ಮರಳುಗಾರಿಕೆ ಕಮಿಷನ್ ಬಗ್ಗೆ ಶಾಸಕ ಸುನಿಲ್ ಹೇಳಿಕೆ ಖಂಡನಿಯ

ಹೊನ್ನಾವರ ಹಿಂದಿನ ಶಾಸಕರಿಗೆ ನಾವು ಯಾವುದೆ ಕಮೀಷನ್ ನೀಡಿರುವುದಿಲ್ಲಾ ಇದು ಸತ್ಯಕ್ಕೆ ದೂರವಾಗಿದೆ ಅಲ್ಲದೇ ಒಂದು ಲೋಡ್ ಮರಳಿಗೆ 30 ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಕೂಡಾ ಸತ್ಯಕ್ಕೆ ದೂರವಾಗಿದೆ ಎಂದು ಹೊನ್ನಾವರ ಶರಾವತಿ ನದಿ ಮರಳು ಗುತ್ತಿಗೆದಾರ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ.

ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಸರಬರಾಜುಗುತ್ತಿದ್ದ ಮರಳುಗಾರಿಕೆಯ ಕಮಿಷನ್ ಹಾಗೂ ದರ ವಿಷಯದ ಕುರಿತು ಶಾಸಕ ಸುನೀಲ ನಾಯ್ಕ ಹೇಳಿಕೆಗೆ ತಾರಿಬಾಗಿಲು ಮರಳು ಗುತ್ತಿಗೆದಾರ ಸಂಘವು ಖಂಡಿಸಿದೆ.

ಶಾಸಕ ಸುನೀಲ ನಾಯ್ಕ ಮಂಕಿಯಲ್ಲಿ ಬಿಜೆಪಿ ಯುವಮೋರ್ಚಾ ಸಭೆಯಲ್ಲಿ ಆಡಿದ ಮಾತು ಅಧಿಕೃತ ಮರಳುಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಅವರು ಸಭೆಯಲ್ಲಿ ಹಿಂದಿನ ಶಾಸಕರಿಗೆ ಮರಳು ಪರವಾನಗಿಯವರು ಹಣ ನೀಡುತ್ತಿದ್ದರು ಎಂದು ಹೇಳಿದ್ದರು. ಆದರೆ ಈ ವಿಷಯ ಸತ್ಯಕ್ಕೆ ದೂರವಾಗಿದೆ ಎಂದು ತಾರಿಬಾಗಿಲು ಗುತ್ತಿಗೆದಾರ ಸಂಘದವರು ಪ್ರಕಟಣೆಯ ಮೂಲಕ ತಿಳಿಸಿದೆ.

ಯಾರೂ ಕೂಡಾ ಹಿಂದಿನ ಶಾಸಕರಿಗೆ ಆಗಲಿ, ಯಾವುದೇ ಜನಪ್ರತಿನಿಧಿಗಳಿಗಾಗಲಿ ಯಾವುದೇ ರೀತಿಯ ಹಣ ನೀಡಿರುವುದಿಲ್ಲ. ಅಲ್ಲದೇ ಒಂದು ಲೋಡ್ ಮರಳಿಗೆ 30 ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದು ಕೂಡಾ ಸತ್ಯಕ್ಕೆ ದೂರವಾಗಿದೆ.

ಕಳೆದ ಒಂದು ವರ್ಷದಿಂದ ಅಧಿಕೃತ ಮರಳುಗಾರಿಕೆ ನಡೆದಿಲ್ಲ. ಇದರಿಂದ ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಶಾಸಕರು ನೀಡಿದ ಹೇಳಿಕೆಯನ್ನು ಹೊನ್ನಾವರ ಶರಾವತಿ ನದಿ ಮರಳು ಗುತ್ತಿಗೆದಾರ ಸಂಘ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top