ಕೋಟಿ ವೆಚ್ಚದ ಕಾಮಗಾರಿ ಹೆಸರಲ್ಲಿ ಭಟ್ಕಳ ತಾಲೂಕ ಕುದುರೆ ಬೀರಪ್ಪ ದೇವಸ್ಥಾನ ಹೊಳೆ ವತ್ತುವರಿ ?

ಕಾಮಗಾರಿ ನಿಲ್ಲಿಸಿ ನೀವು ಮಾಡುವ ಕಾಮಗಾರಿಯಿಂದ ಸಾರ್ವಜನಿಕರಾದ ನಾವು ತೊಂದರೆಯನ್ನು ಅನುಭವಿಸುತ್ತೆವೆ

ಭಟ್ಕಳ ತಾಲೂಕಿನಲ್ಲಿ ಸಣ್ಣ ನಿರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯು ಕೋಟಿ ಕೋಟಿ ವೆಚ್ಚ ಮಾಡಿ ಕುದುರೆ ಬಿರಪ್ಪ ದೇವಸ್ಥಾನದ ಹೊಳೆ ಒತ್ತುವರಿ ನಡೆಸಿ ಖಾರಾ ಲ್ಯಾಂಡ್ ನಿರ್ಮಾಣಕ್ಕೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಸ್ಥಳಿಯ ಸಾರ್ವಜನಿಕರು ಕಾಮಗಾರಿ ನಿಲ್ಲಿಸಿ ಹೊಳೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ ಕಾಮಗಾರಿ ನಿಲ್ಲಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನಿಡಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಟ್ಕಳ ತಾಲೂಕಿನಲ್ಲಿ ಕೋಟಿ ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಬಹು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ‌ ಕಾಮಗಾರಿ ನಡೆಸುವುದು ಅಭಿವೃದ್ದಿಯ ಸಂಕೇತ ಆದರೆ ಕೊಟಿ ವೆಚ್ಚದ ಕಾಮಗಾರಿ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನು ನಿಡುವುದು ಎಷ್ಟರ ಮಟ್ಟಿಗೆ ಸರಿ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕುದುರೆ ಬಿರಪ್ಪ ದೇವಸ್ತಾನದ ಪಕ್ಕದಲ್ಲಿ ಖಾರಾ ಲ್ಯಾಂಡ್ ನಿರ್ಮಾಣ ಇಲ್ಲಿ ಈ ಕಾಮಗಾರಿ ಹೆಸರಲ್ಲಿ ಕೊಟಿ ಕೊಟಿ ವೆಚ್ಚಮಾಡಿ ದೇವಸ್ಥಾನದ ಪಕ್ಕದಲ್ಲಿರುವ ಹೊಳೆಗೆ ಮಣ್ಣು ಹಾಕಿ ಮುಚ್ಚಿ ಹಾಕುತ್ತಿದ್ದು ಈ ಬಗ್ಗೆ ನಮ್ಮ ವಾಹಿನಿಯು ಸುದ್ದಿಯನ್ನು ಬಿತ್ತರಿಸಿತ್ತು ಆದರು ಕೂಡ ಇಲಾಖೆ ಎಚ್ಚೆತ್ತುಕೊಳ್ಳದೆ ತಾನು ಮಾಡಿದ್ದೆ ಕಾನೂನು ಎಂಬಂತೆ ಕಾಮಗಾರಿಗೆ ಮಂದಾಗಿದೆ ಈ ಬಗ್ಗೆ ಇಲಾಖಾ ಇಂಜಿನಿಯರ್ ಅವರನ್ನು ನಮ್ಮ ವಾಹಿನಿ ಎಚ್ಚರಿಸುವ ಪ್ರಯತ್ನ ನಡೆಸಿದರು ಕೂಡ ಇಂಜಿನಿಯರ್ ತಾವು ಮಾಡುತ್ತಿರುವುದನ್ನು ಸಮರ್ತಿಸಿಕೊಂಡರೆ ಹೊರತು ಈ ಬಗ್ಗೆ ತಾವು ಮಾಡುತ್ತಿರುವ ಕೆಲಸ ಎಷ್ಟರಮಟ್ಟಿಗೆ ಸಮಾಜ ಮುಖಿಯಾಗಲಿದೆ ಎನ್ನುವುದನ್ನು ವಿಮರ್ಶಿಸುವ ಕೆಲಸವನ್ನು ಮಾಡಲಿಲ್ಲ .

ಇಲಾಖೆಯ ಈ ನಡೆಯಿಂದ ಸ್ಥಳಿಯ ಸಾರ್ವಜನಿಕರು ಆಕ್ರೋಶಿತಗೊಂಡಿದ್ದು ಈಗಾಗಲೆ ಪ್ರತಿಭಟನೆಯ ಹಾದಿಯನ್ನು ಹಿಡಿದಿರುವುದು ಬೆಳಕಿಗೆ ಬಂದಿದೆ ಕೋಟಿವೆಚ್ಚದಲ್ಲಿ ಕುದುರೆ ಬಿರಪ್ಪ ದೇವಸ್ಥಾನದ ಹೊಳೆಯನ್ನು ಮುಚ್ಚಿ ಹಾಕಬೇಡಿ ಹಾಕಿರುವ ಮಣ್ಣನ್ನು ತೆಗೆದು ಹೊಳೆಯನ್ನು ಉಳಿಸುವ ಕೆಲಸ ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಈ ಬಗ್ಗೆ ಮುಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗಪ್ಪ ನಾಯ್ಕ ಮಾತನಾಡಿ ಕೊಟಿ ವೆಚ್ಚದ ಕಾಮಗಾರಿ ಹೆಸರಲ್ಲಿ ಕುದುರೆ ಬಿರಪ್ಪ ದೇವಸ್ಥಾನದ ಪಕ್ಕದಲ್ಲಿರುವ ಹೊಳೆಯ ಅರ್ಧ ಭಾಗವನ್ನು ಮುಚ್ಚಿಹಾಕಲಾಗಿದೆ ಇದರಿಂದ ಮುಂದಿನ ದಿನಗಳಲ್ಲಿ ನೇರೆ ಹಾವಳಿ ಹೆಚ್ಚಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗುತ್ತದೆ ಕೂಡಲೆ ಹೊಳೆಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಿ ಕಾಮಗಾರಿಯನ್ನು ಸ್ಥಗಿತಗೋಳಿಸಿ ಇಲ್ಲವಾದಲ್ಲಿ ಪ್ರತಿಭಟನೆಯನ್ನು ಎದುರಿಸಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

ಒಟ್ಟಾರೆ ಸಾರ್ವಜನಿಕರ ಕೋಟಿಹಣ ಕಾಮಗಾರಿ ಹೆಸರಲ್ಲಿ ಪೋಲು ಮಾಡುವುದಲ್ಲದೆ ಸುಸಜ್ಜಿತ ಹೊಳೆಯೊಂದನ್ನು ಮುಚ್ಚಿಹಾಕುವುದರ ಮೂಲ ಈ ಚಿಕ್ಕ ನಿರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಬೆಲಿಯೆ ಎದ್ದು ಹೊಲ ಮೆಂದಂತೆ ವರ್ತಿಸುತ್ರಿದೆ.

WhatsApp
Facebook
Telegram
error: Content is protected !!
Scroll to Top