ಭಟ್ಕಳ ಶಿರಾಲಿಯಲ್ಲಿ ಜಿ ಎಸ್ ಬಿ ಸಮಾಜದ ವಿನೂತನ ಕಾರ್ಯಕ್ರಮ ಊನ್ ಸೀತ್ ತೀಕ್ ಅಂಬಾಟ್

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಜಿ. ಎಸ್ .ಬಿ ಸಮಾಜದ ಸಮಾನ ಮನಸ್ಕರ ವತಿಯಿಂದ ಹೂನ್ ಶೀತ್ ತೀಕ್ ಅಂಬಾಟ್ ಎಂಬ ವಿನೂತನ ಮಾದರಿಯಕಾರ್ಯಕ್ರಮ ನೆರವೇರಿತು .


ಹೌದು ಕಳೆದ ಆರು ವರ್ಷಗಳಿಂದ ಹೂನ ಶೀತ ತೀಕ ಅಂಬಾಟ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಶಿರಾಲಿಯ ಜಿ.ಎಸ್‌.ಬಿ ಸಮಾಜದ ಸಮಾನ ಮನಸ್ಕರು ಸೇರಿ ಈ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ ಕಾರ್ಯಕ್ರಮದಲ್ಲಿ ಸ್ವ ಸಮಾಜದ ಎಲ್ಲಾ ಬಾಂಧವರಿಗೆ ಆಮಂತ್ರಿಸಲಾಗುತ್ತದೆ ಕಾರ್ಯಕ್ರಮದಲ್ಲಿ ಬಂದಂತಹ ಸಮಾಜ ಬಾಂಧವರಿಗೆ ವಿಶಿಷ್ಟವಾದ ಮೀನಿನ ಖಾದ್ಯ ಹಾಗೂ ವಿವಿಧ ರೀತಿಯ ಭಕ್ಷ ಭೋಜನ ಏರ್ಪಡಿಸಲಾಗಿರುತ್ತದೆ ಸಮಾಜದಲ್ಲಿ ಇಂತಹ ಕಾರ್ಯಕ್ರಮದಿಂದ ಒಗ್ಗೂಡುವಿಕೆ ಹಾಗೂ ಸಮಾಜ ಬಾಂಧವರಲ್ಲಿ ಪರಸ್ಪರ ಸಹಾಯ- ಸಹಕಾರ ಮನೋಬಲ ಹೆಚ್ಚಿಸಲು ಸಹಾಯವಾಗುತ್ತದೆ. ಒಬ್ಬರನ್ನು ಕಂಡರೆ ಇನ್ನೊಬ್ಬರು ಕಾಲು ಎಳೆಯುವ ಈಗಿನ ಕಾಲದಲ್ಲೂ ಅಂತವರನ್ನೆಲ್ಲ ಬದಿಗೆ ತೂರಿ ಸ್ವ ಸಮಾಜದ ಎಲ್ಲರೂ ಸೇರಿ ಕಾರ್ಯಕ್ರಮ ಚಂದಗಾಣಿಸಲು ಸಹಾಯ ಸಹಕಾರ ನೀಡಿದ್ದು ವಿಶೇಷವಾಗಿತ್ತು
ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಸ್ವ ಸಮಾಜದ ಮಹಿಳಾ ಮಣಿಗಳಿಂದ ನಮ್ಮ ದೇಶದ ಹಲವು ರಾಜ್ಯಗಳ ವೇಷ ಭೂಷಣಗಳ ಕುರಿತು ಸಾರುವ ನೃತ್ಯ ನಿರೂಪಣೆ ವೈವಿಧ್ಯತೆಯಲ್ಲಿ ಏಕತೆ ಎಂಬ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು ನಂತರ ಕಾರ್ಯಕ್ರಮದ ನಿಯೋಜಕರಾದ ಮಂಜುನಾಥ್ ಕಾಮತ್ ಅನಂತ ಶಾನ್ಭಾಗ್ ರಾಮದಾಸ್ ಮಹಾಲೆ ಇವರು ಹಲವಾರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಂತಹ ಸಮಾಜದ ಅಶೋಕ ಕಾಮತ್ ಅವರಿಗೆ ಶಾಲು ಹೊದಿಸಿ ಹಣ್ಣು ಹಂಪಲು ಹೂಗುಚ್ಚ ನೀಡಿ ಸನ್ಮಾನಿಸಲಾಯಿತು. ಇದಲ್ಲದೆ ಸ್ವ ಸಮಾಜ ಬಾಂಧವರಿಗಾಗಿ ಕ್ವಿಜ್ ಹಾಗೂ ಹಲವು ರೀತಿಯ ಮನೋರಂಜನಾ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು

WhatsApp
Facebook
Telegram
error: Content is protected !!
Scroll to Top