ಭಟ್ಕಳ ತಲಾಂದ ಮಾಲ್ಕಿ ಜಾಗದಿಂದ ಮಣ್ಣು ತೆಗೆಯುವುದರಿಂದ ರೈತರಿಗೆ ತೊಂದರೆ : ಸ್ಥಳಿಯ ಗ್ರಾಮಸ್ಥರಿಂದ ದೂರು

ಈ ದೂರು ರಾಜಕಿಯ ಪ್ರೇರೆಪಿತ : ಮಾಲ್ಕಿ ಜಾಗದ ಮಾಲಿಕ ಗಣಪತಿ ನಾಯ್ಕ ಪ್ರತಿಕ್ರಿಯೆ

ಭಟ್ಕಳ : ತಲಾಂದ ಗ್ರಾಮದ ಕಟ್ಟೇವೀರ ದೇವಸ್ಥಾನದ ಹತ್ತಿರವಿರುವ ಮಾಲ್ಕಿ ಜಮೀನಿನಲ್ಲಿ ಮಣ್ಣು ತೆಗೆದು ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರೇ ಗಾಡಿ ತಡೆದು ಪ್ರತಿಭಟಿಸಿದ್ದಾರೆ. ಗ್ರಾಮಸ್ಥರು ಈ ಸಂಬಂಧ ತಹಶಿಲ್ದಾರ ಕಾರ್ಯಾಲಯಕ್ಕೆ ತಮಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಕೊರಿದ್ದರು

ಈ ಸಂಭಂದ ಗ್ರಾಮಿಣ ಠಾಣೆಯ ಪೊಲಿಸ್‌ ಸಹಾಯಕ ನೀರಿಕ್ಷಕರಾದ ಭರತ್‌ ಆಗಮಿಸಿ ಸಂಪೂರ್ಣ ಮಾಹಿತಿ ಮತ್ತು ಸೂಕ್ತ ದಾಖಲೆಗಳನ್ನು ಪರಿಶಿಲಿಸಿ ಹಿರಿಯ ಅಧಿಕಾರಿಗಳೊದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಆಗಮಿಸಿ ದಾಖಲೆಗಳನ್ನು ಹಾಗೂ ಜನರ ಅಹವಾಲನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಗ್ರಾಮಸ್ಥರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಿಂತಿರುಗಿದ್ದಾರೆ.

ಮಾದ್ಯಮದೊಧಿಗೆ ಮಾತನಾಡಿದ ಸ್ಥಳಿಯರು ಇಲ್ಲಿ ಮಣ್ಣನ್ನು ತೆಗೆತ್ತಿರುವ ಬಗ್ಗೆ ನಮಗೆ ಸಮಸ್ಯೆ ಇಲ್ಲ. ಆದರೆ ಮಳೆಗಾಲದ ಪ್ರಾರಂಭದಲ್ಲಿ ಗುಡ್ಡದ ಮೆಲಿನಿಂದ ಹರಿದು ಬರುವ ನೀರು ಕೆಸರನ್ನು ತಂದು ಕೃಷಿ ಭುಮಿಯನ್ನು ಹಾಳು ಮಾಡುತ್ತಿದೆ. ಇದರಿಂದ ನಮಗೆ ಪ್ರತಿ ವರ್ಷ ಗದ್ದೆ ಸಾಗುವಳಿ ಮಾಡುವುದು ಕಷ್ಟಸಾಧ್ಯವಾಗುತ್ತಿದೆ. ಈ ಕ್ರಷಿ ಭುಮಿಯನ್ನು ನಂಬಿಕೊಂಡು ವರ್ಷಕ್ಕೆ ಬೇಕಾದಷ್ಟು ಉಟದ ಅಕ್ಕಿಯನ್ನು ತಯಾರಿಸಿ ಸಂಗ್ರಹಿಸಿ ಇಟ್ಟು ಕೊಳ್ಳುತಿದ್ದೇವೆ. ಬಡ ರೈತರ ಬಗ್ಗೆ ಸರ್ಕಾರವು ಎನು ಮಾಡುತ್ತಿಲ್ಲ ಎಂದು ತಮ್ಮ ಅಳಲನ್ನು ಮಾದ್ಯಮದವರಲ್ಲಿ ತೊಡಿಕೊಂಡರು.

ಜಮೀನಿನ ಮಾಲಿಕ ಗಣಪತಿ ನಾಯ್ಕ ಮಾತನಾಡಿ ನನ್ನಲ್ಲಿ ಮಣ್ಣು ತೆಗೆಯಲು ಸೂಕ್ತ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ಆಗಮಿಸುವ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಮಣ್ಣನ್ನು ತೆಗೆಯುತ್ತಿರುವುದರಿಂದ ಕೆಳಭಾಗದ ಕೃಷಿ ಜಮಿನಿಗೆ ಮಣ್ಣು ಸೇರುತ್ತಿಲ್ಲ ಇದು ರಾಜಕೀಯ ಪ್ರೇರಿತರಾಗಿ ಕೆಲವು ಜನ ವಿರೊಧ ವ್ಯಕ್ತಪಡಿಸುತ್ತಿದ್ದಾರೆ ಎಂದರು

WhatsApp
Facebook
Telegram
error: Content is protected !!
Scroll to Top