ಭಟ್ಕಳ ದಲಿತ ಸಂಘಟನೆಯಿಂದ ಕಂದಾಯ ಸಚಿವ ಆರ್‌ ಅಶೋಕ್‌ ಅವರಿಗೆ ರಸ್ತೆಯಲ್ಲೆ ಘೇರಾವ

ಮೊಗೇರ್‌ ಸಮೂದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಕಂದಾಯ ಸಚಿವ ಆರ್‌ ಅಶೋಕ್‌ ಅವರಿಗೆ ಮನವಿ

ಭಟ್ಕಳ: ಕಂದಾಯ ಸಚಿವ ಆರ್‌ ಅಶೋಕ ಅವರು ತಮ್ಮ ಕಾರ್ಯ ನಿಮಿತ್ತ ತೆರಳವು ಸಂದರ್ಬದಲ್ಲಿ ಭಟ್ಕಳ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಲಿತ ಸಂಘಟನೆಗಳು ಆರ್‌ ಅಶೋಕ್‌ ಅವರ ವಾಹನವನ್ನು ತಡೆದು ನಿಲ್ಲಿಸಿ ಘೇರಾವ್‌ ಹಾಕಿ ಮೊಗೇರ್‌ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದಾಗಿ ಆರ್‌ ಅಶೋಕ ಅವರಲ್ಲಿ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ

ಹಲಾವಾರು ದಿನಗಳಿಂದ ಮೊಗೇರ್‌ ಸಮುದಾಯ ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ತಾಲೂಕಾಡಳಿತದ ಮುಂದೆ ಪ್ರತಿಭಟನೆ ನಡೆಸಿಕೊಂಡೆ ಬರುತ್ತಿದ್ದು ದಲಿತರು ಹಾಗು ದಲಿತ ಸಂಘಟನೆಗಳು ತಾವು ನೈಜ ಪರಿಶಿಷ್ಟರು ಮೊಗೇರ್‌ ಸಮುದಾಯ ನೈಜ ಪರಿಶಿಷ್ಟರಾಗಿರುವುದಿಲ್ಲಾ ಅವರಿಗೆ ಯಾವುದೆ ಕಾರಣಕ್ಕೂ ಪರಿಶಿಷ್ಟರ ಜಾತಿ ಪ್ರಮಾಣ ಪತ್ರ ನಿಡಬಾರದು ಎಂದು ವಿರೋದವನ್ನು ವ್ಯಕ್ತಪಡಿಸುತ್ತಲೆ ಬಂದಿದ್ದರು . ಪರಿಸ್ಥಿತಿ ಹೀಗಿರುವಾಗವಾಗ ಗುರುವಾರ ದಲಿತ ಸಂಘಟನೆಗಳು ಶಾಸಕ ಸುನಿಲ್‌ ನಾಯ್ಕ ಅವರನ್ನೊಳಗೊಂಡಂತೆ ಕೊಟೇಶ್ವರ ಸಭಾಭವನದಲ್ಲಿ ಅಂಬೇಡ್ಕರ್‌ ಜಯಂತಿಯನ್ನು ಆಚರಿಸುತ್ತಿರುವಾಗ ಕಂದಾಯ ಸಚಿವ ಆರ್‌ ಅಶೋಕ ಕಾರ್ಯನಿಮಿತ್ತ ತೆರಳುತ್ತಿದ್ದಾರೆ ಎಂಬ ಸುದ್ದಿ ತಿಳಿದ ದಲಿತ ಸಂಘನೆಗಳು ಆರ್‌ ಅಶೋಕ ಅವರ ವಾಹನವನ್ನು ತಡೆದು ನಿಲ್ಲಿಸಿ ಆರ್‌ ಅಶೋಕ್‌ ಅವರಿಗೆ ಘೇರಾವ್‌ ಹಾಕಿ ಮೊಗೇರ್‌ ಸಮುದಾಯಕ್ಕೆ ಪರಿಶಿಷ್ಟ ಜಾರಿ ಪ್ರಮಾಣಪತ್ರ ನಿಡಬಾರದು ಎಂಬ ಮನವಿಯನ್ನು ಮಾಡಿದರು

ಈ ಸಂದರ್ಬದಲ್ಲಿ ದಲಿತ ಸಂಘಟನೆಯ ಜಿಲ್ಲಾಧ್ಯಕ್ಷ ತುಳಸಿದಾಸ ಪಾಸ್ಕರ್‌ ಅವರು ಈ ಮೋಗೇರ್‌ ಸಮುದಾಯ ಮೂವತ್ತು ವರ್ಷಗಳಿಂದ ನೈಜ ಪರಿಶಿಷ್ಟರಾದ ನಮಗೆ ದೊರೆಯ ಬೇಕಾಗಿದ್ದ ಸೌಲಬ್ಯವನ್ನು ಲೂಟಿ ಮಾಡಿದ್ದಾರೆ ಇನ್ನು ಇವರಿಗೆ ಪರಿಶಿಷ್ಟಜಾತಿ ಪ್ರಮಾಣ ಪತ್ರ ನೀಡಬಾರದು ಇವರು ಮೆಲ್ಜಾತಿಗೆ ಸೇರಿದವರಾಗಿದ್ದಾರೆ ಎಂದು ಮನವಿಯನ್ನು ಮಾಡಿದರು

ಈ ಸಂದರ್ಬದಲ್ಲಿ ಕಂದಾಯ ಸಚಿವ ಆರ್‌ ಅಶೋಕ ಮಾತನಾಡಿ ಯಾರಿಗೂ ಕಾನೂನು ಭಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗದು ಸಂವಿಧಾನ ಬದ್ದವಾಗಿ ಜಾತಿ ಪ್ರಮಾಣ ಪತ್ರ ನೀಡಬೇಕೆ ಹೊರತು ಸಂವಿಧಾನ ವಿರೋದವಾಗಿ ಜಾತಿ ಪ್ರಮಾಣ ಪತ್ರ ನೀಡಲಾಗದು ಎಂಬ ಮಾತನ್ನು ಹೇಳಿದರು ಈ ಸಂದರ್ಬದಲ್ಲಿ ಆರ್‌ ಅಶೋಕ ಹಾಗು ಶಾಸಕ ಸುನಿಲ್‌ ನಾಯ್ಕ ಅವರಿಗೆ ದಲಿತ ಸಂಘಟನೆಗಳು ಜೈಕಾರವನ್ನು ಹಾಕಿದರು

ಹಿಂದೆ ಇದೆ ನಮ್ಮ ಶಾಸಕ ಸುನಿಲ್‌ ನಾಯ್ಕ ವಿಧಾನ ಸೌದ ಕಲಾಪದಲ್ಲಿ ಮೊಗೇರ್‌ ಸಮುದಾಯ ನೈಜ ಪರಿಶಿಷ್ಟರು ಅವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂಬ ಪ್ರಸ್ತಾಪವನ್ನು ಮಾಡಿದ್ದರು ಈ ಸಂದರ್ಬದಲ್ಲಿ ಸರಕಾರದ ಪ್ರತಿನಿದಿಯಾಗಿ ಕಾರಜೋಳ ಅವರು ಶಾಸಕರ ಪ್ರಸ್ತಾಪವನ್ನು ಸಾರಗಾಟಾಗಿ ತಿರಸ್ಕರಿಸಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳ ಬಹುದಾಗಿದೆ

ಜಾತಿ ಪ್ರಮಾಣ ಪತ್ರದ ಪ್ರಕರಣದಲ್ಲಿ ಜನಪ್ರತಿನಿದಿಗಳಾಗಲಿ ರಾಜಕಿಯ ಪಕ್ಷಗಳಾಗಲಿ ಯಾವುದೆ ಒಂದು ಸ್ಪಷ್ಟ ನೀಲುವನ್ನು ತಾಳದೆ ಕೇವಲ ರಾಜಕಿಯ ಮಾಡಿಕೊಂಡು ಬರುತ್ತಿರುವುದೆ ಇಲ್ಲಿ ಮೆಲ್ನೋಟಕ್ಕೆ ಕಂಡು ಬರುತ್ತಿದ್ದೆ ಒಂಟಾರೆ ಈ ಜಾತಿ ಪ್ರಮಾಣ ಪತ್ರದ ಪ್ರಹಸನ ಎಳೆದಷ್ಟು ಹಿಗ್ಗುತ್ತಿದೆಯೆ ಹೊರತು ಒಂದು ಸುಖಾಂತ್ಯ ಕಾಣುವ ಯಾವ ಲಕ್ಷಣವು ಕಂಡುಬರುತ್ತಿಲ್ಲಾ

WhatsApp
Facebook
Telegram
error: Content is protected !!
Scroll to Top