ಸಾರ್ವಜನಿಕ ವಲಯದಲ್ಲಿ ಜನಾನುರಾಗಿ ಮಂಕಾಳ ವೈಧ್ಯ ಶಾಸಕರಾಗಲಿ ಎಂಬ ಬೇಡಿಕೆ

ತಿರ್ಥಯಾತ್ರೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿರುವ ಮಂಕಿಯ ಯುವಕ

ಹೊನ್ನಾವರ : ತಾಲೂಕಿನ ಮಂಕಿಯ ಯುವಕನೋರ್ವನು ಮಾಜಿ ಶಾಸಕ ಮಂಕಾಳ ವೈದ್ಯರು ಮುಂಬರುವ 20023 ರ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗಲಿ ಎಂಬ ಹರಕೆಯನ್ನು ಮುಂದಿಟ್ಟುಕೊಂಡು ತಿರ್ಥಯಾತ್ರೆಯನ್ನು ಕೈಗೊಂಡಿದ್ದಾನೆ ಇದು ಮಂಕಾಳ ವೈಧ್ಯರು ತಮ್ಮ ಅಧಿಕಾರ ಅವದಿಯಲ್ಲಿ ಜನಪರವಾಗಿ ಕೆಲಸ ಮಾಡಿರುವುದಕ್ಕೆ ಹಿಡಿದ ಕೈಗನ್ನಡಿ ಈ ಬಗ್ಗೆ ವರದಿ ಇಲ್ಲಿದೆ ನೋಡಿ

ಎಷ್ಟು ಹಣ ಮಾಡಿದೆ ಎಷ್ಟು ಆಸ್ತಿಯನ್ನು ಗಳಿಸಿದೆ ಎಂದು ಯಾರು ಯಾರನ್ನು ಕೇಳುವುದಿಲ್ಲಾ ಹೇಗೆ ಬದುಕಿದೆ ಎಷ್ಟು ಜನಪರವಾಗಿ ಕೆಲಸ ಮಾಡಿದೆ ಎಷ್ಟು ಜನರ ಆತ್ಮಿಯತೆಯನ್ನು ಗಳಿಸಿದೆ ಎನ್ನುವುದೇ ಮುಖ್ಯವಾಗಿರುತ್ತದೆ ಅಧಿಕಾರ ಇಂದು ಇದ್ದರೆ ನಾಳೆ ಇರುವುದಿಲ್ಲಾ ಆದರೆ ನಾವು ಬಡವರ ಕಣ್ಣೋರೆಸಿದರೆ ಕಷ್ಟಕಾಲದಲ್ಲಿ ಅಬಲರ ಕೈ ಹಿಡಿದರೆ ಅಂತಹ ವ್ಯಕ್ತಿಯನ್ನು ಯಾರು ಮರೆಯುವುದಿಲ್ಲಾ ಇದಕ್ಕೆ ಜ್ವಲಂತ ಸಾಕ್ಷಿ ಎಂದರೆ ಮಾಜಿ ಶಾಸಕ ಮಂಕಾಳ ವೈದ್ಯರು ಎಂದರೆ ತಪ್ಪಾಗಲಿಕ್ಕಿಲ್ಲಾ ಇವರು ಅಧಿಕಾರದಲ್ಲಿರಲಿ ಇಲ್ಲದಿರಲಿ ಇವರು ಯಾವಾಗಲು ಜನಪರವಾಗಿ ನಿಲ್ಲುತ್ತಾರೆ ಯಾರಾದರು ಕಷ್ಟದಲ್ಲಿ ಇವರ ಮನೆಯ ಬಾಗಿಲಲ್ಲಿ ನಿಂತರೆ ಅಂತವರನ್ನು ಬರಿಗೈಯಲ್ಲಿ ಮಕಳಿಸಿದ ಉದಾಹರಣೆಗಳೆ ಇಲ್ಲಾ ಇಂದು ಇವರು ಅಧಿಕಾರದಲ್ಲಿಲ್ಲಾ ಆದರೆ ಇಂದೂ ಕೂಡ ಇವರ ಮನೆಗೆ ಸಹಾಯ ಕೇಳಿಕೊಂಡು ಹೋಗುವವರ ಸಂಖ್ಯೆ ಇವರು ಶಾಸಕರಾಗಿದ್ದಾಗ ಎಷ್ಟಿತ್ತೋ ಅಷ್ಟೆ ಇದೆ ಇವರ ಜನಪರ ಕಾಳಜಿಗೆ ದಿನದಿಂದ ದಿನಕ್ಕೆ ಇವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ
ಇವರ ಜನಪರ ಕಾಳಜಿಯ ಕಾರಣ ನಿಸ್ವಾರ್ಥದಿಂದ ಇವರ ಒಳಿತನ್ನೆ ಬಯಸುತ್ತಾರೆ ಎಂದರೆ ತಪ್ಪಿಲ್ಲಾ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹೊನ್ನಾವರ ಮಂಕಿಯ ದಾಮೋದರ ಎಮ್ ಎಸ್ ಎಂಬ ಓರ್ವ ಸಾಮಾನ್ಯ ಯುವಕ ಮಂಕಾಳ ವೈಧ್ಯರ ಮೇಲಿನ ಪ್ರೀತಿ ಅಭಿಮಾನಕ್ಕಾಗಿ ಅವರು ಮುಂಬರುವ 20023 ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಲಿ ಎಂಬ ಹರಿಕೆಯನ್ನು ಹೊತ್ತು ತಿರ್ಥಯಾತ್ರೆಯನ್ನೆ ಕೈಗೊಂಡಿದ್ದಾನೆ ಮುಖ್ಯವಾಗಿ ಇತನು ಯಾವುದೆ ಪಕ್ಷದ ಕಾರ್ಯಕರ್ತನಲ್ಲ ಮಂಕಿಯ ಒಬ್ಬ ಸಾಮಾನ್ಯ ಯುವಕನಾಗಿದ್ದಾನೆ ಇವನ ಅಭಿಮಾನದಿಂದ ನಾವು ಮಂಕಾಳ ವೈದ್ಯರು ಎಷ್ಟು ಜನಪರ ಎಂಬುವುದನ್ನು ತಿಳಿದುಕೊಳ್ಳಬಹುದಾಗಿ
ಪ್ರಾರ್ಥನೆಗಳಿಗೆ ತುಂಬಾ ಶಕ್ತಿಯಿದೆ ಎಂಬ ನಂಬಿಕೆ ಎಲ್ಲರದ್ದು ನಾವು ಪ್ರೀತಿಸುವವರ ಒಳಿತಿಗಾಗಿ ಪ್ರಾರ್ಥಿಸಿದರೆ ಅದು ಖಂಡಿತ ಫಲಿಸುತ್ತದೆಂಬ ವಿಶ್ವಾಸ.
ಪಕ್ಷದ ಕಾರ್ಯಕರ್ತನೂ ಅಲ್ಲದ ಮಂಕಿ ಊರಿನ ದಾಮೋದರ್ ಎಮ್ ಎಸ್ ಎಂಬ ಸಾಮಾನ್ಯ ಅಭಿಮಾನಿಯಾದ ಈತ ಚಾರ್ಧಾಮ್”(ಯಮುನೋತ್ರಿ,ಗಂಗೋತ್ರಿ,ಕೇದಾರನಾಥ,ಬದ್ರಿನಾಥ)ಯಾತ್ರೆಯಲ್ಲಿ ಇದ್ದಾನೆ,2023ರ ಚುನಾವಣೆ ಘೋಷಣೆಯು ಆಗಿಲ್ಲ,ಇಂತಹ ಸಮಯದಲ್ಲಿ ತನ್ನ ಕ್ಷೇತ್ರದಿಂದ ಮಂಕಾಳವೈದ್ಯರು ವಿಜಯಿಯಾಗಲಿ ಎಂದು ಮೊರೆಯಿಡುತ್ತಿದ್ದಾನೆ
ಉತ್ತರಖಂಡ್ ನಲ್ಲಿರುವ ಛಾರ್ ಧಾಮ್ ಯಾತ್ರೆ ಮುಗಿಸಿ ಅಮರನಾಥ ಹಾಗೂ ವೈಶ್ನೋದೇವಿ ಯಾತ್ರೆಗೆ ತೆರಳುತ್ತಿರುವ ಅವನ ಯಾತ್ರೆ ಯಶಸ್ವಿಯಾಗಲಿ. ಎಂದು ಮಾಜಿ ಶಾಸಕ ಮಂಕಾಳ ವೈಧ್ಯರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ

ಒಟ್ಟಾರೆ ರಾಜಕಾರಣಿಗಳು ಜನಪರರಾಗಿದ್ದರೆ ಅವರು ಅಧಿಕಾರದಲ್ಲಿರಲ್ಲಿ ಇಲ್ಲದಿರಲಿ ಸಾರ್ವಜನಿಕರು ಅವರ ಜನಪರ ಕಾಳಜಿಯನ್ನು ಯಾವತ್ತು ಮರೆಯಲಾರರು ಎನ್ನುವುದನ್ನು ಮಾಜಿ ಶಾಸಕ ಮಂಕಾಳ ವೈಧ್ಯರು ತೋರಿಸಿಕೊಟ್ಟಿದ್ದಾರೆ ಮುಂದಿನ ಚುನಾವಣೆಯಲ್ಲಿ ವಿಜಯದ ಜಯಮಾಲೆ ಅವರದ್ದಾಗಲಿ ಎನ್ನುವುದು ಭಟ್ಕಳ ಹೊನ್ನಾವರದ ವಿಧಾನ ಸಭಾ ಕ್ಷೇತ್ರದ ಅವರ ಅಭಿಮಾನಿಗಳ ಮಹದ್ದಾಸೆಯಾಗಿದೆ

WhatsApp
Facebook
Telegram
error: Content is protected !!
Scroll to Top