ಹನ್ನೆರಡನೆ ದಿನಕ್ಕೆ ಕಾಲಿಟ್ಟ ಮೊಗೇರ್ ಸಮಾಜದ ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ ಎಮ್ ಎಲ್ ಸಿ ಗಣಪತಿ ಉಳ್ವೇಕರ್

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಮೊಗೇರ್ ಸಮಾಜದ ಬ್ರಹತ್ ಪ್ರತಿಭಟನೆ ಹನ್ನೆರಡನೇ ದಿನಕ್ಕೆ ಕಾಲ್ಲಿಟ್ಟಿದ್ದು ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ಎಮ್ ಎಲ್ ಸಿ ಗಣಪತಿ ಉಳ್ವೇಕರ್ ಬೇಟಿನೀಡಿ ಮೊಗೇರ್ ಸಮಾಜಕ್ಕೆ ನ್ಯಾಯ ಒದಗಿಸುವ ಬರವಸೆ ನೀಡಿದರು

ಈ ಸಂದರ್ಬದಲ್ಲಿ ಅವರು ಮಾತನಾಡಿ ಮೊಗೇರ್ ಸಮಾಜದ ಪ್ರತಿಭಟನೆ ನ್ಯಾಯಯುತವಾಗಿದ್ದು ಮೊಗೇರ್ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಸದ್ಯದಲ್ಲೆ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗಿಲುವುದು ಎಂದು ಹೇಳಿದರು

ಈ ಸಂದರ್ಬದಲ್ಲಿ ಮಾಧ್ಯಮದವರು ಶಾಸಕರು ವಿಧಾನ ಸೌದ ಕಲಾಪದಲ್ಲಿ ಮೊಗೇರ್ ಸಮುದಾಯದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಬಗ್ಗೆ ಪ್ರಸ್ತಾಪ ಮಾಡಿದಾಗ ಸರಕಾರ ಪ್ರಸ್ತಾಪವನ್ನು ಸಾರಾಸಗಾಟಾಗಿ ತಿರಸ್ಕರಿತು ಜಿಲ್ಲಾಡಳಿತ ಯಾವುದೆ ಕ್ರಮಕ್ಕೆ ಮುಂದಾಗುತ್ತಿಲ್ಲಾ ಈ ಬಗ್ಗೆ ಏನು ಹೇಳುತ್ತಿರಾ ಎಂದು ಪ್ರಶ್ನಿಸಿದರೆ ಈ ಬಗ್ಗೆ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಸುಬ್ರಾಯ ದೇವಾಡಿ ಸಮಜಾಯಿಸಿ ಕೊಟ್ಟು ಸದ್ಯದಲ್ಲೆ ಸಮಸ್ಯೆ ಬಗೆಹರಿಸುತ್ತೆವೆ ಎಂಬ ಆಶ್ವಾಸನೆ ಕೊಟ್ಟರು.

ಒಟ್ಟಾರೆ ತಾಲೂಕಿನಲ್ಲಿ ನಡೆಯುತ್ತಿರುವ ಮೊಗೇರ್ ಸಮಾಜದ ಪ್ರತಿಭಟನೆ ರಾಜಕಿಯಕ್ಕೆ ಆಹಾರವಾಯಿತೆನೊ ಎಂಬ ಅನುಮಾನಗಳು ಮೂಡಲಾರಂಬಿಸಿದೆ ಮೊಗೇರ್ ಸಮಾಜ ನಡೆಸುತ್ತಿರುವ ಈ ಪ್ರತಿಭಟನೆ ಮುಂದಿನ‌ ದಿನಗಳಲ್ಲಿ ಯಾವ ಹಂತವನ್ನು ತಲುಪಲಿದೆ ಎಂಬುವುದನ್ನು ಕಾದುನೋಡ ಬೇಕಾಗಿದೆ.

ಈ ಸಂದರ್ಬದಲ್ಲಿ ಮಾಜಿ‌ ಶಾಸಕ ಮಂಕಾಳ ವೈದ್ಯ ಮಿನುಗಾರಿಕ ಪೆಡರೇಷನ್ ಮಾಜಿ‌ ಜಿಲ್ಲಾಧ್ಯಕ್ಷ ಗಣಪತಿ ಮಾಂಜ್ರೆ ಹಾಗು ಬಿಜೆಪಿ ನಾಯಕರು ಹಾಗು ಇತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top