ಪರೇಶ ಮೆಸ್ತಾ ಹತ್ಯೆಯನ್ನು ಬಿಜೆಪಿ ಅಧಿಕಾರ ಹಿಡಿಯಲು ಮೆಟ್ಟಿಲಂತೆ ಉಪಯೋಗಿಸಿಕೊಂಡಿದೆ : ಜಗದೀಪ ತೆಂಗೇರಿ

ಪರೇಶ ಮೇಸ್ತ ಪ್ರಕರಣವನ್ನು ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆ ಗೆಲ್ಲಲು ಮಾತ್ರ ಬಳಸಿಕೊಂಡು ಅಧಿಕಾರಕ್ಕೆ ಬಂದ ಬಳಿಕ ಟಿಶ್ಯೂ ಪೇಪರ್ ರೀತಿ ಬಿಸಾಕಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ ಗಂಭೀರ ಆರೋಪ ಮಾಡಿದ್ದಾರೆ.


ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಲಯದಲ್ಲಿ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರೇಶ ಮೇಸ್ತ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುಲಾಗುತ್ತಿದ್ದ ಆಜಾದ್ ಅಣ್ಣೆಗೇರಿ ಇವರನ್ನು ವಕ್ಟ ಮಂಡಳಿಯ ಜಿಲ್ಲಾ ಉಪಾಧ್ಯಕ್ಷನಾಗಿ ನೇಮಕ ಮಾಡಿರುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇದೊಂದು ಸರ್ಕಾರದ ಫೆಲ್ಯೂರ್ ನಿರ್ಧಾರ. ಮೇಸ್ತ ಪ್ರಕರಣಕ್ಕೆ ಸಂಭದಿಸಿದಂತೆ ರಾಜ್ಯದ ಬಿಜೆಪಿ ಸರ್ಕಾರ ನೀಡಿದ ಗಿಪ್ಟ ಆಗಿದೆ. ನೇಮಕಾತಿ ನಡೆದು ಆದೇಶ ಪ್ರತಿ ಬಂದಾಗಲೂ ಬಿಜೆಪಿಯವರು ಎಚ್ಚೆತ್ತಕೊಳ್ಳದೇ ಮಾಧ್ಯಮ ಹಾಗೂ ಕಾಂಗ್ರೇಸ್ ಪಕ್ಷ ಮತ್ತು ಅನೇಕ ಪರೇಶ್ ಅಭಿಮಾನಿಗಳ ಆಕ್ರೋಶದ ಬಳಿಕ ತಡೆ ನೀಡಿದೆ.
ಈ ನೇಮಕಾತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚೀವರಾದಿ ಕೆಲ ಬಿಜೆಪಿಯವರು ಕಾಂಗ್ರೇಸ್ ನೀಡಿರುವ ಪಟ್ಟಿ ಎಂದು ಬಾಲಿಶತನದ ಹೇಳಿಕೆ ನೀಡುತ್ತಾರೆ. ವಿರೋಧ ಪಕ್ಷ ಕಳುಹಿಸಿದವರನ್ನು ನೇಮಕ ಮಾಡುದಾದರೆ, ಮಂತ್ರಿಗಳಾಗಿ, ನಿಗಮ ಮಂಡಳಿಯ ಅಧ್ಯಕ್ಷರನ್ನು ನೇಮಕ ಮಾಡಿ ನಮ್ಮ ಸರ್ಕಾರ ಅವಧಿಯಲ್ಲಿ ಹಲವರಿಗೆ ಅವಕಾಶ ಸಿಕ್ಕಿರಲಿಲ್ಲ ಆ ಪಟ್ಟಿಯನ್ನು ನಾವು ನೀಡುತ್ತೇವೆ ನೇಮಕ ಮಾಡುತ್ತಿರಾ? ಎಂದು ಪ್ರಶ್ನಿಸಿದ್ದಾರೆ. ಈ ನೇಮಕಾತಿಯಲ್ಲಿ ಜಿಲ್ಲೆ ಹಾಗೂ ತಾಲೂಕು, ಮತ್ತು ರಾಜ್ಯದ ಯಾವುದೇ ಕಾಂಗ್ರೇಸ್ ಪಕ್ಷದವರ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದರು. ಜಾಹೀರಾತಿನಲ್ಲಿ ಪಕ್ಷದ ಮಾಜಿ ಸಚೀವರ ಹಾಗೂ ಶಾಸಕರ ಹೆಸರು ಹಾಕಿದ್ದಾರೆ ಆದರೆ ಅವರ ಗಮನಕ್ಕೂ ಈ ಜಾಹೀರಾತು ಪ್ರಕಟವಾದ ಬಳಿಕವೇ ಮನವರಿಕೆ ಆಗಿದೆ. ಪರೇಶ ಪ್ರಕರಣದಲ್ಲಿ ಆರೋಪಿ ಆದ ಮೇಲೆ ಪಕ್ಷ ಅವರನ್ನು ದೂರವಿಟ್ಟಿದ್ದರು. ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಟಿಕೇಟ್ ನೀಡಿರಲಿಲ್ಲ. ಬ್ಲಾಕ್ ಅಧ್ಯಕ್ಷ ಹಾಗೂ ಪಕ್ಷ ಬಿ. ಫಾರಂ ನೀಡಿದ ಅಭ್ಯರ್ಥಿ ವಿರುದ್ದ ಸ್ಪರ್ಧೆ ಮಾಡಿದಾಗ ತಾಲೂಕ ಮಟ್ಟದಿಂದ ಪಕ್ಷದಿಂದ ಉಚ್ಛಾಟನೆ ಮಾಡಿ ಕಳುಹಿಸಲಾಗಿದೆ ಎಂದು ಆದೇಶ ಪ್ರತಿಯನ್ನು ಪ್ರದರ್ಶಿಸಿದರು.
ಪರೇಶ ಪ್ರಕರಣ ನಡೆದು ತಾಲೂಕಿನಲ್ಲಿ ಕೋಮು ಗಲಭೆ ಉಂಟಾಗಿ ಎಲ್ಲರ ಮಧ್ಯೆ ಒಡಕು ಮೂಡಿತು. ಪ್ರಕರಣವನ್ನು ಸಿ.ಬಿ.ಐಗೆ ವರ್ಗಾಹಿಸಲಾಯಿತು. ಅಂದು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯವರು ಅಧಿಕಾರಕ್ಕೆ ಬಂದು ಐದು ವರ್ಷ ಸಮೀಪಿಸುತ್ತಾ ಬಂದರೂ ಪ್ರಕರಣದ ಬಗ್ಗೆ ಮಾಹಿತಿ ದೊರೆತಿಲ್ಲ. “ಹನಿ ಹನಿ ರಕ್ತಕ್ಕೂ ನ್ಯಾಯ ಕೊಡುತ್ತೇವೆ” ಎಂದವರು ಅಧಿಕಾರ ಅನುಭವಿಸುತ್ತಿದ್ದಾರೆ ಹೊರತು ನ್ಯಾಯದ ಮಾತು ಮರೆತಿದ್ದಾರೆ ಎಂದು ಗಂಭಿರ ಆರೋಪ ಮಾಡಿದರು..
ಪತ್ರಿಕಾಗೊಷ್ಟಿಯಲ್ಲಿ ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ಪುಷ್ಪಾ ಮಹೇಶ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ, ನಗರದ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಸಾಮಾಜಿಕ ಜಾಲತಾಣದ ವಿಭಾಗದ ಅಧ್ಯಕ್ಷ ಸುಭಾಷ ಮೇಸ್ತ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಇಂಟೆಕ್ ಕಾರ್ಯದರ್ಶಿ ಕೇಶವ ಮೇಸ್ತ, ಸೇವಾದಳ ವಿಭಾಗದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕಾರಿಮನೆ, ಮುಖಂಡರಾದ ಶ್ರೀಕಾಂತ ಮೇಸ್ತ, ಉದಯ ಮೇಸ್ತ, ಮಹೇಶ ನಾಯ್ಕ, ದೀಪಕ ನಾಯ್ಕ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top