ಬೈಕ್ ರ್ಯಾಲಿಯೊಂದಿಗೆ ಸ್ವಾತಂತ್ರೋತ್ಸವ ಆಚರಿಸಿದ ಆಮ್ ಆದ್ಮಿ


ಸಿದ್ದಾಪುರ : ಸಿರ್ಸಿ ಸಿದ್ದಾಪುರ ಆಮ್ ಆದ್ಮಿ ತಂಡದವರು ಬೈಕ್ ರ್ಯಾಲಿ ಮಾಡುವುದರೊಂದಿಗೆ ವಿಶೇಷವಾಗಿ ಸ್ವಾತಂತ್ರೋತ್ಸವಆಚರಿಸಿ ಗಮನ ಸೆಳೆದರು
ಪಟ್ಟಣದ ರಾಘವೇಂದ್ರ ಮಠದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಗೋಳಗೊಡ್, ಕವಂಚೂರ್ ನೆಜ್ಜುರ್, ಮಳವಳ್ಳಿ, ಹಸುವಂತೆ, ಮನ್ಮನೆ ಯಿಂದ ಮಾವಿನಗುಂಡಿ ಗೆ ತೆರಳಿ ಮಹಿಳಾ ಸ್ವತಂತ್ರ ಹೋರಾಟ ಗಾರರ ಸ್ಮಾರಕ ಕ್ಕೆ ನಮನ ಸಲ್ಲಿಸಿ ಸ್ವಾತಂತ್ರೋತ್ಸವವನ್ನು ವಿಶೇಷವಾಗಿ ಆಚರಿಸಿದರು.
ರ್ಯಾಲಿಯಲ್ಲಿ ಹಿತೇಂದ್ರ ನಾಯ್ಕ್ ಮಾತನಾಡಿ ದೇಶದಲ್ಲಿ, ನಿರುದ್ಯೋಗ ತೊಲಗಿ, ಭ್ರಷ್ಟಾಚಾರ ನಿರ್ಮೂಲನೆ ಯಾಗಿ ಆರ್ಥಿಕ ವಾಗಿ ದೇಶ ಸುಭದ್ರ ವಾಗಿ ಬೆಳೆಯಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.
ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ್ ಮಾತನಾಡಿ ನಮ್ಮ ದೇಶ ನಮ್ಮ ಹೆಮ್ಮೆ . ಈ ಸಂಭ್ರಮ ಎಲ್ಲಾ ಸಮಯದಲ್ಲಿಯೂ ಇರಬೇಕಾದರೆ ಶಾಂತಿಯಿಂದ ಬಾಳಬೇಕು ಎಂದರು. ರಾಘವೇಂದ್ರ ಕವಂಚೂರ್, ಹನೀಫ್ ಬ್ಯಾರಿ, ಲಕ್ಷಣ ನಾಯ್ಕ್ ಶ್ರೀಮತಿ ಮಂಜುಳಾ,ಆಕಾಶ್ ಕೊಂಡ್ಲಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

WhatsApp
Facebook
Telegram
error: Content is protected !!
Scroll to Top