ವಿಧಾನ ಸಭಾ ಚುನಾವಣಾ ಕಣಕ್ಕಾಗಿ ವಿವಿದ ಪಕ್ಷಗಳ ಅಭ್ಯರ್ಥಿಗಳಿಂದ ಟಿಕೇಟಿಗಾಗಿ ತಿಣುಕಾಟ

ಭಟ್ಕಳದಲ್ಲಿ ಗೆಲ್ಲುವ ಕುದುರೆ ಮಾಜಿ ಶಾಸಕ ಮಂಕಾಳ ವೈದ್ಯ?

ಬಿಜೆಪಿ ಹಾಗು ಕಾಂಗ್ರೇಸ್‌ ಪಕ್ಷದ ಟಿಕೇಟ್ ಯಾರಿಗೆ ?: ಹೈಕಮಾಂಡಗಳ ನಿರ್ದಾರ ಏನು

ಭಟ್ಕಳ: ರಾಜ್ಯದಾಧ್ಯಂತ ವಿಧಾನ ಸಭಾ ಚುನಾವಣಾ ಕಣಕ್ಕೆ ವಿವಿದ ಪಕ್ಷಗಳಿಂದ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು, ಈಗಿಂದಲೆ ಸಾಹಸಕ್ಕೆ ಮುಂದಾಗಿದ್ದು, ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಎನಾಗುತ್ತಿದೆ ಗೆಲ್ಲುವ ಕುದುರೆ ಯಾವುದು ಹಾಲಿ ಶಾಸಕ ಸುನಿಲ್ ನಾಯ್ಕ ಅವರಿಗೆ ಟಿಕೆಟ್ ಕೈತಪ್ಪಿತೆ, ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ವರದಿಯಲ್ಲಿ ನೊಡಿಕೊಂಡು ಬರೋಣ ಬನ್ನಿ.

ವೀಕ್ಷಕರೆ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಭಾಕಿ ಇದ್ದು, ರಾಜಕಿಯ ಪಕ್ಷಗಳು ರಾಜ್ಯದಲ್ಲಿ ತಮ್ಮ ಪ್ರಭುತ್ವವನ್ನು ಸಾದಿಸುವ ಸಲುವಾಗಿ, ಸಮರ್ಥ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿಕೊಂಡಿದೆ. ಅದರೆ ಅದೆ ಇನ್ನೊಂದು ಕಡೆ ವಿವಿದ ಪಕ್ಷಗಳ ಟಿಕೆಟ್ ಆಕಾಕ್ಷಿಗಳು ಟಿಕೆಟ್ ಪಡೆದುಕೊಳಬೇಕು ಎಂಬ ಹುಮ್ಮಸ್ಸಿನಿಂದ, ಪಕ್ಷಗಳ ಗಮನ ಸೆಳೆಯುವ ಸಲುವಾಗಿ ಈಗಿಂದಲೆ ಪಿಲ್ಡಿಗಿಳಿದು, ಪಕ್ಷಗಳನ್ನು ಇಂಪ್ರೇಸ್ ಮಾಡುವ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ.

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ, ವಿವಿದ ಪಕ್ಷಗಳ ಟಿಕೇಟ್ ಆಕಾಕ್ಷಿಗಳ ಪಟ್ಟಿ ದಿನ ಕಳೆಯುತ್ತಿದ್ದಂತೆ ಉದ್ದವಾಗುತ್ತಲೆ ಹೊಗುತ್ತಿದೆ. ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಗಳ ಬಗ್ಗೆ ಹೇಳಬೇಕು ಎಂದರೆ, ಹಾಲಿ ಶಾಸಕ ಸುನಿಲ್‌ ನಾಯ್ಕ, ಉಧ್ಯಮಿ ಈಶ್ವರ ನಾಯ್ಕ ಮತ್ತು ನಾಮದಾರಿ ಸಮಾಜದ ಕೆಲವು ಹೊಸ ಮುಖಗಳು ಟಿಕೆಟ್‌ ಆಕಾಂಕ್ಷಿಗಳಪಟ್ಟಿಯಲ್ಲಿದ್ದಾರೆ ಕಾಂಗ್ರೇಸಿನಲ್ಲಿ ಮಂಕಾಳ ವೈಧ್ಯ, ಜೇಡಿ ನಾಯ್ಕ ಟಿಕೆಟ್‌ ಆಕಾಕ್ಷಿಗಳಾಗಿದ್ದರೆ ಇಲ್ಲಿಯು ಕೂಡ ನಾಮದಾರಿ ಸಮಾಜದಲ್ಲಿ ಕೆಲವು ಹೊಸ ಮುಖಗಳು ಟಿಕೆಟ್‌ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಎಂಬ ಗುಸು ಗುಸು ವಿಧಾನ ಸಭಾ ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ.

ಇನ್ನು ಜೆಡಿಎಸ್‌ ಬಗ್ಗೆ ಹೇಳಬೇಕು ಎಂದರೆ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಷ್ಟೆನು ಪ್ರಭಾವನ್ನು ಬಿರಿರುವುದಿಲ್ಲಾ ಈ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಇನಾಯತುಲ್ಲಾ ಶಾಬಂದ್ರಿ ಹೆಸರು ಕೇಳಿಬರುತ್ತಿದೆ ಆದರೆ ಒಂದು ವೇಳೆ ಇನಾಯತುಲ್ಲಾ ಶಾಬಂದ್ರಿ ಅವರಿಗೆ ಟಿಕೇಟ್‌ ಸಿಕ್ಕಿದಲ್ಲಿ ಇನಾಯತುಲ್ಲಾ ಶಾಬಂದ್ರಿ ಸೋತುಹೋಗುವುದು ಬಹುತೇಕ ಎನ್ನುವುದು ಸಾರ್ವಜನಿಕ ವಲಯದ ಮಾತಾಗಿದೆ ಕಾರಣ ಮುಸ್ಲೀಂ ಮತಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮಧ್ಯ ಒಡೆದುಹೊಗುತ್ತದೆ ಹಾಗು ನಾಮದಾರಿ ಸಮಾಜದ ಮತಗಳು ಇವರಿಗೆ ಕನ್ನಡಿಯ ಗಂಟಿನಂತೆ ಪರಿವರ್ತನೆಯಾಗುತ್ತದೆ ಆದ್ದರಿಂದ ಇನಾಯತುಲ್ಲಾ ಶಾಬಂದ್ರಿ ಅವರಿಗೆ ಮುಂದಿನ ಚುನಾವಣೆ ಕಷ್ಟಕರವೆಂದರೆ ತಪ್ಪಿಲ್ಲಾ ಎಂದು ಹೇಳುತ್ತಿದ್ದಾರೆ ಮತಧಾರ ಪ್ರಭುಗಳು

ಇನ್ನು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ನಾಮಧಾರಿ ಸಮಾಜದ ಪ್ರಬಲವಾದ ಇನ್ನೊಂದು ಹೆಸರು ಕೇಳಿಬರುತ್ತಿದ್ದು ಆ ಹೆಸರೇ ಹೈಕೊರ್ಟ ನ್ಯಾಯವಾದಿ ನಾಗೇಂದ್ರ ನಾಯ್ಕ ಅವರ ಹೆಸರಾಗಿದೆ ಇವರು ತಾಲೂಕಿನ ಹಿಂದೂ ಕಾರ್ಯಕರ್ತರ ಕೊರ್ಟ ಕೇಸಾಗಲಿ ಸಾಮಾನ್ಯ ಹಿಂದೂಳಿದ ವರ್ಗದವರಾಗಲಿ ಇವರು ಅಸಾಯಕರುಗಳ ಬೆನ್ನಿಗೆ ನಿಂತು ಸಹಕಾರ ನೀಡುವ ಮೋದಲಿಗರಲ್ಲಿ ಒಬ್ಬರಾಗಿದ್ದಾರೆ ಇವರ ಹೆಸರು ಕೂಡ ವಿಧಾನ ಸಭಾ ಚುನಾವಣಾ ಸ್ಪರ್ಧಿಗಳ ಹೆಸರಿನಲ್ಲಿ ಕೇಳಿಬರುತ್ತಿತ್ತು ಈ ಬಗ್ಗೆ ನಮ್ಮ ಕರಾವಳಿ ಸಮಾಚಾರವು ನಾಗೇಂದ್ರ ನಾಯ್ಕ ಅವರ ನಿಕಟವರ್ತಿಗಳನ್ನು ಸಂಪರ್ಕಿಸಿದಾಗ ತಿಳಿದು ಬಂದ ಸಂಗತಿ ಎನೆಂದರೆ ಹೈಕೊರ್ಟ ವಕೀಲರಾದ ನಾಗೇಂದ್ರ ನಾಯ್ಕ ಅವರಿಗೆ ಸುಪ್ರೀಮ್‌ ಕೊರ್ಟ ಮೂರು ಬಾರಿ ಹೈಕೊರ್ಟ ಜಡ್ಜ ಆಗಲು ಆದೇಶವನ್ನು ನೀಡಿತ್ತು ಆದರೆ ಕರ್ನಾಟಕ ಸರಕಾರ ಮಾತ್ರ ಆದೇಶವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲಾ ಇಲ್ಲಿ ಹಿಂದೂಳಿದ ವರ್ಗವಾದ ನಾಮಧಾರಿ ಸಮಾಜದ ನಾಗೇಂದ್ರ ನಾಯ್ಕ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಅವರು ಚುನಾವಣಾ ಕಣಕ್ಕಿಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಸದ್ಯದಲ್ಲೆ ತಿಳಿಸುತ್ತಾರೆ ಎಂಬ ಮಾತನ್ನು ಹೇಳಿದರು

. ವಿಕ್ಷಕರೇ ಭಟ್ಕಳದಲ್ಲಿ ಗೆಲ್ಲುವ ಕುದುರೆ ಯಾವುದು ಎಂಬ ಪ್ರಶ್ನೇ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ ಇದರಕ್ಕೆ ಉತ್ತರ ಎಂಬಂತೆ ಮುಂಚುಣಿಯಲ್ಲಿರುವ ಹೆಸರು ಮಾಜಿ ಶಾಸಕ ಮಂಕಾಳ ವೈದ್ಯ ನಾವು ಇಲ್ಲಿ ಯಾರ ಪರವನ್ನು ವಹಿಸಿ ಅಥವಾ ಯಾರ ವಿರುದ್ದವು ಮಾತನಾಡುತ್ತಿಲ್ಲಾ ಮುಂಬರುವ ಭಟ್ಕಳ ಹೊನ್ನಾವರ ವಿಧಾನ ಸಭಾ ಚುನಾವಣೆಯ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿರುವ ಸತ್ಯವನ್ನಷ್ಟೇ ನಿಮ್ಮ ಮುಂದಿಡುತ್ತಿದ್ದೇವೆ. ವಿಕ್ಷಕರೇ ಮೊದಲು ಕ್ಷೇತ್ರದ ಶಾಸಕರುಗಳನ್ನು ಬೇಟಿ ಮಾಡಬೇಕು ಎಂದರೆ ಸಾರ್ವಜನಿಕರು ಏಜೆಂಟರನ್ನು ಸಂಪರ್ಕಿಸಬೇಕಿತ್ತು. ಹಾಗು ಏಜೆಂಟರ ಮೂಲಕವೆ ಶಾಸಕರನ್ನು ಸಂಪರ್ಕಿಸುವ ಅನಿವಾರ್ಯತೆ ಕೂಡ ಇದ್ದಿತ್ತು, ಆದರೆ ಮಂಕಾಳ ವೈದ್ಯ ಶಾಸಕರಾದ ಸಂದರ್ಬದಲ್ಲಿ ಮಂಕಾಳ ವೈಧ್ಯರನ್ನು ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಬೇಟಿ ಮಾಡಬಹುದಿತ್ತು ಹಾಗು ತಮ್ಮನ್ನು ಬೇಟಿ ಮಾಡಲು ಬಂದ ಸಾರ್ವಜನಿಕರಿಗೆ ತಮ್ಮ ಮನೆಯ ಪಕ್ಕದಲ್ಲೆ ಉಚಿತ ಕ್ಯಾಂಟಿನ್‌ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕರಿಗೆ ಅನೂಕೂಲವನ್ನು ಮಾಡಿಕೊಟ್ಟ ನಾಯಕರು ಮಂಕಾಳ ವೈಧ್ಯ ಅಲ್ಲದೆ ಹಳ್ಳಿ ಹಳ್ಳಿಗಳಿಗೆ ಇವರ ಅವದಿಯಲ್ಲಿ ರಸ್ತೆಯ ಸಂಪರ್ಕ ಹಾಗು ವಿಧ್ಯುತ್‌ ಸಂಪರ್ಕವನ್ನು ಒದಗಿಸಲಾಗಿತು ಹೀಗೆ ಮಂಕಾಳ ವೈದ್ಯರ ಅವದಿ ಅಭಿವೃದ್ದಿಯ ಪರ್ವವಾಗಿ ಒದಲಾಗಿತ್ತು ಆದರೆ ಮಂಕಾಳ ವೈದ್ಯರು ಅಂದಿನ ಚುನಾವಣೆಯಲ್ಲಿ ಚುನಾವಣಾ ಜಾತಿ ಲೆಕ್ಕಚಾರ ಹಾಕುವಲ್ಲಿ ಸಂಪೂರ್ಣ ಸೋತು ಹೋದರು ಮತ್ತು ಹೊನ್ನಾವರ ಪರೇಶ ಮೇಸ್ತಾ ಪ್ರಕರಣ ಹಾಗು ಅಪಪ್ರಚಾರದ ಪರಿಣಾಮವಾಗಿ ಅಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಹೋದರು ಇದು ನಾವು ಹೇಳುತ್ತಿಲ್ಲಾ ರಾಜಕಿಯ ಪಂಡಿತರೆ ಈ ಬಗ್ಗೆ ಉಲ್ಲೆಖಿಸುತ್ತಾರೆ ಆದರೆ ಮಂಕಾಳ ವೈಧ್ಯರು ಅಂದು ಶಾಸಕರಗಿರುವ ಸಂದರ್ಬದಲ್ಲಿ ಮಾಡಿವ ಕೆಲಸ ಇಂದು ಕೂಡ ಸಾರ್ವಜನಿಕರು ಮರೆತಿಲ್ಲಾ ಅಂದಿನ ಅವರ ಜನಪರ ಕಾಳಜಿ ಸಾಮಾಜಿಕ ಕಳಕಳಿಯ ಕಾರಣ ಸಾರ್ವಜನಿಕರ ಮನಸ್ಸಲ್ಲಿ ಮಾಜಿ ಶಾಸಕ ಮಂಕಾಳ ವೈಧ್ಯ ಇಂದಿಗೂ ಬಲವಾದ ದೊಡ್ಡ ಸ್ತಾನವನ್ನು ಪಡೆದುಕೊಂಡಿದ್ದಾರೆ ಈಗಲೂ ಕೂಡ ಸಾರ್ವಜನಿಕರು ಮಂಕಾಳ ವೈಧ್ಯರ ಸೋಲಿನ ಬಗ್ಗೆ ಖೇದವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ಎಲ್ಲಾ ಅಂಶವನ್ನು ಗಮನಿಸಿದರೆ ಮಂಕಾಳ ವೈಧ್ಯರು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಗೆಲ್ಲುವ ಕುದುರೆ ಎಂಬುವುದು ಮಾತ್ರ ಅಕ್ಷರಶ ಸತ್ಯ .

ಇನ್ನು ಹಾಲಿ ಶಾಸಕ ಸುನಿಲ್‌ ನಾಯ್ಕ ಅವರ ಬಗ್ಗೆ ಹೆಳಬೇಕು ಎಂದರೆ ಕಳೆದ ಭಾರಿಯ ವಿಧಾನ ಸಭಾ ಚುನಾವಣೆಯ ಸಂದರ್ಬ ಸುನಿಲ್‌ ನಾಯ್ಕ ಅವರಿಗೆ ಅನುಕೂಲಕರ ವಾತಾವಣರಣವಿದ್ದಿತ್ತು ಆದರು ಕೂಡ ಅವರು ಹೆಚ್ಚಿನ ಬಹುಮತದಿಂದ ಏನು ವಿಜಯವನ್ನು ಸಾದಿಸಲಿಲ್ಲ ಕೇವಲ 5000 ಮತಗಳ ಅಂತರದಿಂದಷ್ಟೆ ವಿಜಯಶಾಲಿಯಾಗಿದ್ದು ಮುಖ್ಯವಾಗಿ ಅಂದಿನ ವಿಧಾನ ಸಭಾ ಚುನಾವಣೆಯ ಸಂದರ್ಬದಲ್ಲಿ ಮೋದಿ ಅಲೆ ಬಲವಾಗಿದ್ದು ಕರಾವಳಿಯಾಧ್ಯಂತ ಹಿಂದೂ ಕಾರ್ಯಕರ್ತರ ಹತ್ಯೆ, ಹಾಗು ಹೊನ್ನಾವರ ಪರೇಶ ಮೇಸ್ತಾ ಹತ್ಯೆ ಹೀಗೆ ಅನೇಕ ಅಂಶಗಳ ಲಾಭದಿಂದ ಸುನಿಲ್‌ ನಾಯ್ಕ ಯಾವುದೆ ಸ್ವಂತ ವರ್ಚಸ್ಸುಗಳಿಲ್ಲದಿದ್ದರು ಭಟ್ಕಳ ಹೊನ್ನಾವರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವನ್ನು ಕಂಡಿದ್ದರು ಆದರೆ ಈ ವಿಧಾನ ಸಭಾ ಚುನಾವಣೆಯ ಸಂದರ್ಬದ ಪರಿಸ್ಥಿತಿ ಮೊದಲಿನಂತಿಲ್ಲಾ ಎಲ್ಲವು ಶಾಸಕ ಸುನಿಲ್‌ ನಾಯ್ಕ ಅವರಿಗೆ ಪ್ರತಿಕೂಲವಾಗಿ ಪರಿವರ್ತನೆಯಾಗಿದೆ ಶಾಸಕ ಸುನಿಲ್‌ ನಾಯ್ಕ ವಿರುದ್ದ ಸಾರ್ವಜನಿಕ ವಲಯ ಹಾಗು ಸಂಘ ಪರಿವಾರದ ಮೂಲ ಕಾರ್ಯಕರ್ತರ ಕಡೆಗಣನೆಯ ಕಾರಣ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಬಲವಾದ ವಿರೋದಿ ಅಲೆಗಳು ಎದ್ದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ ಅಲ್ಲದೆ ಹಿಂದಿನ ಭಾರಿ ಯಾರು ಸುನಿಲ್‌ ನಾಯ್ಕ ಅವರನ್ನು ಶಾಸಕರನ್ನಾಗಿ ಮಾಡಲು ಯಾವುದೆ ಸ್ವಹಿತಾಸಕ್ತಿಯನ್ನು ಇಟ್ಟುಕೊಳ್ಳದೆ ಹಗಲಿರುಳು ಶ್ರಮ ವಹಿಸಿ ದುಡಿದಿದ್ದರೋ ಅವರೆಲ್ಲರು ಇಂದು ಶಾಸಕ ಸುನಿಲ್‌ ನಾಯ್ಕ ಅವರ ವಿರೋದಿ ಬಣದಲ್ಲಿ ಕುಳಿತು ಸುನಿಲ್‌ ನಾಯ್ಕ ಅವರ ಸೋಲಿಗಾಗಿ ದಿನಗಣನೆಯನ್ನು ಮಾಡುತ್ತಿದ್ದಾರೆ , ಇನ್ನು ಸಾರ್ವಜನಿಕ ವಲಯದಲ್ಲಿ ಶಾಸಕ ಸುನಿಲ್‌ ನಾಯ್ಕ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸಿಮಿತವಾಗಿದ್ದಾರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ದಿಗಳು ಶೂನ್ಯ ಮಟ್ಟವನ್ನು ತಲುಪಿದೆ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ . ಮುಖ್ಯವಾಗಿ ಹಿಂದಿನ ಬಾರಿಯ ಚುನಾವಣೆಯಲ್ಲಿ ಸುನಿಲ್‌ ನಾಯ್ಕ ಅವರಿಗೆ ಆಡಳಿತ ವಿರೋದಿ ಅಲೆ ತಟ್ಟಿರಲಿಲ್ಲಾ ಆದರೆ ಈ ಭಾರಿ ಇವರಿಗೆ ಬಲವಾದ ಆಡಳಿತ ವಿರೋದಿ ಅಲೆ ತಟ್ಟುತ್ತಿದ್ದೆ ಅಲ್ಲದೆ ಇವುಗಳೆಲ್ಲದ ಮಧ್ಯ ಹಾಲಿ ಶಾಸಕ ಸುನಿಲ್‌ ನಾಯ್ಕ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಒಂದು ವೇಳೆ ಪಕ್ಷವನ್ನು ಪ್ರಭಾವಗೊಳಿಸಿ ಬಿಜೆಪಿ ಟಿಕೆಟ್‌ ಪಡೆಯಲು ಶಾಸಕ ಸುನಿಲ್‌ ನಾಯ್ಕ ಯಶಸ್ವಿಯಾದರು ಈ ಬಾರಿ ಶಾಸಕ ಸುನಿಲ್‌ ನಾಯ್ಕ ಅವರಿಗೆ ವಿಧಾನ ಸಭಾ ಚುನಾವಣಾ ಅಖಾಡ ಕಬ್ಬಿಣದ ಕಡೆಲೆ ಎಂದರೆ ತಪ್ಪಾಗಲಿಕ್ಕಿಲ್ಲಾ ಹಿಂದಿನ ಬಾರಿಯ ಚುನಾವಣೆಯಲ್ಲಿ ಅನುಕೂಲಕರ ಪರಿಸ್ಥಿತಿಯಿದ್ದರು ಇವರು ಕೇವಲ 5000 ಮತಗಳ ಅಂತರದಿಂದ ಜಯಗಳಿಸಿದ್ದರು ಆದರೆ ಇಂದಿನ ಪರಿಸ್ಥಿತಿ ಬಿನ್ನವಾಗಿದೆ ಎಲ್ಲವೂ ಪ್ರತಿಕೂಲವಾಗಿ ಪರಿವರ್ತನೆಯಾಗಿದೆ ಈ ಬಾರಿ ಸುನಿಲ್‌ ನಾಯ್ಕ ಅವರಿಗೆ ಸೋಲು ನಿಶ್ಚಿತ ಎನ್ನುವುದು ರಾಜಕಿಯ ಪಂಡಿತರ ಮಾತಾಗಿದೆ

ಭಟ್ಕಳ ಹೊನ್ನಾವರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಗುಂಪಿನಲ್ಲಿ ಪ್ರಬಲವಾಗಿ ಕೆಳಿಬರುತ್ತಿರುವ ಹೆಸರೆಂದರೆ ಊಧ್ಯಮಿಗಳು ಬಿಜೆಪಿ ನಾಯಕರು ಆದ ಈಶ್ವರ ನಾಯ್ಕ ಈಶ್ವರ ನಾಯ್ಕ ಈಗಿಂದಲೆ ಚುನಾವಣಾ ಅಖಾಡಕ್ಕೆ ಇಳಿದು ಕೆಲಸವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ ಈಶ್ವರ ನಾಯ್ಕ ಅವರನ್ನು ಎದುರಾಳಿಗಳು ಪ್ರಭಲವಾದ ಪ್ರತಿಸ್ಪರ್ದಿಯಲ್ಲಾ ಎಂದು ತಿಳಿದುಕೊಂಡಂತಿದೆ ಆದರೆ ದಿನಕಳೆದಂತೆ ಈಶ್ವರ ನಾಯ್ಕ ಪ್ರಬಲವಾದ ನಾಯಕರಾಗಿ ಹೋರಹೊಮ್ಮುತ್ತಿದ್ದಾರೆ ಒಂದು ವೇಳೆ ಬಿಜೆಪಿಯಿಂದ ಇವರಿಗೆ ಟಿಕೆಟ್‌ ಸಿಕ್ಕಿದೆಆದಲ್ಲಿ ನೇಕ್‌ ಟು ನೇಕ್‌ ಪೈಟ್‌ ಮಾತ್ರ ಗ್ಯಾರೆಂಟಿ ಎನ್ನುವುದು ಎಲ್ಲರ ಮಾತಾಗಿದೆ ಅಲ್ಲದೆ ಇವರಿಗೆ ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಮ್ಮಾನಂದ ಸರಸ್ವತಿ ಸ್ವಾಮಿಜಿಗಳ ಆಶಿರ್ವಾದ ದೊರೆತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ

ಒಟ್ಟಾರೆ ಈ ಭಾರಿಯ ಭಟ್ಕಳ ಹೊನ್ನಾವರ ವಿಧಾನ ಸಭಾ ಚುನಾವಣಾ ಅಖಾಡ ದಿನಕಳೆದಂತೆ ರೋಚಕ ಘಟ್ಟವನ್ನು ತಲುಪುತಿದ್ದು ಈಗಿಂದಲೆ ಜಾತಿ ಲೆಕ್ಕಾಚಾರ ಸಾವಿನ ಲೆಕ್ಕಾಚಾರಗಳು ನಡೆಯುತ್ತಿದ್ದು ಮತದಾರ ಪ್ರಭುಮಾತ್ರ ಮಾತ್ರ ಅಭಿವೃದ್ದಿಯ ಲೆಕ್ಕಚಾರ ಹಾಕಿ ಮತಧಾನ ಮಾಡಬೇಕು ಎಂಬುವುದು ನಮ್ಮ ಕರಾವಳಿ ಸಮಾಚಾರದ ಕಳಕಳಿಯಾಗಿದೆ .

WhatsApp
Facebook
Telegram
error: Content is protected !!
Scroll to Top