ಭಟ್ಕಳ ಹೆಬ್ಳೆ ವ್ಯಾಪ್ತಿಯಲ್ಲಿ ಅನಕ್ಷರಸ್ಥರಂತೆ ಸೂಚಕ ನಾಮಫಲಕ ಅಳವಡಿಸಿದ ಪಿ ಡಬ್ಲೂಡಿ ಇಲಾಖೆ

ಅನಕ್ಷರಸ್ಥರೆ ಪಿ ಡಬ್ಲೂಡಿ ಇಲಾಖೆಯ ಅಧಿಕಾರಿಗಳು

ಸೂಚಕ ನಾಮಪಲಕ ಸರಿಪಡಿಸಿ ಇಲ್ಲವಾದಲ್ಲಿ ನಾಮಫಲಕವನ್ನು ತೆರವುಗೊಳಿಸುತ್ತೆವೆ : ಸಾರ್ವಜನಿಕರ ಆಕ್ರೋಶ

ಭಟ್ಕಳ : ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿ ಡಬ್ಲೂಡಿ ಇಲಾಖೆ ತಪ್ಪು ತಪ್ಪಾಗಿ ಅನಕ್ಷರಸ್ಥರಂತೆ ಸೂಚಕ ನಾಮ ಫಲಕವನ್ನು ಅಳವಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಹೌದು ವೀಕ್ಷಕರೆ ತಾಲೂಕಿನ ಹೆಬ್ಳೆ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಪಿಡಬ್ಲೂಡಿ ಇಲಾಖೆ ಅನಕ್ಷರಸ್ಥರಂತೆ ತಪ್ಪು ತಪ್ಪಾಗಿ ನಾಮ ಫಲಕವನ್ನು ಅಳವಸಿದೆ ಈ ಬಗ್ಗೆ ಈಗಾಗಲೆ ಇಲಾಖೆಯ ಗಮನಕ್ಕೂ ಕೂಡ ಆದ ತಪ್ಪಿನ ಬಗ್ಗೆ ತಿಳಿಸಲಾಗಿತ್ತು ಆದರೆ ಇಲಾಖಾ ಅಧಿಕಾರಿಗಳು ಮಾತ್ರ ದಪ್ಪ ಚರ್ಮದವರ ಹಾಗೆ ಸುಮ್ಮನೆ ಕುಳಿತುಕೊಂಡರೆ ಹೋರತು ಆದ ತಪ್ಪನ್ನು ಸರಿಪಡಿಸುವ ಗೋಜಿಗೆ ಹೋಗಲೆ ಇಲ್ಲಾ ಈ ಕಾರಣ ಸ್ಥಳಿಯ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ಈ ಬಗ್ಗೆ ಮನೋಹರ್ ನಾಯ್ಕ ಮಾತನಾಡಿ ಪಿಡಬ್ಲೂಡಿ ಇಲಾಖೆಯವರು ಅನಕ್ಷರಸ್ಥರೆ ಜನರಿಗೆ ಯಾಕೆ ತೊಂದರೆಯನ್ನು ನಿಡುತ್ತಿರಿ ಬೊರ್ಡ ಸರಿಪಡಿಸಿ ಇಲ್ಲವಾದಲ್ಲಿ ಸಾರ್ವಜನಿಕರಾದ ನಾವು ಈ ಬೊರ್ಡನ್ನು ತೆರವುಗೊಳಿಸುತ್ತೆವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು

WhatsApp
Facebook
Telegram
error: Content is protected !!
Scroll to Top