ಭಟ್ಕಳ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ: ರಥೋತ್ಸವದಲ್ಲಿ ಪಾಲ್ಗೋಂಡು ಪೂನಿತರಾದ ಭಕ್ತ ಸಮೂಹ

ಭಟ್ಕಳ:ತಾಲೂಕಿನ ಆರಾಧ್ಯ ದೈವ ಚೆನ್ನಪಟ್ಟಣ ಹನೂಮಂತ ದೇವರ ರಥೋತ್ಸವವು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೊದ್ಘಾರಗಳೊಂದಿಗೆ ಅತಿ ವಿಜ್ರಂಭಣೆಯಿಂದ ಸಂಪನ್ನಗೊಂಡಿದ್ದು ರಥೋತ್ಸದಲ್ಲಿ ಲಕ್ಷಾಂತರ ಭಕ್ತಗಣ ಪಾಲ್ಗೋಂಡು ದೇವರ ಕ್ರಪೇಗೆ ಪಾತ್ರವಾಯಿತು .

ಭಟ್ಕಳ  ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ ಯುಗಾದಿಯ ಮಾರು ದಿನದಂದು ವಿವಿಧ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು. ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವ ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ನಡೆಯಿತು. ರಾಮನವಮಿಯಂದು ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ರಥೋತ್ಸವ ನಡೆಯಿತು. ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ರಥೋತ್ಸವದ ಕಾರ್ಯಗಳು ಸಾಂಗವಾಗಿ ನೆರವೇರುವಂತೆ ನೋಡಿಕೊಂಡರು. ದೇವಸ್ಥಾನದ ರಥೋತ್ಸವ ಕಾರ್ಯದ ಧಾರ್ಮಿಕ ವಿಧಿ ವಿದಾನಗಳನ್ನು ವೇ.ಮೂ. ರಮಾನಂದ ಅವಭೃತ ಅವರ ನೇತೃತ್ವದ ಅರ್ಚಕರ ತಂಡ ನೆರವೇರಿಸಿದರು. ದೇವಸ್ಥಾನದ ಅರ್ಚಕ ವಿನಾಯಕ ಭಟ್ಟ ಅವರು ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ರಥೋತ್ಸವದಲ್ಲಿ ಶಾಸಕ ಸುನಿಲ್‌ ನಾಯ್ಕ ಮಾಜಿ ಶಾಸಕರುಗಳಾದ ಮಂಕಾಳ ವೈದ್ಯ ಜೆ.ಡಿ ನಾಯ್ಕ , ಬಿಜೆಪಿ ಮುಖಂಡರಾದ ಗೊವಿಂದ ನಾಯ್ಕ, ಈಶ್ವರ ನಾಯ್ಕ ಶಿವಾನಿ ಶಾಂತರಾಮ, ರಾಜೇಶ ನಾಯ್ಕ ಸುಬ್ರಾಯ ದೇವಾಡಿಗ, ಮುಂತಾದವರು ಉಪಸ್ಥಿತರಿದ್ದರು .

WhatsApp
Facebook
Telegram
error: Content is protected !!
Scroll to Top