ಭಟ್ಕಳ ಮಾವಳ್ಳಿ 2 ಗ್ರಾಮ ಪಂಚಾಯತಕ್ಕೆ ಅಧ್ಯಕ್ಷರ ನೇಮಕ

ರಾಘವೇಂದ್ರ ಗೊಯ್ದಪ್ಪ ನಾಯ್ಕ ಮಾವಳ್ಳಿ 2 ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಟ್ಕಳ ತಾಲೂಕ ಮಾವಳ್ಳಿ 2 ಗ್ರಾಮ ಪಂಚಾಯತ ಅಧ್ಯಕ್ಷರಾಗಿ ರಾಘವೇಂದ್ರ ಗೊಯ್ದಪ್ಪ ನಾಯ್ಕ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಭಟ್ಕಳ ತಾಲೂಕಿನ ಮಾವಳ್ಳಿ 2 ಗ್ರಾಮ ಪಂಚಾಯತನ ಹಿಂದಿನ ಅಧ್ಯಕ್ಷರ ಬಗ್ಗೆ ಅಸಮಾದಾನ ಆಕ್ರೋಶಗಳು ಕೇಳಿಬಂದಿತ್ತು ಈ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿಯನ್ನು ಮಾಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು‌. ಇದರ ಮುಂದುವರಿದ ಭಾಗವಾಗಿ ಇಂದು ಬುದುವಾರ ಮಾವಳ್ಳಿ ಎರಡರ ಅಧ್ಯಕ್ಷರನ್ನಾಗಿ ರಾಘವೇಂದ್ರ ಗೊಯ್ದಪ್ಪ ನಾಯ್ಕ ಅವರನ್ನು ಯಾವುದೆ ವಿರೋದ ಮತಗಳಿಲ್ಲದೆ ಅವಿರೋದವಾಗಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ಹಿಂದಿನ ಅಧ್ಯಕ್ಷ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದು ಇದ್ದು ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಗೊಯ್ದಪ್ಪ ನಾಯ್ಕ ಅವರು ಕೂಡ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಎಂದು ತಿಳಿದು ಬಂದಿದೆ ಈ ಬಗ್ಗೆ ಆಯ್ಕೆಯಾದ ರಾಘವೇಂದ್ರ ನಾಯ್ಕ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಪಂಚಾಯತ್ ಅಭಿವೃದ್ದಿಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲಾಗುವುದು ನಮ್ಮಲ್ಲಿ ಯಾವುದೆ ಬಿನ್ನಾಭಿಪ್ರಾಯಗಳು ಇಲ್ಲಾ ನಾವೆಲ್ಲಾ ಒಟ್ಟಾಗಿ ಅಭಿವೃದ್ದಿಯತ್ತ ಗಮನ ಹರಿಸುತ್ತೆವೆ ಎಂದು ಹೇಳಿದರು

WhatsApp
Facebook
Telegram
error: Content is protected !!
Scroll to Top