SSLC Exam : ಬಾಗಲಕೋಟೆ, ತುಮಕೂರು ಸೇರಿ ಕೆಲವೆಡೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು!

ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭವಾಗಿದೆ.ಹಿಜಾಬ್ ವಿವಾದದ ಮಧ್ಯೆ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಭಾರೀ ಕುತೂಹಲ ಕೆರಳಿದೆ. ಕೆಲವೆಡೆ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಧರಿಸಿಯೇ ಪ್ರವೇಶಿಸಿದ್ದು ಬಳಿಕ ಹಿಜಾಬ್ ತೆಗೆಸಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದಿದ್ದಾರೆ.

ಬೆಂಗಳೂರು: ಸೋಮವಾರದಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹಿಜಾಬ್ ವಿವಾದದ ಮಧ್ಯೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಇದೀಗ ಭಾರೀ ಕುತೂಹಲ ಕೆರಳಿದೆ. ಕೆಲವೆಡೆ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಧರಿಸಿಯೇ ಪ್ರವೇಶಿಸಿದ್ದು ಬಳಿಕ ಹಿಜಾಬ್ ತೆಗೆಸಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ಹಿಜಾಬ್ ಹಾಕಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಇನ್ನು ಕೆಲವೆಡೆ ಮನೆಯಿಂದ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶಿಸುತ್ತಿದ್ದಂತೆ ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಒಅಳ್ಗೆ ಹೋಗಿದ್ದಾರೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಹೇಗಿತ್ತು ಪರೀಕ್ಷೆ ಜೊತೆಗಿನ ಹಿಜಾಬ್‌ ವಿವಾದ  ಇಲ್ಲಿದೆ

ಬಾಗಲಕೋಟೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು!
ಬಾಗಲಕೋಟೆಯ ಜಮಖಂಡಿಯಲ್ಲಿ ಹಿಜಾಬ್ ಧರಿಸಿ ವಿದ್ಯಾಥಿ೯ಗಳು ಪರೀಕ್ಷೆ ಬರೆಯುತ್ತಿರುವುದು ಕಂಡುಬಂದಿದೆ. ಬಾಲಕಿಯರ ಸಕಾ೯ರಿ ಪದವಿ ಪೂವ೯ ಮಹಾವಿದ್ಯಾಲಯದ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶಾಲಾ ಸಮವಸ್ತ್ರದ ದುಪ್ಪಟ್ಟವನ್ನೇ ಹಿಜಾಬ್ ಆಗಿ ಹಾಕಿಕೊಂಡು ವಿದ್ಯಾಥಿ೯ನಿಯರು ಪರೀಕ್ಷೆ ಬರೆದಿದ್ದಾರೆ.

ಬೆಂಗಳೂರಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿ!
ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಳೆ. ಈ ವೇಳೆ ಪ್ರಶ್ನಿಸಿದಾಗ, ನನಗೆ ಶಿಕ್ಷಣ ಇಲಾಖೆಯ ಆದೇಶ ಗೊತ್ತಿಲ್ಲ. ಶಾಲೆಯಲ್ಲಿ ನಮಗೆ ಈ ಆದೇಶದ ಬಗ್ಗೆ ಹೇಳಿಲ್ಲ. ಹಿಜಾಬ್ ತೆಗೆಯಿರಿ ಅಂದರೆ ರಿಮೂವ್ ಮಾಡಿ ಹೋಗುತ್ತೇವೆ. ಇಲ್ಲ ಅಂದರೆ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದಿದ್ದಾಳೆ. ಮನೆಯಲ್ಲೂ ನಮ್ಮ ಪೋಷಕರು ಹೇಳಿ ಕಳುಹಿಸಿದ್ದಾರೆ. ಹಿಜಾಬ್ ಗೆ ಅವಕಾಶ ನೀಡಿಲ್ಲ ಅಂದರೆ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಾರೆ. ಅದರಂತೆ ಪರೀಕ್ಷೆ ಬರೆಯುತ್ತೇವೆ ಅಂತ ಶಿವಾಜಿನಗರದ ಬಳಿಯ ಸರ್ಕಾರಿ ವಿಕೆಓ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹೇಳಿದ್ದಾಳೆ.

ತುಮಕೂರಿನಲ್ಲಿ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಎಂಟ್ರಿ!

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತವರು ಕ್ಷೇತ್ರದಲ್ಲಿ ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಇಬ್ಬರು ವಿದ್ಯಾರ್ಥಿನಿಯರು ಬಂದ ಘಟನೆ ನಡೆದಿದೆ.
ತಿಪಟೂರಿನ‌ ಬಾಲಕರ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಬ್ಬರು ಹಿಜಾಬ್ ಧರಿಸಿಯೇ ಒಳ ಪ್ರವೇಶಿಸಿದ್ದಾರೆ. ಗಮನಕ್ಕೆ ಬರುತ್ತಿದ್ದಂತೆ ಪ್ರಾಂಶುಪಾಲರು ಹಿಜಾಬ್ ತೆಗೆಸಿದ್ದಾರೆ. ಪ್ರಾಂಶುಪಾಲರು ಹೇಳಿದ ಬಳಿಕ ಹಿಜಾಬ್ ತೆಗೆದು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ.

ಮಂಗಳೂರಿನಲ್ಲಿ ಹೇಗಿದೆ ಪರಿಸ್ಥಿತಿ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.28ರಂದು ಎಸ್ಎಸ್ಎಲ್ಸಿವಿದ್ಯಾರ್ಥಿಗಳು ಸುಸಾಂಗವಾಗಿ ಆರಂಭಗೊಂಡಿತು. ಮೊದಲ ದಿನ ಪ್ರಥಮ ಭಾಷಾ ಪರೀಕ್ಷೆ ನಡೆದಿದ್ದು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಲಾಗಿದ್ದು, ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಪರಿಶೀಲಿಸಿ, ಸೂಚನೆಗಳನ್ನು ನೀಡಿ ಕೊಠಡಿ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ. ಹಿಜಾಬ್ ಧರಿಸಿ ಆಗಮಿಸುತ್ತಿರುವ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿ ಪ್ರವೇಶ ವೇಳೆ ಹಿಜಾಬ್ ತೆಗೆದಿರಿಸಿ ಪರೀಕ್ಷೆ ಬರೆದರು. ಹಿಜಾಬ್ ಸಮವಸ್ತ್ರ ಹೊಂದಿರುವ ವಿದ್ಯಾರ್ಥಿನಿಯವರು ಶಾಲೆಯ ಮುಖ್ಯಸ್ಥರ ಅನುಮತಿ ಪಡೆದು ಪರೀಕ್ಷೆ ಬರೆದಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ 29712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾ.28ರಿಂದ ಏಪ್ರಿಲ್ 11ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ 99 ಮುಖ್ಯ ಅಧೀಕ್ಷಕರು, 24 ಉಪ ಮುಖ್ಯ ಅಧೀಕ್ಷಕರು, 99 ಕಸ್ಟೋಡಿಯನ್, 99 ಸ್ಥಾನಿಕ ಜಾಗೃತ ದಳದ ಕಾರ್ಯಕ್ಕೆ ಅಧಿಕಾರಿ, 99 ಮಂದಿ ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 35 ಮಾರ್ಗಾಧಿಕಾರಿಗಳು, 1588 ಮಂದಿ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

ಉಡುಪಿಯಲ್ಲಿ ಹಿಜಾಬ್‌, ಗೊಂದಲಕ್ಕೆ ಅವಕಾಶವಿಲ್ಲದೇ ಪರೀಕ್ಷೆ
ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ಆರಂಭಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ 14022 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸೋಮವಾರ ನಡೆಯಲಿರುವ ಕನ್ನಡ ಪರೀಕ್ಷೆಗೆ ಹಾಜರಾದರು. ಎಲ್ಲಿಯೂ ಗೊಂದಲಕ್ಕೆ ಅವಕಾಶ ಇರಲಿಲ್ಲ.

ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಸಮವಸ್ತ್ರದೊಂದಿಗೆ ಶಿರವಸ್ತ್ರಕ್ಕೆ ಅವಕಾಶವಿರುವ ವಿದ್ಯಾರ್ಥಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಸಮವಸ್ತ್ರ ದೊಂದಿಗೆ ಹಿಜಾಬ್‌ಗೆ ಅವಕಾಶ ಇಲ್ಲದ ಶಾಲಾ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದಿಟ್ಟು ಪರೀಕ್ಷೆಗೆ ಹಾಜರಾದರು.

ಮುಸ್ಲಿಂ ವಿದ್ಯಾರ್ಥಿನಿಯರು ಸೇರಿದಂತೆ ಮಕ್ಕಳನ್ನು ಪರೀಕ್ಷಾ ಸೆಂಟರ್‌ಗೆ ಕರೆದುಕೊಂಡು ಬಂದಿದ್ದರು. ಶಿಕ್ಷಣ ಮುಖ್ಯ, ಮಕ್ಕಳೆಲ್ಲ ಪರೀಕ್ಷೆಯಲ್ಲಿ ಭಾಗವಹಿಸಿ ಎಂದು ಮುಸ್ಲಿಂ ಪ್ರಮುಖರು ಕರೆಕೊಟ್ಟಿದ್ದರು. ಪರೀಕ್ಷಾ ಕೇಂದ್ರಕ್ಕೆ ಪೋಷಕರಿಗೆ ಅನುಮತಿ ಇಲ್ಲ. ಬುರ್ಕಾ ಮತ್ತು ಹಿಜಾಬ್ ತೆಗೆದು ಪರೀಕ್ಷಾ ಕೊಠಡಿಗೆ ತೆರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಶಾಲೆಯಲ್ಲಿ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದು, ಪ್ರತಿಯೊಬ್ಬರನ್ನು ವಿಚಾರಿಸಿ ಒಳಗಡೆ ಬಿಡುತ್ತಿದ್ದರು.

ಬೆಳಗಾವಿಯಲ್ಲಿ ಇಲ್ಲ ಹಿಜಾಬ್ ಗೆ ಅವಕಾಶ!
ಬೆಳಗಾವಿ ಜಿಲ್ಲೆಯಲ್ಲೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭಗೊಂಡಿವೆ. ಬೆಳಗಾವಿ-ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹೊಂದಿರುವ ಜಿಲ್ಲೆಯಲ್ಲಿ 78 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸೋಮವಾರ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಹಿಜಾಬ ತೆಗೆದಿರಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಸ್ಥಳೀಯ ಶಾಸಕರು ಕೂಡ ವಿದ್ಯಾರ್ಥಿ ಗಳನ್ನು ಸ್ವಾಗತಿಸಲು ಆಗಮಿಸಿದ್ದು ವಿಶೇಷವಾಗಿತ್ತು.

WhatsApp
Facebook
Telegram
error: Content is protected !!
Scroll to Top