ಮೀನುಗಾರರಗೋಳನ್ನು ಆಲಿಸದೆ ಕಥೆ ಕಟ್ಟುತ್ತಿರುವ ಅಧಿಕಾರಿಗಳು ಮತ್ತು ಜನ ಪ್ರತಿನಿದಿಗಳು
ಹೊನ್ನಾವರ: ತಾಲೂಕಿನ ಕಾಸರಗೋಡು ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯ ಸಂಬಂದ ಅಧಿಕಾರಿಗಳು ಮತ್ತು ಸಾರ್ವಜನಿಕರು ಮಿನುಗಾರರ ನಡುವೆ ಜಟಾಪಟಿ ಮುಂದುವರಿದಿದ್ದು ನಿರ್ಮಾಣ ಹಂತದ ರಸ್ತೆಯಲ್ಲಿ ಭಾರಿ ಗಾತ್ರದ ಯಂತ್ರವನ್ನು ವಾಹನದಲ್ಲಿ ಸಾಗಿಸುವ ಸಂದರ್ಬದಲ್ಲಿ ಸ್ಥಳಿಯ ಮೀನುಗಾರರು ತಡೆದು ಪ್ರತಿಭಟಿಸಿದಲ್ಲದೆ ಮಹಿಳೆಯರಲ್ಲಿ ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಹಿಂದಿನಿಂದಲೂ ಹೊನ್ನಾವರ ಕಾಸರಗೋಡು ಬಂದರು ಕಾಮಗಾರಿಯ ವಿರುದ್ದ ಸ್ಥಳಿಯ ಮೀನುಗಾರರು ಹೊರಾಟ ನಡೆಸುತ್ತಲೆ ಬಂದಿದ್ದಾರೆ ಮುಖ್ಯವಾಗಿ ಇಲ್ಲಿ ಸ್ಥಳಿಯ ಮಿನುಗಾರರ ಬೇಡಿಕೆ ಏನು ಯಾಕಾಗಿ ಮೀನುಗಾರರು ಕಾಮಗಾರಿಯನ್ನು ವಿರೋದಿಸುತ್ತಾರೆ ಕಾಮಗಾರಿಯಲ್ಲಿರುವ ಲೋಪದೋಶಗಳೆನು ಕಾಮಗಾರಿ ನಡೆದರೆ ಸ್ಥಳಿಯ ಸಾರ್ವಜನಿಕರಿಗೆ ಮೀನುಗಾರರಿಗೆ ಆಗುವ ನಷ್ಟವಾದರು ಏನು ಎಂಬ ಅಂಶವನ್ನು ಯಾವೋಬ್ಬ ಅಧಿಕಾರಿಗಳಾಗಲಿ ಸ್ಥಳಿಯ ಶಾಸಕರು ಜನ ಪ್ರತಿನಿದಿಗಳಾಗಲಿ ಆಲಿಸುವ ಮನಸ್ಸನ್ನು ಇವರೆಗೂ ಮಾಡುತ್ತಿಲ್ಲಾ ದ್ವನಿ ಎತ್ತಿದರೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಗುತ್ತಿಗೆದಾರ ಅತಿರೇಕದ ವರ್ತನೆಯನ್ನು ತೋರಿಸುತ್ತಾನೆ ಇದು ಒಂದೆಡೆಯಾದರೆ ಈ ರಸ್ತೆ ಯಾವ ಯೋಜನೆಯಡಿ ಮಂಜುರಾಗಿದೆ ಈ ಕಾಮಗಾರಿಯ ರೂಪರೇಷೇ ಏನು ಎಂಬ ಯಾವ ಮಾಹಿತಿಯನ್ನು ಯಾವೋಬ್ಬ ಅಧಿಕಾರಿಯಾಗಲಿ ಜನ ಪ್ರತಿನಿದಿಗಳಾಗಲಿ ನೀಡುವ ಯೋಚನೆಯನ್ನು ಕೂಡ ಮಾಡುತ್ತಿಲ್ಲಾ ಇಲ್ಲಿ ಕಾಮಗಾರಿಯನ್ನು ವಿರೋದಿಸಿದವರ ವಿರುದ್ದ ಗುಂಡಾಗೀರಿ ತೋರಿಸುವುದು ಕಾನೂನಿನ ಮೂಲಕ ಅಥವಾ ಪೋಲಿಸ ಇಲಾಖೆಯನ್ನು ಮುಂದಿಟ್ಟುಕೊಂಡು ಅಮಾಯಕ ಸಾರ್ವಜನಿಕರು ಅಥವಾ ವಿನುಗಾರರನ್ನು ಹೆದರಿಸುವ ಕಾನೂನು ಭಾಹಿರ ಕೇಲಸಗಳೆ ನಡೆಯುತ್ತದೆಯೆ ಹೋರತು ಯಾರು ಅಮಾಯಕ ಸಾರ್ವಜನಿಕರ ಹಾಗು ಮಿನುಗಾರರಗೋಳನ್ನು ಆಲಿಸುವವರೆ ಇಲ್ಲವಾಗಿದ್ದಾರೆ

ಗುರುವಾರ ತರಾತುರಿಯಲ್ಲಿ ಪೋಲಿಸ್ ಬಂದೋಬಸ್ತಿನಲ್ಲಿ ಬ್ರಹತ್ ಗಾತ್ರದ ಯಂತ್ರಗಳನ್ನು ವಾಹನದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ಸಾಗಿಸುವ ಸಂದರ್ಬದಲ್ಲಿ ಮೀನುಗಾರರು ಹಾಗು ಸ್ಥಳಿಯ ಸಾರ್ವಜನಿಕರು ಆಕ್ರೋಶಗೊಂಡು ಪ್ರತಿಭಟನೆ ಇಳಿದಿದ್ದರುಬ ಅಧಿಕಾರಿಗಳು ಬಲವಂತವಾಗಿ ಯಂತ್ರಗಳನ್ನು ಸಾಗಿಸಲು ಪ್ರಯತ್ನಿಸಿದ ಸಂದರ್ಬದಲ್ಲಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಲಾಗಿದೆ ಎಂಬ ಮಾಹಿತಿಗಳು ಕೇಳಿ ಬಂದಿದೆ ಈ ಸಂದರ್ಬದಲ್ಲಿ ತಹಶಿಲ್ದಾರ್ ನಾಗರಾಜ ಡಿ ವೈಎಸ್ ಪಿ ಬೆಳ್ಳಿಯಪ್ಪ ಸೇರಿದಂತೆ ಹಲವು ಪೊಲಿಸ್ ಅಧಿಕಾರಿಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಕೆಳಿಕೊಂಡರು ಆದರೆ ಸ್ಥಳಿಯರು ನಮಗೆ ಬಂದರು ಕಾಮಗಾರಿ ಬೇಡ ರಸ್ತೆ ಕಾಮಗಾರಿಯ ವಿವರವನ್ನು ನೀಡಿ ಈ ಹಿಂದೆ ಮಾತು ಕೊಟ್ಟಂತೆ ಜಿಲ್ಲಾಧಿಕಾರಿಗಳ ಸಭೆಯ ನಂತರವಷ್ಟೆ ಕಾಮಗಾರಿ ಮುಂದುವರಿಸಿ ಈಗ ಈ ಯಂತ್ರಗಳನ್ನು ತುಂಬಿರುವ ವಾಹನಗಳನ್ನು ವಾಪಾಸ್ಸ್ ಕಳುಹಿಸಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು .
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ತಾಂಡೆಲ್ ಮಾತನಾಡಿ ಈ ಕಾಮಗಾರಿಯ ಬಗ್ಗೆ ನಮ್ಮ ಗಮನಕ್ಕೆ ತಂದಿರುವುದಿಲ್ಲಾ ಯಾವ ಇಲಾಖೆಯ ಅಡಿಯಲ್ಲಿ ಕಾಮಗಾಇ ನಡೆಯುತ್ತದೆ ಇದರ ರೂಪುರೇಷೆ ಎಲ್ಲವನ್ನು ಮುಚ್ಚಿಟ್ಟು ಕಾಮಗಾರಿ ನಡೆಸಲಾಗುತ್ತಿದೆ ಬಡ ಮಿನುಗಾರಿಗೆ ಅನ್ಯಾಯ ಮಾಡಲಾಗುತ್ತಿದೆ ಪೋಲಿಸ ಬಂದೋಬಸ್ತಿನಲ್ಲಿ ಕಾಮಗಾರಿ ಯಾಕಾಗಿ ನಡೆಸಲಾಗುತ್ತಿದೆ ಯಾರಇಗಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು
ಮಿನುಗಾರ ಮುಖಂಡ ರಾಜು ತಾಂಡೆಲ್ ಮಾತನಾಡಿ ಬಂದರು ಕಾಮಗಾರಿ ನ್ಯಾಯಾಲಯದ ಹಂತದಲ್ಲಿದೆ ಯಾವುದೆ ಕಾಮಗಾರಿ ನಡೆಸುತ್ತಿಲ್ಲಾ ಎಂದು ನ್ಯಾಯಾಲಯಕ್ಕೆ ಹೇಳಿ ಕಾಮಗಾರಿ ನಡೆಸಲು ಯಂತ್ರಗಳನ್ನು ಸಾಗಿಸುತ್ತಾರೆ ಕಾಮಗಾರಿ ನಡೆಸುತ್ತಿಲ್ಲಾ ಎಂದ ಮೇಲೆ ಯಂತ್ರಗಳನ್ನು ಸಾಗಿಸುವ ಪ್ರಮಯವೇನಿತ್ತು ರಸ್ತೆ ಕಾಮಗಾರಿ ಯಾವ ಯೋಜನೆಯಡಿ ನಡೆಯುತ್ತಿದೆ ಈ ರಸ್ತೆ ಕಾಮಗಾರಿ ಸಿ ಆರ್ ಜೆ ಡ್ ನಿಯಮಾವಳಿಗೆ ವಿರುದ್ದವಾಗಿ ನಡೆಸಲಾಗುತ್ತಿದೆ ಯಾರೂ ಕೂಡ ಈ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲಾ ಎಂದು ಹೇಳಿದರು