ಜಾತಿ ಪ್ರಮಾಣ ಪತ್ರಕ್ಕಾಗಿ ಒಂಬತ್ತನೆ ದಿನಕ್ಕೆ ಕಾಲಿಟ್ಟ ಜಿಲ್ಲೆಯ ಮೋಗೇರ್‌ ಸಮುದಾಯದ ಹೋರಾಟ : ಡೀಪ್‌ ಸಿ ಟ್ರಾಲ್‌ ಬೋಟ್‌ ಸಂಘದ ಅಧ್ಯಕ್ಷ ರವಿ ಸುವರ್ಣ ಅವರಿಂದ ತಾಲೂಕ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಮೊಗೇರ್‌ ಸಮುದಾಯದ ಜಾತಿ ಪ್ರಮಾಣ ಪತ್ರದ ಹೊರಾಟಕ್ಕೆ ಡೀಪ್‌ ಸಿ ಟ್ರಾಲ್‌ ಬೋಟ್‌ ಸಂಘ ಅಧ್ಯಕ್ಷ ರವಿ ಸುವರ್ಣ ಅವರು ಬೆಂಬಲ ಸೂಚಿಸಿದ್ದು ತಾವು ಮೊಗೇರ್‌ ಸಮಾಜದ ಬೆಂಬಲಕ್ಕಿದ್ದು ಮೊಗೇರ್‌ ಸಮಾಜಕ್ಕೆ ಅನ್ಯಾವಾದರೆ ಮಿನಾಗಾರರೊಂದಿ ತಾವು ಕರಾವಳಿಯಾಧ್ಯಂತ ಬೀದಿಗಿಳಿಯುದಾಗಿ ಸ್ಥಳಿಯಾಡಳಿತಕ್ಕೆ ಎಚ್ಚರಿಕೆಯನ್ನು ನಿಡಿದ್ದಾರೆ.

ಒಂಬತ್ತು ದಿನಗಳಿಂದ ಮೊಗೇರ್‌ ಸಮುದಾಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟವನ್ನು ನಡೆಸುತ್ತಲೆ ಬರುತ್ತಿದ್ದು ನಿನ್ನೆ ಸರಕಾರ ಶಾಸಕ ಸುನಿಲ್‌ ನಾಯ್ಕ ಅವರ ಪ್ರಸ್ತಾಪ ತಳ್ಳಿಹಾಕಿದ ಬೆನ್ನಲ್ಲೆ ಇಂದು ಉಡುಪಿ ಮಲ್ಪೆ ಡೀಪ್‌ ಸಿ ಟ್ರಾಲ್‌ ಬೋಟ್‌ ಸಂಘದ ಅಧ್ಯಕ್ಷ ರವಿ ನಾಯ್ಕ ಅವರು ಬುದುವಾರ ಭಟ್ಕಳ ಸಹಾಯಕ ಆಯುಕ್ತರನ್ನು ಬೇಟಿ ಮಾಡಿ ಮೊಗೇರ್‌ ಸಮಾಜದ ಪರಿಸ್ಥಿತಿಯನ್ನು ಮನವರಿಕೆ ಮಾಡಿದರು ಹಾಗು ಅಧಿಕಾರಿಗಳು ಕೂಡಲೆ ಕಾರ್ಯ ಪ್ರವರ್ತರಾಗಿ ಮೊಗೇರ್‌ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡ ಬೇಕು ಎಂದು ಮನವಿಯನ್ನು ಮಾಡಿದ್ದಾರೆ

ಈ ಸಂದರ್ಬದಲ್ಲಿ ಅವರು ಮಾತನಾಡಿ ನಾನು ಮೋಗೇರ್‌ ಸಮುದಾಯದ ಜೋತೆಯಲ್ಲಿದ್ದೆನೆ ಸರಕಾರ ಈ ಕೂಡಲೆ ಎಚ್ಚೆತ್ತುಕೊಳ್ಳ ಬೇಕು ಮೊಗೇರ್‌ ಸಮುದಾಯಕ್ಕೆ ನ್ಯಾಯ ಒದಗಿಸ ಬೇಕು ಒಂದು ವೇಳೆ ನಮ್ಮ ಮೊಗೇರ್‌ ಸಮುದಾಯಕ್ಕೆ ಅನ್ಯಾಯ ವಾದಲ್ಲಿ ಕರಾವಳಿಯಾಧ್ಯಂತ ಮೊಗೇರ್‌ ಸಮುದಾಯದೊಂದಿಗೆ ನಾವು ಬೀದಿಗಿಳಿದು ಹೊರಾಟ ನಡೆಸುತ್ತೆವೆ ಮೊಗೇರ್‌ ಸಮುದಾಯದವರನ್ನು ಅಬಲರೆಂದು ತಿಳಿಯ ಬೇಡಿ ನಮ್ಮ ಹೋರಾಟ ಅಚಲವಾಗಿರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇದೆ ಸಂದರ್ಬದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಅಖಿಲ ಭಾರತ ಪರ್ಷೀಯನ್‌ ಬೋಟ್‌ ಯೂನಿಯನ್‌ ಅಧ್ಯಕ್ಷರು ಮಾತನಾಡಿ ನಮ್ಮ ಕರಾವಳಿಯ ಎಲ್ಲಾ ಯುನಿಯನ್‌ ಮೊಗೇರ್‌ ಸಮಾಜದೊಂದಿಗೆ ಇದೆ ನಾವು ಮೊಗೇರ್‌ ಸಮಾಜಕ್ಕೆ ಆಗುವ ಅನ್ಯಾಯವನ್ನು ಸಹಿಸಲಾರೆವು ಸರಕಾರ ಈ ಕೂಡಲೆ ಎಚ್ಚೆತ್ತುಕೊಳ್ಳ ಬೇಕು ಇಲ್ಲದಿದ್ದಲ್ಲಿ ಕರಾವಳಿ ಕರ್ನಾಟಕದಾಧ್ಯಂತ ಉಗ್ರ ಹೊರಾಟ ನಡೆಯುತ್ತದೆ ಎಂದು ಹೇಳಿದರು.

ಈ ಸಂದರ್ಬದಲ್ಲಿ ಸದಾನಂದ ಮೊಗೇರ್‌, ಗೋಪಿ ಮೊಗೇರ್‌ ಮಾದೇವ ಮೊಗೇರ್‌ ಬೆಳ್ಕೆ ಹನುಮಂತ ಮೋಗೇರ್‌ , ಸುರೇಶ ಮೊಗೇರ್‌ ಅಳ್ವೆಕೋಡಿ, ಬಾಬು ಬೈಲೂರು ನಾಗೇಶ ಮೋಗೇರ್‌ ಗೊರ್ಟೆ, ಕುಮಾರ್‌ ಮೊಗೇರ್‌ ತುದಳ್ಳಿ, ಲೊಕೇಶ ಮೊಗೇರ್‌ ಬೇಳ್ನಿ, ವಾಸು ಪರ್ಶುರಾಮ್‌ ಮುಂತಾದವರು ಉಪಸ್ಥಿತರಿದ್ದು

WhatsApp
Facebook
Telegram
error: Content is protected !!
Scroll to Top