ಭಟ್ಕಳದಲ್ಲಿ ಬಂಧನಗೊಳಗಾದ ಪಾಕಿಸ್ತಾನಿ ಮಹಿಳೆಯ ಪತಿ ಹೃದಯಾಘಾತದಿಂದ ಸಾವು

ಭಟ್ಕಳ :ಕಳೆದ ವರ್ಷ ಭಟ್ಕಳದಲ್ಲಿಬಂಧಿಸಿದ ಪಾಕಿಸ್ತಾನ ಪ್ರಜೆ  ಖತೀಜಾ ಮೆಹ್ರೀನ್  ಪತಿ  ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ 
ಭಟ್ಕಳದಲ್ಲಿ  2014 ರಲ್ಲಿ ಪಾಕಿಸ್ತಾನ ಪ್ರಜೆ  ಖತೀಜಾ ಮೆಹ್ರೀನ್  ಕೊಂ ಜಾವೇದ್ ಮೋಹಿದ್ದಿನ್  ರುಕ್ನುದ್ದಿನ್ ಕಾನೂನು ಬಾಹಿರವಾಗಿ  ಭಾರತದೊಳಗೆ ನುಸುಳಿ ಅನಧಿಕೃತವಾಗಿ ಭಟ್ಕಳದ ನವಾಯತ ಕಾಲೋನಿ ವೈಟ್ ಹೌಸ್ ಮನೆಯಲ್ಲಿ ವಾಸವಾಗಿದ್ದಳು. 
ಈ ಬಗ್ಗೆ ಮಾಹಿತಿ ಕಲೆ ಹಾಕಿದ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು  ಕಳೆದ ವರ್ಷ ಜೂ.9 ರಂದು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆಕೆಯನ್ನು ಬಂದಿಸಿದ್ಧರು

ಈಕೆಯ ಪತಿ ಭಟ್ಕಳ ನವಾಯತ್ ಕಾಲೋನಿ ನಿವಾಸಿಯಾದ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್  ನೂರೂಲಾ ಅಮೀನ್ ರುಕ್ನುದ್ದಿನ್  ನಿನ್ನೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಗಳೂರಿನ ಇಂಡಿಯನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದು .ಚಿಕಿತ್ಸೆ ಫಲಿಸದೆ ಈ ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. 
ಮೃತ ವ್ಯಕ್ತಿ ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ

ReplyForward

WhatsApp
Facebook
Telegram
error: Content is protected !!
Scroll to Top