ಭಟ್ಕಳ ಪಿ ಎಲ್‌ ಡಿ ಭ್ಯಾಂಕ್‌ ಸಿಬ್ಬಂದಿ ನೇಮಕ ಪ್ರಕ್ರಿಯೆಯ ನಿರ್ದೇಶಕ ಮಂಡಳಿ ಅರ್ಜಿ ವಜಾಗೊಳಿಸಿದ ಹೈಕೊರ್ಟ ದ್ವಿಸದಸ್ಯ ಪೀಠ

ಡೊಲಾಯಮಾನ ಪರಿಸ್ಥಿತಿಯಲ್ಲಿ ಪಿ ಎಲ್‌ ಡಿ ಬ್ಯಾಂಕನ 24 ಸಿಬ್ಬಂದಿಗಳು

ಭಟ್ಕಳ ತಾಲೂಕಿನ ಪಿ ಎಲ್‌ ಡಿ ಭ್ಯಾಂಕಿನ 24 ಸಿಬ್ಬಂದಿ ನೇಮಕಾತಿಯಲ್ಲಿ ಕಾನೂನು ಪಾಲನೆ ಮಾಡಿಲ್ಲ ಎಂಬ ಕಾರಣದಿಂದ ನೇಮಕಾತಿ ಅಸಿಂದುಗೊಳಿಸಿದ ಆದೇಶವನ್ನು ಶಾಸಕ ಸುನಿಲ್‌ ನಾಯ್ಕ ಅವರ ಆಧ್ಯಕ್ಷತೆಯ ಪಿ ಎಲ್‌ ಡಿ ಬ್ಯಾಂಕ್‌ ಆಡಳಿತ ಮಂಡಳಿ ಹೈಕೊರ್ಟ ಮೆಟ್ಟಿಲೇರಿದ್ದರು ಇದಿಗ ಹೈಕೊರ್ಟ ಇವರ ಅರ್ಜಿಯನ್ನು ವಜಾಗೊಳಿಸಿದ್ದು ಪಿ ಎಲ್‌ ಡಿ ಬ್ಯಾಂಕನ 24 ನೌಕರರು ಸಂಕಷ್ಟದಲ್ಲಿದ್ದಾರೆ

ಈ ಹಿಂದೆ ಪಿ ಎಲ್‌ ಡಿ ಬ್ಯಾಂಕ್‌ 24 ನೌಕರರನ್ನು ನೇಮಕ ಮಾಡಿಕೊಳ್ಳುವ ಸಂದರ್ಬದಲ್ಲಿ ಸಹಕಾರಿ ಸಂಘದ ಕಾನೂನನ್ನು ಪಾಲಿಸಿಲ್ಲ ಎಂದು ಜೆಡಿಎಸ್‌ ಯುವ ಘಟಕದ ಮಾಜಿ ಉಪಾದ್ಯಕ್ಷ ಶಂಕರ್‌ ನಾಯ್ಕ ಬೆಟ್ಕೂರ್‌ ಅವರು ಅರ್ಜಿ ಸಲ್ಲಿಸಿದ್ದರು ಈ ನೇಮಕಾತಿಯನ್ನು ಅಸಿಂದುಗೊಳಿದ್ದು ಜಿಲ್ಲಾ ಸಹಾಯಕ ನಿಬಂದಕರು ಆದೇಶವನ್ನು ಹೊರಡಿಸಿದ್ದರು ಈ ಆದೇಶವನ್ನು ಜಂಟಿ ನಿಬಂದಕರ ನ್ಯಾಯಾಲಯದಲ್ಲಿ ಪ್ರಶ್ನೀಸಲಾಗಿತ್ತು ಆದರೆ ನ್ಯಾಯಾಲಯ ಅಸಿಂದು ಆದೇಶವನ್ನು ಎತ್ತಿ ಹಿಡಿದಿತ್ತು ಇದರ ವಿರುದ್ದ ಭಟ್ಕಳ ಪಿ ಎಲ್‌ ಡಿ ಭ್ಯಾಂಕ್‌ ಅಧ್ಯಕ್ಷ ಶಾಸಕ ಸುನಿಲ್‌ ನಾಯ್ಕ ಅವರ ಆಡಳಿತ ಮಂಡಳಿ ಹೈಕೊರ್ಟ ಮೆಟ್ಟಿಲನ್ನು ಎರಿದ್ದರು ಇದೀಗ ಹೈಕೊರ್ಟ ಕೂಡಾ ಸುನಿಲ್‌ ನಾಯ್ಕ ಅಧ್ಯಕ್ಷತೆಯ ಪಿ ಎಲ್‌ ಡಿ ಬ್ಯಾಂಕ್‌ ಆಡಳಿತ ಮಂಡಳಿಯ ಮೆಲ್ಮನವಿ ಅರ್ಜಿಯನ್ನು ಸಾರಾಸಗಾಟಾಗಿ ವಜಾಗೊಳಿಸಿತು ಇದರಿಂದ ಪಿ ಎಲ್‌ ಡಿ ಬ್ಯಾಂಕ್‌ ಆಡಳಿತ ಮಂಡಳಿಗೆ ಕಾನೂನಿನ ಬಿಸಿ ತಾಗಿದ್ದಲ್ಲದೆ ಭಟ್ಕಳ ಪಿ ಎಲ್‌ ಡಿ ಬ್ಯಾಂಕ್‌ ನ 24 ನೌಕರರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಇದೀಗ ಈ ಪ್ರಕರಣ ಸುಪ್ರೀಮ್‌ ಕೊರ್ಟ ಮೆಟ್ಟಿಲನ್ನು ಏರುವ ಸಾಧ್ಯತೆ ಇದೆ

ಈ ಬಗ್ಗೆ ಪಿ ಎಲ್‌ ಡಿ ಬ್ಯಾಂಕ್‌ ನೌಕರರ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕಾನೂನು ಹೋರಾಟವನ್ನು ನಿರಂತರವಾಗಿ ನಡೆಸುತ್ತ ಬಂದಿರುವ ಶಂಕರ್‌ ನಾಯ್ಕ ಬೆಟ್ಕೂರ್‌ ಅವರು ಈ ಬಗ್ಗೆ ಮಾತನಾಡಿ ತಾಲೂಕಿನಲ್ಲಿ ರೈತ ಬ್ಯಾಂಕ್‌ ಒಂದು ಇದೆ ಅಂದರೆ ಅದು ಭಟ್ಕಳ ಪಿ ಎಲ್‌ ಡಿ ಬ್ಯಾಂಕ್‌ ಆಗಿರುತ್ತದೆ ಆದರೆ ಈ ಬ್ಯಾಂಕ್‌ ಇಂದು ಕನಿಷ್ಟ ಸಾಮಾನ್ಯ ಜ್ಙಾನ ಇಲ್ಲದವರ ಕೈಯಲ್ಲಿ ಆಡಳಿತ ನಡೆಯುತ್ತಿದೆ ಯಾಕೆಂದರೆ ಆಡಳಿತ ಮಂಡಳಿ ಠರಾವಿನ ಮೂಲಕ ಕಾನೂನು ಬಾಹಿರವಾಗಿ 24 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ ಈ ಬಗ್ಗೆ ನಾನು ಡಿ ಆರ್‌ ಮುಂದೆ ಅರ್ಜಿ ಸಲ್ಲಿಸಿರುತ್ತೆನೆ ಅವರು 68 ಅಡಿಯಲ್ಲಿ ಸ್ಪಷ್ಟ ಉಲ್ಲಂಗನೆಯಾಗಿದೆ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದರು ಆಗ ಈ ಆಡಳಿತ ಮಂಡಳಿ 106 ಅಡಿಯಲ್ಲಿ ಜಾಯಿಂಟ್‌ ರಜಿಸ್ಟರ್‌ ಅವರಲ್ಲಿ ಮೆಲ್ಮನವಿ ಸಲ್ಲಿಸುತ್ತಾರೆ ಜಾಯಿಂಟ್‌ ರಜಿಸ್ಟರ್‌ ಈ ಆಡಳಿತ ಕಮಿಟಿಯವರ ಅರ್ಜಿಯನ್ನು ವಜಾಮಾಡುತ್ತದೆ ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್‌ ಆಡಳಿತ ಮಂಡಳಿ ಹೈಕೊರ್ಟ ಎಕ ಸದಸ್ಯ ಪೀಠಕ್ಕೆ ಮೆಲ್ಮನವಿ ಸಲ್ಲಿಸುತ್ತದೆ ಆದರೆ ಈ ಪೀಠವು ನೌಕರರ ನೇಮಕಾತಿ ಅನರ್ಹಗೋಳಿಸಿ ಎಂಬ ಆದೇಶವನ್ನು ನೀಡುತ್ತದೆ ಆದರೆ ಪುನಃ ಈ ಬ್ಯಾಂಕ್‌ ಆಡಳಿತ ಮಂಡಳಿ ಹೈಕೊರ್ಟನ ದ್ವಿಸದಸ್ಯ ಪೀಠಕ್ಕೆ ಮೆಲ್ಮನವಿ ಸಲ್ಲಿಸುತ್ತಾರೆ ಆದರೆ ಮಾನ್ಯ ಹೈಕೊರ್ಟಿನ ದ್ವಿಸದಸ್ಯ ಪೀಠವು ಸಹ ಇವರ ಮೆಲ್ಮನವಿಯನ್ನು ವಜಾಗೊಳಿಸಿರುತ್ತದೆ ಬ್ಯಾಂಕಿನಲ್ಲಿ ಇಷ್ಟೇಲ್ಲಾ ಅವ್ಯವಹಾರಗಳು ನಡೆಯುತ್ತಿದ್ದರು ಈ ಬಗ್ಗೆ ಗಮನ ಹರಿಸದೆ ಡೆಪ್ಯೂಟಿ ರಜಿಷ್ಟರ್‌ ಆಡಳಿತ ಮಂಡಳಿಗೆ ಸಪೋರ್ಟ ಮಾಡುತ್ತಿದ್ದಾರೆ ಭಟ್ಕಳ ಪಿ ಎಲ್‌ ಡಿ ಬ್ಯಾಕ್‌ ಸಂಸ್ಥೆಯನ್ನು ಅದೋಗತಿಗೆ ತಳ್ಳುವ ಕೆಲಸ ಡ್ಯೆಪ್ಯೂಟಿ ರಜಿಷ್ಟರ್‌ ನಡೆಸುತ್ತಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು .

ಪಿ ಎಲ್‌ ಡಿ ಬ್ಯಾಂಕ್‌ ಅಧ್ಯಕ್ಷ ಸುನಿಲ್‌ ನಾಯ್ಕ ಆಡಳಿತ ಪಕ್ಷದ ಶಾಸಕರೂ ಆಗಿರುವುದರಿಂದ ಈ ಪ್ರಕರಣದಲ್ಲಿ ಸರಕಾರ ಯಾವ ರೀತಿ ತನ್ನಪಾತ್ರ ನಿಭಾಯಿಸುತ್ತದೆ ಎನ್ನುವ ಕೂತೂಹಲ ಜನ ಸಾಮಾನ್ಯರಲ್ಲಿ ಹುಟ್ಟುಹಾಕಿದೆ ಹಾಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯಲ್ಲಿ ಪಿ ಎಲ್‌ ಡಿ ಬ್ಯಾಂಕ್‌ ಹೈ ಕೊರ್ಟ ಮೆಟ್ಟಿಲನ್ನು ಎರಿದೆ ಈ ಕೊರ್ಟು ಕಛೇರಿಯ ವೆಚ್ಚಕ್ಕೆ ಸಂಸ್ಥೆಯ ಹಣವೆ ಪೋಲಾಗಿದೆಯೋ ಅಥವಾ ಅಧ್ಯಕ್ಷರು ನಿರ್ದೇಶಕರೆ ತಮ್ಮ ಸ್ವಂತಃ ಹಣವನ್ನು ಬರಿಸಿದ್ದಾರೊ? ಇಗಂತು ಈ ನೇಮಕಾತಿ ಸಂಬಂದ ಈ ಭ್ಯಾಂಕ್‌ ಸುಪ್ರೀಮ್‌ ಕೊರ್ಟ ಮೆಟ್ಟಿಲೇರುವ ಸಾಧ್ಯತೆಗಳೆ ಹೆಚ್ಚಿದೆ ಮುಂದೆ ಇದಕ್ಕಾಗುವ ಖರ್ಚು ಬ್ಯಾಂಕು ಬರಿಸುತ್ತದೆಯೋ? ಅಥವಾ ಅಧ್ಯಕ್ಷರು ನಿರ್ದೇಶಕರು ತಾವೆ ಸ್ವತಃ ಬರಿಸುತ್ತಾರೋ? ಒಂದು ವೇಳೆ ಬ್ಯಾಂಕ್‌ ಬರಿಸುವುದಾದರೆ ಇದು ದುಂದು ವೆಚ್ಚವಲ್ಲವೇ ಇಷ್ಟೇಲ ಗೊಂದಲಗಳನ್ನು ಮಾಡಿಕೊಳ್ಳುವ ಬದಲು ಆಡಳಿತ ಮಂಡಳಿಯು ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವಾಗ ಕಾನೂನನ್ನು ಗಣನೆಗೆ ತೆಗೆದುಕೊಂಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲಾ ಅಲ್ಲವೆ ಒಟ್ಟಾರೆ ಇಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ

WhatsApp
Facebook
Telegram
error: Content is protected !!
Scroll to Top