ಭಟ್ಕಳ ಹೆಬ್ಳೇ ಪಂಚಾಯತ್‌ ಹೊನ್ನೆಗದ್ದೆ ವಾರ್ಡಿನಲ್ಲಿ ಮಳೆಗಾಲ ಪ್ರಾರಂಭವಾದರು ಹುಳೆತ್ತದೆ ಗ್ರಾಮ ಪಂಚಾಯತ್‌

ಭ್ರಷ್ಟಾಚಾರದ ಬಗ್ಗೆ ದ್ವನಿ ಎತ್ತಿದ್ದೆ ಗ್ರಾಮ ಪಂಚಾಯತ್‌ ಮುನಿಸಿಗೆ ಕಾರಣವಾಯಿತೆ ?

ಶೀಘ್ರದಲ್ಲಿ ಚರಂಡಿ ಹುಳೆತ್ತದಿದ್ದಲ್ಲಿ ಗ್ರಾಮ ಪಂಚಾಯತ್‌ ಮುಂದೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ರಾಜ್ಯ ಮಾಹಿತಿ ಹಕ್ಕು ಸಂಘಟನೆಯ ತಾಲೂಕ ಕಾರ್ಯದರ್ಶಿ ನಾಗೇಶ ನಾಯ್ಕ

ಭಟ್ಕಳ: ತಾಲೂಕಿನ ಹೆಬ್ಳೇ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊನ್ನೆಗದ್ದೇ ವಾರ್ಡನಲ್ಲಿ ಮಳೆಗಾಲ ಪ್ರಾರಂಬವಾದರು ಇಲ್ಲಿಯವರೇಗೂ ಚರಂಡಿ ಹುಳೆತ್ತುವ ಕಾರ್ಯವನ್ನು ಮಾಡುತ್ತಿಲ್ಲಾ ಒಂದು ವೇಳೆ ಚರಂಡಿ ಹುಳೆತ್ತದಿದ್ದಲ್ಲಿ ಗ್ರಾಮ ಪಂಚಾಯತ್‌ ಮುಂದೆ ಪ್ರತಿಭಟನೆ ನಡೆಸಲಾಗುದು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಭಟ್ಕಳ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಅವರ ಹೊರಾಟದಿಂದ ತಾಲೂಕಿನ ಹೆಬ್ಕೇ ಪಂಚಾಯತಲ್ಲಿ ಭ್ರಷ್ಟಾಚಾರ ನಡೆದಿರುದು ಸಾಭಿತಾಗಿದೆ ಪ್ರಕರಣ ತನಿಖೆಯ ಹಂತದಲ್ಲೂ ಕೂಡಾ ಇದೆ ಈಗ ಇದೆ ಗ್ರಾಮ ಪಂಚಾಯತ್‌ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ ಅದೆ ಹೊನ್ನೆಗದ್ದೆ ವಾರ್ಡ ಚರಂಡಿಯ ಹೂಳನ್ನು ಎತ್ತದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಕಳೆದ ಬಾರಿ ಈ ಹೊನ್ನೆಗದ್ದೆ ಚರಂಡಿ ಹೂಳೆತ್ತುವ ಪ್ರಕ್ರಿಯೆಯಲ್ಲಿ ಗೋಲ್‌ ಮಾಲ್‌ ನಡೆದಿರುವುದು ಇದೆ ಆರ್‌ ಟಿ ಐ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ ಬೇಳಕಿಗೆ ತಂದಿದ್ದರು ಇದ್ದನ್ನೆ ಕಾರಣವನ್ನಾಗಿಟ್ಟುಕೊಂಡು ಗ್ರಾಮ ಪಂಚಾಯತ್‌ ಈ ಭಾರಿ ಚರಂಡಿಯ ಹೂಳನ್ನೆ ಎತ್ತಲು ಮುಂದಾಗಿಲ್ಲಾ ಎಂಬ ಆಕ್ರೋಶಗಳು ಹೊನ್ನೆಗದ್ದೆಯಲ್ಲಿ ಕೇಳಿಬರುತ್ತಿದೆ

ಈ ಬಗ್ಗೆ ನಾಗೇಶ ನಾಯ್ಕ ಮಾತನಾಡಿ ಹೊನ್ನೆಗದ್ದೆ ವಾರ್ಡಿನ ಚರಂಡಿಯ ಹೂಳನ್ನು ಮಳೆಗಾಲ ಪ್ರಾರಂಬವಾದರು ತೆಗೆಯುತ್ತಿಲ್ಲಾ ಈ ಬಗ್ಗೆ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳಲ್ಲಿ ಹೋಳೆತ್ತುವ ಬಗ್ಗೆ ಮಾತನಾಡಿದರೆ ಅಧ್ಯಕ್ಷರನ್ನು ಕೇಳಿ ಎಂದು ಹೇಳುತ್ತಾರೆ ಅಧ್ಯಕ್ಷರನ್ನು ಕೇಳಿದರೆ ಸದಸ್ಯರನ್ನು ಕೇಳಿ ಎಂದು ಹೇಳುತ್ತಾರೆ ಭ್ರಷ್ಟಾಚಾರವೆ ತುಂಬಿರುವ ಹೆಬ್ಳೆ ಗ್ರಾಮ ಪಂಚಾಯತ್‌ ಅಲ್ಲಿ ಯಾವುದೇ ಕಾಮಗಾರಿಯು ನಡೆಯುತ್ತಿಲ್ಲಾ ಒಂದು ವೇಳೆ ಈ ಚರಂಡಿಯ ಹೋಳನ್ನು ಎತ್ತದಿದ್ದಲ್ಲಿ ಗ್ರಾಮ ಪಂಚಾಯತ್‌ ಮುಂಬಾಗದಲ್ಲಿ ಪ್ರತಿ ಭಟನೆ ನಡೆಸಲಾಗುದು ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top