ಭಟ್ಕಳ ಶ್ರೀ ವಾಸುಕಿ ಸರ್ಪ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ

ಯತೀರಾಜ ಜೀಯರ್ ಸ್ವಾಮಿಜಿ ಶಿಷ್ಯವೃಂದ ದವರಿಂದ ಸುದ್ದಿಘೋಷ್ಟಿ

ಭಟ್ಕಳ ಇದೆ ಬರುವ 18/12/2022 ರಂದು ಬೆಳಿಗ್ಗೆ 10.30 ಕ್ಕೆ ಭಟ್ಕಳ ಸರ್ಪನಕಟ್ಟೆ ವಾಸುಕಿ ಸರ್ಪ ದೇವಸ್ಥಾನದಲ್ಲಿ ಶ್ರೀ ಶ್ರೀ ಯತೀರಾಜ ಜೀಯರ್ ಸ್ವಾಮೀಜಿ ಇವರಿಗೆ ಸಮಸ್ತ ಶಿಷ್ಯ ವೃಂದ ವಿವಿದ ಸಂಘ ಸಂಸ್ಥೆ ದೇವಾಲಯದ ಆಡಳಿತ ಮಂಡಳಿಯ ಸಹೋಗದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರ್ವರು ಕಾರ್ಯಕ್ರಮದಲ್ಲಿ ಬಾಗವಹಿಸಿ ಗುರುಗಳ ಕ್ರಪಾಕಟಾಕ್ಷಕ್ಕೆ ಪಾತ್ರರಾಗ ಬೇಕು ಎಂದು ವಾಸುಕಿ ಸರ್ಪ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ನಾಯ್ಕ ಹೇಳಿದರು

ಅವರು ಸರ್ಪನಕಟ್ಟೆ ವಾಸುಕಿ ದೇವಸ್ಥಾನದಲ್ಲಿ ಕರೆದ ಸುದ್ದಿಗೊಷ್ಡಿಯನ್ನು ಉದ್ದೇಶಿಸಿ ಮಾತನಾಡುತ್ತ ಇದೆ ಬರುವ 18/12/2022 ರಂದು ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ 9.30 ಕ್ಕೆ ಆಸರಕೇರಿಯಿಂದ ಬೈಕ್ರ್ಯಾಲಿ ಮುಖಾಂತರ ಯತಿವರ್ಯರನ್ನು ಸೊಡಿಗದ್ದೆ ಕ್ರಾಸ್ ವರೆಗೆ ಗುರುಗಳನ್ನು ಸ್ವಾಗತಿಸುವುದು ಹಾಗು 10 ಗಂಟೆಗೆ ಸೊಡಿಗದ್ದೆ ಕ್ರಾಸ್ ಇಂದ ಶ್ರೀಗಳನ್ನು ಚಂಡೆ ಡಕ್ಕೆ ಕುಣಿತ ಹೌದರಾಯನ ಕುಣಿತ ಹಾಗು ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಸರ್ಪನಕಟ್ಟೆಯ ಸರ್ಪಗಾವಲಿನ ಶಕ್ತಿಸ್ಥಳ ವಾಸುಕಿ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮದ ಜಗದ್ಗುರು ರಾಮಾನುಜಾಚಾರ್ಯ ವೇದಿಕೆಗೆ ಸ್ವಾಗತಿ, 10.30 ಕ್ಕೆ ಗುರುಪಾದುಕಾ ಪೂಜೆ ಗುರು ಬಿಕ್ಷೇ ಫಲಕಾಣಿಕೆ, ಸಮರ್ಪಣೆ ಶ್ರೀ ಯತೀರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಜಿಗಳ ಗುರುವಂದನಾ ಸಭಾ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಕೊಟ ಶ್ರೀನಿವಾಸ ಪೂಜಾರಿ , ಶಾಸಕ ಸುನಿಲ್ ನಾಯ್ಕ ಮಾಜಿ ಶಾಸಕ ಜೇಡಿ ನಾಯ್ಕ ಹೈಕೊರ್ಟ ವಕೀಲರಾದ ನಾಗೇಂದ್ರ ನಾಯ್ಕ ಭಾಗವಹಿಸಲಿದ್ದಾರೆ ಸರ್ವ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಬಾಗವಹಿಸ ಬೇಕು ಎಂದು ಹೇಳಿದರು

ಈ ಸಂದರ್ಬದಲ್ಲಿ ವಾಸುಕಿ ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷರು ಪಧಾಧಿಕಾರಿಗಳು ಇತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top