ಅಡಕೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ನೀಡುವಂತೆವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ

.

ಸಿದ್ದಾಪುರ:- ವಿಪರೀತ ಮಳೆಯಿಂದ ತಾಲ್ಲೂಕಿನಾಧ್ಯಂತ ಅಡಕೆಗೆ ಕೊಳೆರೋಗ ಕಾಣಿಸಿಕೊಂಡಿದ್ದು, ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ನೀಡುವಂತೆ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಹಿರಿಯ ತೋಟಗಾರಿಕೆ ನಿರ್ದೇಶಕ ರಿಗೆ ತೋಟಗಾರಿಕೆ ಖಡಕ್ ಸೂಚನೆ ನೀಡಿದರು.
ಅವರು ತಾಲೂಕು ಆಡಳಿತ ಸೌಧದಲ್ಲಿ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ ತಾಲೂಕಿನ ಲ್ಲಿ ಕೊಳೆರೋಗ ಹೆಚ್ಚಗಿರುವ ಕುರಿತು ಮಾಹಿತಿ ಇದೆ. ಕೊಳೆ ರೋಗ, ಮಿಳ್ಳೆ ಉದರುವುದನ್ನು ತಡೆಯಲು ಸೂಕ್ತ ಮಾರ್ಗದರ್ಶನ ನೀಡಿ. ಕೊನೆಗೌಡರ ಕೊರತೆ ನೀಗಿಸಲು ಸಬ್ಸಿಡಿ ಯಲ್ಲಿ ದೋಟಿ ಎಷ್ಟು ಬೇಕು ಎನ್ನುವ ಮಾಹಿತಿಯನ್ನು ನೀಡುವಂತೆ ಅವರು ಸೂಚನೆ ನೀಡಿದರು.
ತಾಲೂಕಿನಲ್ಲಿ ಅತೀವೃಷ್ಠಿಯಿಂದ ಎರಡು ಸಾವು ಸಂಭವಿಸಿದೆ. ಹಿಂದೆ ಒಬ್ಬರಿಗೆ ಪರಿಹಾರ ನೀಡಲಾಗಿದೆ. ಇಂದು ಪ್ರಕೃತಿ ವಿಕೋಪದಲ್ಲಿ ಮೃತರಾದ ಬಿಳಗಿಯ ಚಿದಂಬರ್ ಕೆರಿಯಾ ಗೌಡ ರವರ ಪತ್ನಿ ಸುನಿತಾ ರವರಿಗೆ ಸರಕಾರದಿಂದ ನೀಡಲಾಗುವ ಪರಿಹಾರದ 5 ಲಕ್ಷ ಚೆಕ್ ನ್ನು ವಿತರಿಸಲಾಗಿದೆ.
ಶಾಲೆ, ಅಂಗನವಾಡಿ ಗಳ ಹತ್ತಿರ ಅಪಾಯ ದಲ್ಲಿರುವ ಮರಗಳನ್ನು ತೆಗೆಯಲು ಇಲಾಖೆಯ ಆಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ವಿಳಂಭವಾದರೆ ಗ್ರಾಮಸ್ಥರು, ಎಸ್.ಡಿ.ಎಮ್.ಸಿ ಯವರು ಅಂತಹ ಮರಗಳನ್ನು ತೆಗೆಯಿರಿ ಎಂದು ಅವರು ಸೂಚಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top