಕ್ ಚಾಟ್ ಶಾಸಕರ ಆತ್ಮೀಯರಾದ ಚಂದ್ರು ಹಾಗೂ ನಾಗರಾಜ ಎಂಬುವವರ ನಡೆದಿದ್ದು ಶಾಸಕ ಸುನೀಲ ನಾಯ್ಕ ಅವರ ನಾಮಪತ್ರ ಸಲ್ಲಿಕೆಗೆ ಬರುವ ಜನರಿಗೆ ದುಡ್ಡು ಹಾಗೂ ಪೆಟ್ರೋಲ್ ಹಂಚುವುದರ ಪ್ಲಾನಿಂಗ್‌ನಿಂದ ಆರಂಭವಾಗಿದ್ದು ನಂತರ ಹಿಂದೂ ಸಂಘಟನೆಯ ನಾಯಕರೊಬ್ಬರು ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ವರೆಗೆ ಮುಂದುವರಿದಿದೆ.

ಸುನೀಲ ನಾಯ್ಕ ಅವರ ಆನುಯಾಯಿಗಳು ತಮ್ಮ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದರೂ ತಮ್ಮ ಕಿತಾಪತಿಯನ್ನು ಮುಂದುಮಸಿದ್ದು ತಮ್ಮ ಪ್ರಚಾರದ ಜೊತೆ ಮಂಕಾಳ ವೈದ್ಯ ಅವರ ಅಪಪ್ರಚಾರವನ್ನೂ ನಡೆಸುತ್ತಿದ್ದಾರೆ ಎಂಬುದು ಈ ಚಾಟ್ ನಿಂದ ಬಹಿರಂಗವಾಗಿದೆ. ಚಂದ್ರು ಹಾಗೂ ನಾಗರಾಜ ಎಂಬುವವರು ಭಟ್ಕಳಕ್ಕೆ

ಮತ್ತೊಮ್ಮೆ ಸುನಿಲ ನಾಯ್ಕ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಮಾಡಿದ ಚಾಟ್ ಈಗ ಬಹಿರಂಗವಾಗಿರುವುದರಿಂದ ಶಾಸಕರ ಬಗ್ಗೆ ಜನ ಪಶ್ನೆ ಮಾಡುವಂತಾಗಿದೆ

ಈ ಇಡೀ ಚಾಟ್ ನಲ್ಲಿ ಚಂದು ನಾಗರಾಜನಿಗೆ ಹಾಗೂ ನಾಗರಾಜ ಚಂದ್ರುವಿಗೆ ಮನೆಹಾಳು ಐಡಿಯಾಗಳನ್ನು ಕೊಡುತ್ತಿದ್ದು ವಿರೋಧಿಗಳ ಚಾರಿತ್ರ್ಯ ವಧೆ ಮಾಡುವಂತೆ ನೇರವಾಗಿ ಬರೆಯುತ್ತಿದ್ದಾರೆ. ಗ್ರೂಪ್‌ನ ಇತರ ಸದಸ್ಯರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದಾರೆ.

ಚಾಟ್‌ನ ಅರಂಭದಲ್ಲಿ ಮಂಗಳವಾರ ಹೊನ್ನಾವರ ಮಂಕಿ ಭಾಗದಿಂದ ಸುನೀಲ ನಾಯ್ಕ ಅವರ ನಾಮಪತ್ರ ಸಲ್ಲಿಕೆಗೆ ಬರುವ ಜನರಿಗೆ ಮಾವಿನಕಟ್ಟಾದ ಪೆಟ್ರೋಲ್ ಬಂಕ್ ಹಾಗೂ ಭಟ್ಕಳದಿಂದ ಬರುವ ಜನರಿಗೆ ಭಟ್ಕಳದ ಪೆಟ್ರೋಲ್‌ ಬಂಕ್ ನಲ್ಲಿ ಉಚಿತ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಚಂದ್ರು ಬರೆದಿದ್ದಾರೆ. ಅಲ್ಲದೆ ವಿಶೇಷ ಸೂಚನೆ ಎಂದು ಬರೆದು ಪೆಟ್ರೋಲ್‌’ಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಟೋಕನ್ ಇದ್ದವರಿಗೆ ಮಾತ್ರ ಪೆಟ್ರೋಲ್, ಇದಕ್ಕಾಗಿ ದತ್ತ, ವೆಂಕಟೇಶ ಹಾಗೂ ಮಂಜು ವನ್ನು ಸಂಪರ್ಕಿಸಿ ಟೋಕನ್ ಪಡೆದುಕೊಳ್ಳಿ ಎಂದು ಗ್ರೂಪ್‌ನಲ್ಲಿ ಬರೆಯಲಾಗಿದೆ.

ಅದಕ್ಕೆ ‘ಲವ್’ ಇಮೋಜಿ ಹಾಕಿರುವ ನಾಗರಾಜ್‌ ತಾನು ಒಂದು ಮುಂದೆ ಹೆಜ್ಜೆ ಮುಂದೆ ಹೋಗಿ 2000 ಕೊಡುತ್ತೇವೆ. ಆದರೆ ದುಡ್ಡು ಕೊಡುವ ವಿಚಾರ ಮಂಕಾಳು ಟೀಂಗೆ ಗೊತ್ತಾಗಬಾರದು ಎಂದು ಬರೆದಿದ್ದಾರೆ. ಅದಕ್ಕೆ ಚಂದ್ರು ಉತ್ತರಿಸಿ ಈ ವಿಷಯ ಈಗಾಗಲೇ ಅವರ ಟೀಂಗೆ ಗೊತ್ತಾಗಿದೆ ಎಂದು ಬರೆದಿದ್ದು ಅದಕ್ಕೆ ನಾಗರಾಜ್‌ ಹೌದು ಎಂದು ಉತ್ತರಿಸಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಬರುವ ಜನರಿಗೆ ಗಿಲ್ಲಿಸ್ ಹೊಟೇಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿದ್ದು ಅದರ ಟೋಕನ್ ನಾಗರಾಜ್‌ ಪಟಗಾರ ಮತ್ತು ದೇವಿದಾಸ್ ಹತ್ತಿರ ಇರುತ್ತದೆ ಎಂದು ಚಂದ್ರು ತಿಳಿಸಿದ್ದಾರೆ. ಅದಕ್ಕೆ ಉತ್ತರಿಸುವ ನಾಗರಾಜ್‌ ಪಟಗಾರ ಬೈಂದೂರು, ಶಿರೂರು ಜನರಿಗೆ ಹೇಳಲಾಗಿದೆ ಅವರಿಗೆ ಊಟದ ವ್ಯವಸ್ಥೆ ಎಲ್ಲಿ? ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಚಂದ್ರು ಬೈಂದೂರು ಮತ್ತು ಶಿರೂರು ಗೊರಟೆ ಬೆಳಕೆ ಭಾಗದ ಜನರಿಗೆ ಕ್ವಾಲಿಟಿ ಮತ್ತು ಯಮ್ಮಿಸ್ ನೀಡಲಾಗುತ್ತದೆ.

ಎಂದು ಬರೆದಿದ್ದಾರೆ. ನಂತರ ನಾಗರಾಜ ಅವರು ದತ್ತ ಎಂಬುವವರನ್ನು ಗ್ರೂಪ್‌ಗೆ ಸೇರ್ಪಡೆ ಮಾಡಿದ್ದಾರೆ.

ಆರಂಭದಲ್ಲಿ ಇದು ಮಾಮೂಲಿ ಚಾಟ್ ಎನ್ನಿಸಿದರೂ ನಂತರ ಮಾತ್ರ ಈ ಜನ ಮಾಡಿದ ಚಾಟ್ ತುಂಬಾ ಅಪಾಯಕಾರಿ ಹಾಗೂ ಕುತೂಹಲಕಾರಿಯಾಗಿದೆ. ಗ್ರೂಪ್‌ನ ಜನರಿಗೆ ಮೆಸೇಜ್ ಬರೆದಿರುವ ನಾಗರಾಜ ‘ಇವತ್ತು ಮಂಕಾಳು ನಡೆಸಿದ ಮೆರವಣಿಗೆಯ ವಿಡಿಯೋ ಮತ್ತು ಫೋಟೋ ಕಲೆಕ್ಟ್ ಮಾಡಿ, ಅವರನ್ನು ಟ್ರೋಲ್ ಮಾಡಿ’ ಎಂದು ಬರೆದಿದ್ದಾರೆ. ಅದಕ್ಕೆ ಚಂದ್ರು ಉತ್ತರಿಸಿ ಟ್ರೋಬ್ ಮಾಡ್ತಾ ಇದ್ದೇವೆ’ ಎಂದು ಹೇಳಿದ್ದಾರೆ ಆಗ ಮತ್ತೆ ನಾಗರಾಜ್‌ ಸಂದೇಶವನ್ನು ಹಾಕಿ ‘ಅವಹೇಳನಕಾರಿಯಾಗಿ ಟ್ರೋಲ್ ಮಾಡಿ, ಹಿಂದೂ ವಿರೋಧಿ ಅಂತ ಟ್ರೋಲ್ ಮಾಡಿ’ ಎಂದು ಬರೆದಿದ್ದಾರೆ. ಅಂದರೆ ಈ ಬಾರಿಯೂ ಮಂಕಾಳು ವೈದ್ಯ ಅವರನ್ನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಲು ಸಂಚು ನಡೆಸಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಈ ಚಾಟ್ ಹಲವು ಪ್ರಶ್ನೆಗಳಿಗೆ ಕಾರಣವಾಗಿದ್ದು ಭಟ್ಕಳ ಶಾಸಕರ ಶಿಷ್ಯರ ಡರ್ಟಿ ಟಿಕ್ಸ್‌ ಡಿಪಾರ್ಟ್‌ ಮೆಂಟ್ ಮತ್ತೆ ಚಿಗುರಿದ್ದು ಇಲ್ಲಿ ಸ್ಪಷ್ಟವಾಗಿದೆ

ಒಟ್ಟಾರೆ ಕೇವಲ ನಾಮಿನೇಷನ್ ವಿಷಯದಲ್ಲೆ ಇಷ್ಟೆಲ್ಲಾ ಹಣದ ಹರಿದಾಟ ನಡೆದರೆ ಇನ್ನು ಚುನಾವಣೆಯಲ್ಲಿ ಎಷ್ಟು ಕೊಟಿ ಹರಿದಾಡಿತು ಎಂಬ ಪ್ರಶ್ನೇಗಳು ಮುಡುವುದು ಸುಳ್ಳಲ್ಲಾ ಯಾವ ರೀತಿ ಹಿಂದೂತ್ವದ ಹೆಸರಲ್ಲಿ ಸಜ್ಜನರ ಮಾನಹಾನಿ ಮಾಡಲು ಶಡ್ಯಂತ್ರ ನಡೆದಿತು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರ ಅಪಾಯಕಾರಿ ಪರಿಸ್ಥಿತಿ ಎದುರಿಸುವಂತೆ ಈ ಅಪಾಯಕಾರಿ ವ್ಯಕ್ತಿಗಳು ತಂದಿಡುತ್ತಾರೋ ಎಂಬ ಭಯ ಸಾರ್ವಜನಿಕರಲ್ಲಿ ಮನೆ ಮಾಡಿದೆ ಮುಂದೆ ಅಪಾಯಗಳು ಸಂಭವಿಸಿ ಸಮಾಜದಲ್ಲಿ ಏನಾದರು ಹೆಚ್ಚುಕಡಿಮೆ ಊಂಟಾಗುವ ಪೂರ್ವದಲ್ಲೆ ಇಂಥಹ ಪರಿಸ್ಥಿತಿಗೆ ಚುನಾವಣಾ ಅಧಿಕಾರಿಗಳು ಕಡಿವಾಣ ಹಾಕಿ ಈ ಅಪಾಯಕಾರಿ ವ್ಯಕ್ತಿಗಳ ವಿರುದ್ದ ಸೂಕ್ಷ ಕ್ರಮ ಕೈಗೊಳ್ಳಬೇಕು ಎನ್ನುವುದೆ ಸಾರ್ವಜನಿಕರ ಮಾತಾಗಿದೆ

WhatsApp
Facebook
Telegram
error: Content is protected !!
Scroll to Top