ಭಟ್ಕಳ ಬೆಳ್ಕೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ

ಯಲ್ವಡಿಕವೂರ್ 18 ವರ್ಷದ ಯುವಕನ ಮೇಲೆ ಕೇಸುದಾಖಲು

ಭಟ್ಕಳ ತಾಲೂಕ ಬೇಳ್ಕೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳೆಯೊರ್ವರ ಮೇಲೆ ಅಂದಾಜು ೧೮ ವರ್ಷದ ಗುರುದ್ವಜ ರಮೇಶ ಗೊಂಡ ಎಂಬ ಯುವಕನೊರ್ವ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದು ಈತನ ಮೇಲೆ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಐ.ಪಿ ಸಿ ಸೆಕ್ಷನ್ 354 ರ ಅಡಿಯಲ್ಲಿ ನಾನ್ ಬೆಲೆಬಲ್ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ

ಬೆಳ್ಕೇ ಗ್ರಾಮ ಪಂಚಾಯತ್ ವ್ಯಾಪ್ರಿಯಲ್ಲಿ ದಿನಾಂಕ 05/12/2022 ರಂದು ಸುಮಾರು ಮದ್ಯಾನ 3 40 ರ ಹೊತ್ತಿಗೆ ಸುಷ್ಮಾ ಎಂಬ ಮಹಿಳೆಯೊರ್ವರು ತನ್ನ ಮನೆಯಲ್ಲಿರುವಾಗ ತಾಲೂಕಿನ ಯಲ್ವಡಿಕವೂರ್ ವ್ಯಾಪ್ತಿಯ ಗುರುದ್ವಜ ರಮೇಶ ಗೊಂಡ ಎಂಬ ಯುವಕ ಮನೆಯನ್ನು ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮಹಿಳೆಯ ಬೆನ್ನು ಮತ್ತು ಎದೆಯ ಬಾಗಕ್ಕೆ ಹಲ್ಲೆನಡೆಸಿರುತ್ತಾನೆ ಅಲ್ಲದೆ ಕುತ್ತಿಗೆ ಒತ್ತಿ ಕೊಲೆಗೆ ಪ್ರಯತ್ನ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ . ಇದೆ ಸಂದರ್ಬದಲ್ಲಿ ಯುವಕನ ಸಂಬಂದಿ ಎಂದು ಹೆಳಲಾಗುವ ಮಹಿಳೆಯೊರ್ವರು ಯುವಕನಿಗೆ ಸುಷ್ಮಾ ಎಂಬ ಈ ಮಹಿಳೆಯ ಮೇಲೆ ದೌರ್ಜನ್ಯ ನಡೆಸಲು ಸಹಕರಿಸಿದರು ಎಂದು ತಿಳಿದು ಬಂದಿದೆ ಈ ಹಲ್ಲೆಯ ಸಂದರ್ಬದಲ್ಲಿ ದೌರ್ಜನ್ಯಕೊಳಗಾಗುತ್ತಿರುವ ಮಹಿಳೆ ತಪ್ಪಿಸಿಕೊಂಡು ಹೊರಗೆ ಓಡಿ ಬರುತ್ತಿರುವಾಗ ಮಹಿಳೆಯ ಪತಿ ವಿಜೇಂದ್ರ ಮನೆಗೆ ವಾಪಾಸಾಗುತ್ತಾರೆ ಇದನ್ನು ನೊಡಿದ ಈ ಯುವಕ ಆತನ ಮೇಲೂ ಕಾಯಿ ಸುಲಿಯುವ ಸುಲ್ಮಣೆ ಹಾಗು ಹೆಲ್ಮೆಟ್ ಮೂಲಕ ಮುಖ ಬಾಯಿ ಕಣ್ಣುಗಳಿಗೆ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನ ನಡೆಸಿರುತ್ತಾನೆ ಎಂದು ತಿಳಿದು ಬಂದಿರುತ್ತದೆ ಪ್ರಕರಣ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದೆ

ಈ ಹಲ್ಲೆಗೆ ಸಂಬಂದಿಸಿದಂತೆ ಹಲ್ಲೆ ನಡೆಸಿದ ಯುವಕನ‌ ತಾಯಿ ಮಮತಾ ಎಂಬ ಮಹಿಳೆ ಕೂಡಾ ವಿಜೇಂದ್ರ ಎಂಬ ವ್ಯಕ್ತಿ ತನ್ನ ತಾಯಿ ಸುಮತಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

WhatsApp
Facebook
Telegram
error: Content is protected !!
Scroll to Top