ಕಾಂಗ್ರೇಸ್ ಪಕ್ಷದ ಕಾರಣ ಇಂದು ಬಿಜೆಪಿ ಪಕ್ಷ ಸರಕಾರ ನಡೆಸುತ್ತಿದೆ

ಕುಮಾರ ಸ್ವಾಮಿ ಆಕ್ರೋಶ

ಭಟ್ಕಳ: ರಾಜ್ಯದಲ್ಲಿ ಜೆ.ಡಿ.ಎಸ್. ಮುಗಿಸಬೇಕು ಎನ್ನುವ ದುರಾಸೆಯಿಂದ ಕಾಂಗ್ರೆಸ್ ಪಕ್ಷ ಮಾಡಿದ ಅಪಪ್ರಚಾರವೇ ಇಂದು ರಾಜ್ಯದಲ್ಲಿ ಅತ್ಯಂತ ಕೆಟ್ಟ ಬಿ.ಜೆ.ಪಿ. ಸರಕಾರ ಆಡಳಿತ ಮಾಡಲು ಕಾರಣವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು


ಅವರು ಪಟ್ಟಣದ ರಿಕ್ಷಾ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಜೆ.ಡಿ.ಎಸ್. ಮುಗಿಸಲು ಹೋಗಿ ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಿದೆ. ತಾಕತ್ತಿದ್ದರೆ ಬಿ.ಜೆ.ಪಿ.ಯನ್ನು ನೇರವಾಗಿ ಎದುರಿಸಿ ಎಂದು ಸವಾಲು ಹಾಕಿದ ಅವರು ಕಾಂಗ್ರೆಸ್ ಪಕ್ಷ ಜೆ.ಡಿ.ಎಸ್.ಗೆ ಮುಸ್ಲಿಮರು ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಾವು ಒಮ್ಮೆ ಅನಿವಾರ್ಯವಾಗಿ ಬಿ.ಜೆ.ಪಿ. ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಮ್ಮ ಪಕ್ಷ ಮುಸ್ಲೀಮರ ಪರವಾಗಿಯೇ ಇದೆ ಎಂದು ಹೇಳಿದರು.
ಕಳೆದ ೧೪ ತಿಂಗಳು ಮುಖ್ಯ ಮಂತ್ರಿಯಾಗಿದ್ದಾಗ ಬಿ.ಜೆ.ಪಿ. ಪಕ್ಷವನ್ನು ಹಿಡತದಲ್ಲಿಟ್ಟುಕೊಂಡಿದ್ದರೂ ಸಹ, ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ (ಸಿದ್ದರಾಮಯ್ಯ ಅವರ ಹೆಸರು ಹೇಳದೇ) ಮುಂದಿನ ಮುಖ್ಯ ಆಗಬೇಕೆನ್ನುವ ಆಶೆಯಿಂದ ಬಿ.ಜೆ.ಪಿ.ಗೆ ಅಧಿಕಾರ ಹಿಡಿಯಲು ಸಹಾಯ ಮಾಡಿದರು ಎಂದು ಕಟುಕಿದರು.
ಬಿಜೆಪಿಯವರಿಗೆ ಜನತೆ ವಿದ್ಯಾವಂತರಾಗುವುದು ಬೇಡವಾಗಿದೆ. ಜನತೆಯನ್ನು ಮತ್ತೆ ಮನುಕುಲಕ್ಕೆ ಕರೆದುಕೊಂಡು ಹೋಗುವುದು ಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗೊAದು ೩೦ ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇವೆ. ೩ ವೈದ್ಯರು, ೩೦ ಸಿಬ್ಬಂದಿಗಳನ್ನು ಕೊಡುತ್ತೇನೆ.  ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು  ೫ ಸಾವಿರಕ್ಕೆ ಮತ್ತು ವಿಧವಾ ವೇತನವನ್ನು ೨೫೦೦ಕ್ಕೆ ಏರಿಕೆ ಮಾಡಲಾಗುವುದು ಎಂದರು.  ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಪ್ರಸ್ತಾವಿಕ ಮಾತನಾಡಿ, ಭಟ್ಕಳದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಕುಮಟಾದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಮಾತನಾಡಿದರು. ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಮಾಜಿ ಎಮ್ಮೆಲ್ಸಿ ರಮೇಶ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜವರ್ಧನ್ ನಾಯ್ಕ, ಮುಖಂಡರಾದ ಗಣಪತಿ ಭಟ್ಟ, ಅಲ್ತಾಪ್ ಖರೂರಿ, ಕೃಷ್ಣಾನಂದ ಪೈ, ಪಾಂಡುರAಗ ನಾಯ್ಕ, ಮಂಜು ಗೊಂಡ, ವೆಂಕಟೇಶ ನಾಯ್ಕ, ದೇವಯ್ಯ ನಾಯ್ಕ ಮುಂತಾದವರಿದ್ದರು. ಕುಂದಾಪುರ ಜೆಡಿಎಸ್ ಕ್ಷೇತ್ರಾಧ್ಯಕ್ಷ ಹುಸೇನ್ ಹೈಕಾಡಿ ನಿರೂಪಿಸಿದರು.

WhatsApp
Facebook
Telegram
error: Content is protected !!
Scroll to Top