ಶಿಕ್ಷಣ ಸಚಿವರ ವಿರುದ್ಧ ಸಮವಸ್ತ್ರ ವಿತರಣೆಯಲ್ಲಿ ಬಹುಕೋಟಿ ಹಗರಣದ ಆರೋಪ..!

ರಾಜ್ಯ:ಉಡುಪಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸುವ ಸಮವಸ್ತ್ರದಲ್ಲಿ ಬಹು ಕೋಟಿಯ ಹಗರಣ ಬೆಳಕಿಗೆ ಬಂದಿದ್ದು ಇದು ಶಿಕ್ಷಣ ಸಚಿವರ ಕಮಿಷನ್ ದಂಧೆಯಾಗಿದೆ . ನಿರಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬಿ.ಇ.ಒ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು .

ಆರ್ ಟಿ ಇ ಕಾಯ್ದೆಯಡಿ ಬರುವ ವಿದ್ಯಾರ್ಥಿಗಳಿಗೆ 2019 ರ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ ಸರ್ಕಾರವು ಹೊಲಿದ ಸಮವಸ್ತ್ರ ನೀಡಬೇಕೆಂದು ಹೇಳಿದೆ .

ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ ಸರ್ಕಾರ ನೀಡಿದ್ದ ಟೆಂಡರ್ ಪ್ರಕಾರ ಕೇವಲ 230 ರೂ . ಗೆ ಹೊಲಿದ ಎರಡು ಜೊತೆ ಸಮವಸ್ತ್ರ ಜೊತೆಗೆ ಶೂ , ಸಾಕ್ಸ್ ಹಾಗೂ ಟೈ ಕೂಡ ಎಸ್ ಡಿ ಎಂ ಸಿ ಮುಖಾಂತರ ವಿತರಣೆ ಮಾಡಲಾಗಿತ್ತು . ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉದ್ಯೋಗವಾಗುತ್ತಿತ್ತು .

ಆದರೆ ಇದೀಗ ಸರ್ಕಾರವು ಎಸ್ ಡಿ ಎಂ ಸಿಯನ್ನು ಕಡೆಗಣಿಸಿ , ಕೇವಲ ಕಮಿಷನ್ ವ್ಯಾಮೋಹದಿಂದ ಮಹಾರಾಷ್ಟ್ರ ಮೂಲದ ಕಂಪೆನಿಗೆ ಟೆಂಡರ್ ನೀಡಿ 250 ರೂ ಗಳಂತೆ ಹೊಲಿಯದ ಬಟ್ಟೆಯನ್ನು ನೀಡಲು ಮುಂದಾಗಿದೆ .

ಈ ಮುಖಾಂತರ ಬಹುಕೋಟಿಯ ಹಗರಣ ನಡೆದಿದೆ ಎಂದು ಅಂದಾಜಿಸಲಾಗಿದೆ . ಶಿಕ್ಷಣ ಸಚಿವರು ಈ ಹಗರಣದ ಹಿಂದೆ ಕಮಿಷನ್ ದಂಧೆ ನಡೆಸುತ್ತಿದ್ದು ಉಚ್ಚ ನ್ಯಾಯಾಲಯದ ತೀರ್ಪನ್ನು ಕೂಡ ಪರಿಗಣಿಸದೆ ನ್ಯಾಯಾಲಯದ ನಿಂದನೆ ನಡೆಸುತ್ತಿದ್ದಾರೆ .

ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಕಮಿಷನ್ ದಂಧೆ ನಡೆಸಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಶಿಕ್ಷಣ ಸಚಿವರು ಶೀಘ್ರ ರಾಜಿನಾಮೆ ನೀಡಬೇಕೆಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸಿತು .

WhatsApp
Facebook
Telegram
error: Content is protected !!
Scroll to Top