Beast: ‘ಕೆಜಿಎಫ್​​ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ಎಂಟ್ರಿ; ಗೆಲ್ಲೋದು ಯಶ್ ಎಂದ ಫ್ಯಾನ್ಸ್

Beast Release Date | KGF 2: ಯಶ್ ನಟನೆಯ ‘ಕೆಜಿಎಫ್ 2’ ದೀರ್ಘಕಾಲದ ಹಿಂದೆಯೇ ಏಪ್ರಿಲ್ 14ರಂದು ತೆರೆಕಾಣುವುದಾಗಿ ಘೋಷಿಸಿತ್ತು. ವಿಜಯ್ ನಟನೆಯ ‘ಬೀಸ್ಟ್’ ಕೂಡ ಅಂದೇ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡ ಕೆಜಿಎಫ್ 2ಗೆ ಒಂದು ದಿನ ಮೊದಲೇ ಚಿತ್ರ ರಿಲೀಸ್ ಮಾಡಲು ನಿರ್ಧರಿಸಿದೆ.

ದಕ್ಷಿಣ ಭಾರತದಲ್ಲಿ ಈಗ ಸ್ಟಾರ್ ಚಿತ್ರಗಳು ಸಾಲುಸಾಲಾಗಿ ರಿಲೀಸ್ ಆಗುತ್ತಿವೆ. ಮಾರ್ಚ್ 25ರಂದು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ರಿಲೀಸ್ ಆಗಲಿದ್ದು, ಯಶ್ ನಟನೆಯ ‘ಕೆಜಿಎಫ್ 2’ (KGF 2) ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಈ ನಡುವೆ ವಿಜಯ್ ನಟನೆಯ ‘ಬೀಸ್ಟ್’ ಕೂಡ ಏಪ್ರಿಲ್ 14ರಂದೇ ತೆರೆಕಾಣಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ದಕ್ಷಿಣದ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆಯೇ ಎಂಬ ಅನುಮಾನ ಹುಟ್ಟುಹಾಕಿತ್ತು. ಇದೀಗ ‘ಬೀಸ್ಟ್’ ಚಿತ್ರತಂಡ ರಿಲೀಸ್ ಡೇಟ್​ಅನ್ನು (Beast Release Date) ಅಧಿಕೃತವಾಗಿ ಘೋಷಿಸಿದೆ. ಅಚ್ಚರಿಯೆಂಬಂತೆ ‘ಕೆಜಿಎಫ್​ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ತೆರೆಕಾಣಲಿದೆ. ಅರ್ಥಾತ್ ಏಪ್ರಿಲ್ 13ರಂದು ವಿಜಯ್ ನಟನೆಯ ಚಿತ್ರ ಎಲ್ಲೆಡೆ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಕುರಿತು ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಟ್ವೀಟ್ ಮಾಡಿದ್ದು, ಹೊಸ ಪೋಸ್ಟರ್ ಮೂಲಕ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಹೊಸ ಪೋಸ್ಟರ್​ನಲ್ಲಿ ವಿಜಯ್ ಗನ್ ಹಿಡಿದು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಬೀಸ್ಟ್’ ಚಿತ್ರವನ್ನು ನೆಲ್ಸನ್​ ದಿಲೀಪ್​ಕುಮಾರ್ ನಿರ್ದೇಶಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಅನಿರುದ್ಧ್ ಸಂಗೀತ ನೀಡುತ್ತಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಹಿಟ್ ಆಗಿವೆ.

WhatsApp
Facebook
Telegram
error: Content is protected !!
Scroll to Top