ಮಾವಳ್ಳಿ ನಂ 2 ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ನಾಯ್ಕ ವಿರುದ್ದ ಅವಿಶ್ವಾಸ ಗೊತ್ತುವಳಿ

ಅಧ್ಯಕ್ಷ ಮಹೇಶ ನಾಯ್ಕ ಹಿಟ್ಲರ್ ಮನೊಭಾವವೆ ಅವಿಶ್ವಾಸ ಗೊತ್ತುವಳಿಗೆ ಕಾರಣವಾಯಿತೆ

ಭಟ್ಕಳ : ಇಲ್ಲಿನ ಮಾವಳ್ಳಿ ಪಂಚಾಯತ್‌ ನಂ 2ರ ಸದಸ್ಯರು ಪಕ್ಷಾತಿತವಾಗಿ ಸಹಾಯಕ ಆಯುಕ್ತರಿಗೆ ಅಧ್ಯಕ್ಷ ಮಹೇಶ ನಾಯ್ಕ ವಿರುದ್ದ ಅವಿಶ್ವಾಸ ಗೊತ್ತುವಳಿ ಪಡಿಸಲು ಮನವಿಯನ್ನು ನೀಡಿದ ಘಟನೆ ಇಂದು ಸಂಜೆ 7-30ರ ಸರಿಸುಮಾರಿಗೆ ತಾಲೂಕಾ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆದಿದೆ.

ಮನವಿ ಸ್ವೀಕರಿದ ಸಹಾಯಕ ಆಯುಕ್ತೆ ಮಮತಾ ದೇವಿ ಜಿ ಎಸ್‌ ಮುಂದಿನ 10 ದಿನಗಳೊಳಗಾಗಿ ವೀಷೇಶ ಸಭೆಕರೆದು ಅವಿಶ್ವಾಸ ಗೊತ್ತುವಳಿಯ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದರು.

ಈ ಸಂಧರ್ಭದಲ್ಲಿ ಗ್ರಾ. ಪಂ ಸದಸ್ಯ ಶ್ರೀಧರ ಜಟ್ಟಾ ನಾಯ್ಕ. ಮಾತನಾಡಿ ಅಧ್ಯಕ್ಷರಾದ ಮಹೇಶ ನಾಯ್ಕ ಯಾವುದೇ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೇ ಎಕ ಪಕ್ಷೀಯವಾಗಿ ಮನಸೋ ಇಚ್ಚೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೇರಿದಂತೆ , ಮನೆ ಹಂಚಿಕೆ ವಿಷಯ, ಸಾಮಾನ್ಯ ಸಭೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲು ಸದಸ್ಯರಿಗೆ ಅವಕಾಶ ಸಿಗದಂತಹ ಪರಿಸ್ಥಿತಿಯನ್ನು ನಿರ್ಮಾನ ಮಾಡಿದ್ದಾರೆ ಅಲ್ಲದೆ ಕಳೆದ 3 ತಿಂಗಳುಗಳಿಂದ ಸಾಮಾನ್ಯ ಸಭೆಯನ್ನೆ ಕರೆದಿರುವುದಿಲ್ಲ. ಹಾಗೂ ಸದಸ್ಯರ ಅಧಿಕಾರವನ್ನು ಮೊಟಕುಗೋಳಿಸುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಈ ರೀತಿ ಸದಸ್ಯರ ಆಡಳಿತದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವರಿಂದಾಗಿ ಪಕ್ಷಾತೀತವಾಗಿ ಅವಿಶ್ವಾಸ ಗೊತ್ತುವಳಿಯ ಮನವಿ ನೀಡಲು ಬಂದಿರುವುದಾಗಿ ತಿಳಿಸಿದರು.

ಒಟ್ಟಾರೆ ಹಲವಾರು ದಿನಗಳಿಂದ ಅಧ್ಯಕ್ಷ ಮಹೇಶ ನಾಯ್ಕ ಅವರ ವಿರುದ್ದ ಸಾರ್ವಜನಿಕರು ಹಾಗು ಪಂಚಾಯತ್ ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು ಆದರು ಕೂಡ ಅಧ್ಯಕ್ಷ ಮಹೇಶ ನಾಯ್ಕ ತನ್ನ ಸ್ವಭಾವದಲ್ಲಿ ಬದಲಾವಣೆ ಮಾಡಿ ಕೊಳ್ಳುವ ಪ್ರಯತ್ನ ಮಾಡಲಿಲ್ಲ ಇದು ಇಂದು ಗ್ರಾಮ ಪಂಚಾಯತ್ ಸರ್ವ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ ಅವಿಶ್ವಾಸ ನಿರ್ಣಯದ ವರೆಗೆ ಬಂದು ಮುಟ್ಟಿದೆ ಇವರನ್ನು ಜನ ಸೇವೆ ಮಾಡಿ ಎಂದು ಮತದಾರರು ಆರಿಸಿ ಕಳಿಸಿದರೆ ತಾನು ನಡೆದಿದ್ದೆ ದಾರಿ ಎಂಬ ವರ್ತನೆ ತೋರಿಸಿದರೆ ಕೊನೆಗೆ ಆಗುವುದು ಇಂಥಹದ್ದೆ ಪರಿಸ್ಥಿತಿ ಎನ್ನುವುದು ಭಟ್ಕಳ ನಾಗರಿಕರ ಮಾತಾಗಿದೆ

ಈ ಸಂಧರ್ಭದಲ್ಲಿ ಪಂಚಾಯತನ ಉಪಾಧ್ಯಕ್ಷೆ ನಾಗರತ್ನ ಮೋಗೇರ, ಸದಸ್ಯರಾದ ರಾಜೇಂದ್ರ ನಾಯ್ಕ, ಅನಂತ ನಾಯ್ಕ, ಸುರೇಂದ್ರ ನಾಯ್ಕ, ರವಿ ಹರಿಕಾಂತ, ಅನರಾಧಾ ಡಿಕೊಸ್ಟಾ,, ಮಾದೇವಿ ನಾಯ್ಕ ಮತ್ತು ಮಮತಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top