ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ನಾಲ್ಕನೆ ದಿನಕ್ಕೆ ಮುಂದುವರಿದ ಉತ್ತರ ಕನ್ನಡ ಮೊಗೇರ್‌ ಸಮಾಜದ ಪ್ರತಿಭಟನೆ

ಶಾಸಕ ಸುನಿಲ್‌ ನಾಯ್ಕ ಸೇರಿದಂತೆ ಕಾಂಗ್ರೇಸ್‌ ಹಾಗು ವಿವಿದ ಸಂಘಟನೆಗಳಿಂದ ಮೊಗೇರ್‌ ಸಮುದಾಯದ ಹೊರಾಟಕ್ಕೆ ಬೆಂಬಲಕ್ಕೆ :

ಭಟ್ಕಳ ತಾಲೂಕಿನಲ್ಲಿ ನಾಲ್ಕು ದಿನಗಳಿಂದ ಮೊಗೇರ್‌ ಸಮುದಾಯವು ತಾಲೂಕಾಡಳಿತ ಮುಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು ದಿನದಿಂದ ದಿನಕ್ಕೆ ಮೊಗೇರ್‌ ಸಮಾಜದ ಪ್ರತಿಭಟನಾ ಕಾವು ಹೆಚ್ಚುತ್ತಿದ್ದು ನಾಲ್ಕನೆಯ ದಿನವಾದ ಶನಿವಾರವಾದ ಇಂದು ಕಾಂಗ್ರೇಸ್‌ ಸೇರಿದಂತೆ ಶಾಸಕ ಸುನಿಲ್‌ ನಾಯ್ಕ ಮತ್ತು ಇತರ ಸಾಮಾಜಿಕ ಸಂಘಟನೆಗಳು ಮೊಗೇರ್‌ ಸಮಾಜದ ಬೆಂಬಲಕ್ಕೆ ನಿಂತಿದ್ದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿಸದೆ ಬಿಡೆವು ಎಂಬಂತೆ ಸರಕಾರಕ್ಕೆ ಸೆಡ್ಡುಹೊಡೆದು ನಿಂತಿರುವುದು ವರದಿಯಾಗಿದೆ

ಮೊಗೇರ್‌ ಸಮಾಜದ ಪ್ರತಿಭಟನೆಗೆ ಬೆಂಬಲ ನೀಡಿದ ಶಾಸಕ ಸುನಿಲ್‌ ನಾಯ್ಕ

ಜಿಲ್ಲೆಯಾಧ್ಯಂತ ಮೊಗೇರ್‌ ಸಮಾಜವು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದು ಇಡಿ ಜಿಲ್ಲೆಯಲ್ಲಿ ಸರಕಾರದ ವಿರುದ್ದ ಮೊಗೇರ್‌ ಸಮಾಜ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದೆ ಶನಿವಾರವಾದ ಇಂದು ಶಾಸಕ ಸುನಿಲ್‌ ನಾಯ್ಕ ಹಾಗು ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಸಂತೋಷ ನಾಯ್ಕ ಮತ್ತು ಇನಾಯತ್‌ ಉಲ್ಲಾ ಅಭಿಮಾನಿ ಬಳಗವು ಕೂಡಾ ಮೊಗೇರ್‌ ಸಮಾಜದ ಬೆಂಬಲಕ್ಕೆ ನಿಂತಿದ್ದು ಎಲ್ಲಿಯವರೆಗೆ ಮೊಗೇರ್‌ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ದೊರೆಯುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮ ಹೋರಾಟಕ್ಕೆ ಜೊತೆಯಾಗಿರುತ್ತೆವೆ ಎಂಬ ಮಾತನ್ನು ಹೇಳಿದ್ದಾರೆ .

ಈ ಸಂದರ್ಬದಲ್ಲಿ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ಮೊಗೇರ್‌ ಸಮಾಜಕ್ಕೆ ಮೊದಲಿನಿಂದಲೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದಿತ್ತು ಆದರೆ ಈ ಸರಕಾರ ಅವರ ಜಾತಿ ಪ್ರಮಾಣ ಪತ್ರವನ್ನು ಏಕಾಏಕಿ ರದ್ದು ಮಾಡಿದ್ದು ಇದು ತುಂಬ ಖಂಡನಿಯ ಸರಕಾರದ ಈ ನೀತಿ ಮೊಗೇರ ಸಮುದಾಯವನ್ನು ಸಂಕಷ್ಟಕ್ಕೆ ತಳ್ಳಿದೆ ನಮ್ಮ ಕಾಂಗ್ರೇಸ್‌ ಪಕ್ಷ ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ನಮ್ಮ ಪಕ್ಷ ಮೊಗೇರ್‌ ಸಮುದಾಯದ ಜೋತೆಯಲ್ಲಿರುತ್ತದೆ ಎಲ್ಲಿಯವರೆಗೆ ಮೊಗೇರ್‌ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ದೊರೆಯುದಿಲ್ಲವೋ ಅಲ್ಲಿಯವರೆಗೂ ಈ ಸಮಾಜ ಹೊರಾಟ ನಡೆಸುತ್ತದೆ ಇವರ ಹೊರಾಟಕ್ಕೆ ನಮ್ಮ ಪಕ್ಷದ ಬೆಂಬಲವಿದೆ ಎಂದು ಹೇಳಿದರು

ಶಾಸಕ ಸುನಿಲ್‌ ನಾಯ್ಕ ಈ ಬಗ್ಗೆ ಮಾತನಾಡಿ ನನಗೆ ಮೊಗೇರ್‌ ಸಮುದಾಯದ ಬಗ್ಗೆ ಗೌರವವಿದೆ ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯಲೆ ಬೇಕು ಈ ಬಗ್ಗೆ ನಾನು ಸರಕಾರದ ಗಮನಕ್ಕೆ ತರುತ್ತೆನೆ ವಿಧಾನ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸುತ್ತೆನೆ ಮೊಗೇರ್‌ ಸಮಾಜದ ಹೋರಾಟ ನ್ಯಾಯ ಬದ್ದವಾಗಿದೆ ಎಂದು ಹೇಳಿದರು

ಇನಾಯತ್‌ ಉಲ್ಲಾ ಶಾಬಂದ್ರೀ ಅಭಿಮಾನಿ ಬಳಗವು ಕೂಡಾ ಮೊಗೇರ್‌ ಸಮಾಜದ ಹೊರಾಟಕ್ಕೆ ಬೆಂಬಲ ಸೂಚಿಸಿದ್ದು ಈ ಬಗ್ಗೆ ಅವರು ಮಾತನಾಡಿ ನಿಮ್ಮ ಹೊರಾಟ ನ್ಯಾಯೋಚಿತವಾದ ಹೊರಾಟವಾಗಿದೆ ನಿಮ್ಮ ಜೋತೆಯಲ್ಲಿ ನಾವಿದ್ದೆವೆ ಹೊರಾಟಕ್ಕೆ ಮೊದಲು ನ್ಯಾಯ ಸಿಗದೆ ಇದ್ದರು ಕೂಡಾ ನಿರಂತರ ಹೊರಾಟ ಮಾಡುವುದರಿಂದ ನ್ಯಾಯ ಸಿಕ್ಕೆ ಸಿಗುತ್ತದೆ ನಿಮಗೆ ಆಗಿರುವ ಅನ್ಯಾಯವನ್ನು ನಾವು ಉಗ್ರವಾಗಿ ಕಂಡಿಸುತ್ತೆವೆ ಎಂದು ಹೇಳಿದರು

ಇಲ್ಲಿ ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೊಟಾ ಶ್ರೀನಿವಾಸ ಪುಜಾರಿಯವರು ಸರ್ಪನಕಟ್ಟೆಯಲ್ಲಿ ಮೀನು ಮಾರುಕಟ್ಟೆ ಉದ್ಗಾಟನೆಗೆ ಬಂದಿದ್ದು ತಾಲೂಕಿನಲ್ಲಿ ಮೀನುಗಾರ ಸಮುದಾಯ ಜಾತಿ ಪ್ರಮಾಣಪತ್ರಕ್ಕಾಗಿ ಹೊರಾಟ ನಡೆಸುತ್ತಿರುವ ಬಗ್ಗೆ ತಿಳಿದಿದ್ದರು ಕೂಡ ಸೌಜನ್ಯಕ್ಕೂ ಅವರು ಹೊರಾಟ ಸ್ಥಳಕ್ಕೆ ಬೇಟಿ ಕೊಟ್ಟಿರುವುದಿಲ್ಲಾ ಬದಲಾಗಿ ಸಚಿವರು ನಮ್ಮ ಜಾತಿ ಪ್ರಮಾಣ ಪತ್ರ ನೀಡುವಿಕೆಯ ಬಗ್ಗೆ ಮಾಧ್ಯಮದ ಮುಂದೆ ಅಡ್ಡಗೊಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ ಶಾಸಕ ಸುನಿಲ್‌ ನಾಯ್ಕ ಕನಿಷ್ಟ ಪಕ್ಷ ನಮಗೆ ದೈರ್ಯವನ್ನು ತುಂಬಿದ್ದಾರೆ ಉಸ್ತುವಾರಿ ಸಚಿವರ ನಡೆ ನಮಗೆ ತುಂಬ ಕೇದವನ್ನು ತಂದಿದೆ ಎಂದು ಮೊಗೇರ್‌ ಸಮುದಾಯದವರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ

ಒಟ್ಟಾರೆ ಮೊಗೇರ್‌ ಸಮುದಾಯವು ಇಂದು ನಮ್ಮ ಹಕ್ಕನ್ನು ನಮಗೆ ಕೊಡಿ ಎಂದು ಬೀದಿಗೆ ಬಂದು ಪ್ರತಿಭಟನೆಯನ್ನು ಮಾಡುತ್ತಿದ್ದು ಈ ಪ್ರತಿಭಟನೆ ಮುಂದೆ ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡ ಬೇಕಾಗಿದೆ

WhatsApp
Facebook
Telegram
error: Content is protected !!
Scroll to Top